fbpx
ದೇವರು

ಭಗವಂತನಾದ ಶಿವನ ಮೂರನೇ ಕಣ್ಣಿಂದ ಹುಟ್ಟಿ ಭೈರವ ದೇವನಾಗಿ ಅವತರಿಸಿ ನಂತರ ಬೇತಾಳನಾದ ಕಥೆ

ಭಗವಂತನಾದ ಶಿವನು  ಭೈರವ ದೇವನಾಗಿ ಅವತರಿಸಿದ ನಂತರದ  ಕಥೆ.

 

ಭೈರವ ದೇವನು ಸಹ ಶಿವನಿಂದಲೇ ರಚಿಸಲ್ಪಟ್ಟವನು ಮತ್ತು ಭೈರವನು ಸಹ ಶಿವನ ಮೂರನೇ ಕಣ್ಣಿಂದ ಹುಟ್ಟಿದವನು. ಅವನು ಸಹ ಶಿವನ ಅಂಶವಾಗಿದ್ದನು ಅವನೇ ಭೈರವ ದೇವನು. ಬ್ರಹ್ಮನಿಗೆ ಐದು ತಲೆಗಳಿದ್ದವು. ಶಿವನ ಆದೇಶ ಮತ್ತು ಸೂಚನೆಯಂತೆ ಭೈರವ ದೇವನು ಬ್ರಹ್ಮನ ಐದನೇ ತಲೆಯನ್ನು ಕಡಿದನು. ಆಗ ಬ್ರಹ್ಮನು  ಕೇವಲ ನಾಲ್ಕು ತಲೆಗಳನ್ನು ಹೊಂದಿದ್ದನು. ಬ್ರಹ್ಮನ ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ಭೈರವ ದೇವನು ಮೂರು ಲೋಕಗಳಲ್ಲಿಯೂ ತಿರುಗಾಡಲು ಪ್ರಾರಂಭಿಸಿದನು. ಭಗವಂತನಾದ ಬ್ರಹ್ಮನ ತಲೆಯನ್ನು ಕಡಿದು ಛಿದ್ರಗೊಳಿಸಿ ಅವನ ಈ ಪಾಪಗಳನ್ನು ಸರಿಪಡಿಸಿಕೊಳ್ಳಲು ಅವನು ಶಿವನಲ್ಲಿ ಭಿಕ್ಷೆ ಬೇಡಿ ಕೊಳ್ಳುತ್ತಿದ್ದನು.

 

 

ಭೈರವನು ಹೀಗೆ ಮೂರು ಲೋಕಗಳನ್ನು ಸುತ್ತಾಡುತ್ತಾ ಕೊನೆಗೆ  ವಿಷ್ಣು ಲೋಕವನ್ನು ಪ್ರವೇಶಿಸಿದನು. ಭೈರವ ದೇವನನ್ನು ತುಂಬು ಹೃದಯದಿಂದ ಲಕ್ಷ್ಮೀ ದೇವಿಯು ಮತ್ತು ಭಗವಂತನಾದ ಶ್ರೀಹರಿ ವಿಷ್ಣುವು ಇಬ್ಬರೂ ತುಂಬು ಹೃದಯದಿಂದ ಭೈರವರನ್ನು ಬರಮಾಡಿಕೊಂಡರು. ದೇವಿ ಲಕ್ಷ್ಮೀಯು ವಿದ್ಯೆ ಎನ್ನುವ ಹೆಸರಿನ ಕಲಿಕೆಯನ್ನು ಭೈರವನಿಗೆ ಪ್ರಧಾನಿಸಿದಳು .ಆ ವಿದ್ಯೆಯನ್ನು ಕರಗತ ಮಾಡಿಕೊಂಡು ಇದರಿಂದ ಭೈರವನ  ಎಲ್ಲಾ ಆಸೆಗಳು ಸಹ ಪೂರ್ಣಗೊಳ್ಳುತ್ತವೆ.ಭೈರವನ ಇದರಿಂದ ಬಹಳ ಸಂತೋಷಗೊಂಡನು.

ಈ ಕಾಣಿಕೆಯ ಶಕ್ತಿಯಿಂದ ಭಗವಂತನಾದ ಶಿವನು ಉಗ್ರವಾದವಳನ್ನು  ಸೃಷ್ಟಿಸಿದನು.ಅವಳ ಹೆಸರು ಬ್ರಹ್ಮಹತ್ಯೆ ಮತ್ತು  ಶಿವನು ಭೈರವನಿಗೆ ಕಾಶಿಗೆ ತೆರಳಲು ಸೂಚಿಸಿದನು.  ಭಗವಂತನಾದ ಶಿವನ ಪ್ರಕಾರ ಪಾಪ ಕರ್ಮಗಳನ್ನು ಮಾಡಿದ ಭೈರವನ ಬದ್ಧವಾಗಿದ್ದೇನೆ ಅವನು ಈ ಕೆಲಸವನ್ನು ಮಾಡಿ ಮುಗಿಸುವುದರಲ್ಲಿ ಯಶಸ್ವಿಯಾಗುತ್ತಾನೆ ಎಂದು ಹೇಳಿದನು. ಭೈರವನು  ದೇವಿ ಲಕ್ಷ್ಮಿಯ ಆಶೀರ್ವಾದ ಪಡೆದ ನಂತರ  ವಿಷ್ಣುವಿನ ಅಪ್ಪಣೆಯನ್ನು ಪಡೆದುಕೊಂಡು ಅಲ್ಲಿಂದ ಕಾಶಿಯ ಕಡೆಗೆ ಹೊರಟನು.

 

 

ಅವನು ಅಲ್ಲಿಂದ ತೆರಳಿದ ನಂತರ ಬ್ರಹ್ಮಹತ್ಯಾಳಿಗೆ   ಭೈರವನ ಹಿಂದೆ ತೆರಳುವುದನ್ನು ನಿಲ್ಲಿಸು ಎಂದು ಹೇಳಿದರು , ಆದರೆ ಅವಳು ನಿರಾಕರಿಸಿ ಹೀಗೆ ಹೇಳಿದಳು…. ನಾನು ಭಗವಂತನಾದ ಶಿವನ ಆಜ್ಞೆಯನ್ನು ಪಾಲಿಸುತ್ತಿದ್ದೇನೆ ಅಷ್ಟೆ ಬೇರೇನೂ ಅಲ್ಲ .

ಭೈರವನು  ಕಾಶಿಗೆ ತೆರಳಿದಾಗ ಬ್ರಹ್ಮಹತ್ಯೆಯ ಕೂಡ ಅಲ್ಲಿಯೇ ಆ ನಗರಕ್ಕೆ ಬಂದು ಸೇರಿದಳು. ಆದರೆ ಅವಳಿಗೆ ಆ ಭೈರವನು  ಹೋಗಿರುವ ಸ್ಥಳಕ್ಕೆ ಪ್ರವೇಶ ಮಾಡಲು ಸಾಧ್ಯವಾಗುವುದಿಲ್ಲ, ಯಾಕೆಂದರೆ ಶಿವನ ಶಕ್ತಿ ಇರುವ ಕಾರಣ ಅವಳು ಇಲ್ಲಿಗೆ (ಕಾಶಿಗೆ) ಬರುವ ಬದಲಾಗಿ ಅವಳು ಪಾತಾಳ ಲೋಕಕ್ಕೆ ಪ್ರವೇಶ ಮಾಡಿದಳು.

 

 

ಭೈರವನು  ಕಾಶಿಗೆ ಹೋದ ತಕ್ಷಣವೇ ಅವನು ಬ್ರಹ್ಮನ ತಲೆಯನ್ನು ಕಡಿದು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದ ಆ ತಲೆಯನ್ನು ನೆಲದ ಮೇಲೆ ಇಟ್ಟನು. ಆಗ ಭೈರವನು ತಾನು ಮಾಡಿದ ಪಾಪ ಕರ್ಮಗಳಿಂದ ಮುಕ್ತಿ ಪಡೆದನು ನಂತರದ ದಿನಗಳಲ್ಲಿ ಆ ಸ್ಥಳವು “ಕಪಾಳ ಮೋಚನ” ಅಥವಾ “ಬ್ರಹ್ಮಕಪಾಲ” ಎಂದು ಈ ಹೆಸರಿನಿಂದಲೇ ಪ್ರಖ್ಯಾತಿಯಾಗಿ ಹಿಂದೂ ಧರ್ಮದವರು ಪವಿತ್ರ ಯಾತ್ರಾ ಸ್ಥಳವಾಗಿ, ಈಗ ಈ ಸ್ಥಳ ಹಿಂದೂ ಧರ್ಮದವರ ಪವಿತ್ರ ತೀರ್ಥಯಾತ್ರೆಯ ಸ್ಥಳವಾಗಿದೆ.

ಹಿಂದೂ ಧರ್ಮದಲ್ಲಿ ನಾಯಿಗಳನ್ನು ಪೂಜಿಸಲಾಗುತ್ತದೆ ಯಾಕೆ ಗೊತ್ತೇ ? ಶಿವ ಮತ್ತು ಭೈರವ ದೇವನ ಜೊತೆಗೆ ನೇರವಾಗಿ ಸಂಪರ್ಕ ಹೊಂದಿದೆ ಹೇಗೆ ಗೊತ್ತೇ ?ನಾಯಿಗಳ ಮೇಲೆ ದುಷ್ಕೃತ್ಯ ಮಾಡಬಾರದು ಯಾಕೆ ಗೊತ್ತೇ ?

 

ಭೈರವನ ಬೇತಾಳದ ಅವತಾರದಲ್ಲಿ….

 

 

ಒಂದು ದಿನ ಭಗವಂತನಾದ ಶಿವನು ಮತ್ತು ಪಾರ್ವತಿ ದೇವಿಯು ಭೈರವನು ತಮ್ಮ ದ್ವಾರ ಬಾಗಿಲಿಗೆ ದ್ವಾರಪಾಲಕನಾಗಿ (ಕಾವಲುಗಾರನಾಗಿ) ಕೈಲಾಸವನ್ನು ರಕ್ಷಣೆ ಮಾಡಲು ಆದೇಶಿಸಿದರು. ಯಾವುದೋ ಒಂದು ಸಂದರ್ಭದಲ್ಲಿ ಪಾರ್ವತಿ ದೇವಿ ಭೈರವನ ಮುಂದೆ ಸಾಮಾನ್ಯ ಸ್ತ್ರೀಯಂತೆ ಅವತರಿಸಿದಳು ನಂತರ ಅವಳು ಕೈಲಾಸವನ್ನು ಪ್ರವೇಶಿಸಲು ಯತ್ನಿಸಿದಳು. ಆದರೆ ಭೈರವನು  ಅವಳು ಪಾರ್ವತಿ ದೇವಿ ಎಂದು ತಿಳಿಯದೆ ಅವಳನ್ನು ಸಾಮಾನ್ಯ ಸ್ತ್ರೀ ಎಂದು ತಿಳಿದುಕೊಂಡು ಅವಳು ಕೈಲಾಸ ಪ್ರವೇಶ ಮಾಡುವುದನ್ನು ತಡೆಹಿಡಿದು ನಿರಾಕರಿಸಿದನು ಪಾರ್ವತಿ ದೇವಿಯು ಅವನ ಮೇಲೆ ಕೋಪೋದ್ರಿಕ್ತಳಾಗಿ,  ಅವನಿಗೆ ಭೂಮಿಯ ಮೇಲೆ ಸಾಮಾನ್ಯ ಮನುಷ್ಯನಾಗಿ ಹುಟ್ಟಲು, ಜನ್ಮ ಪಡೆಯಲು ಶಾಪ ನೀಡಿದಳು.

 

 

ಭೈರವನು ಆಗ ಬೇತಾಳನ ಹೆಸರಿನಲ್ಲಿ ಜನಿಸಿದನು. ಬೇತಾಳನ ಮೇಲೆ ಕರುಣೆ ಮತ್ತು ಕಾಳಜಿಯಿಂದ ಭಗವಂತನಾದ ಶಿವ ಮತ್ತು ಪಾರ್ವತಿ ದೇವಿಯು ಮಹೇಶ ಸ್ವಾಮಿ ಮತ್ತು ಶಾರದಾ ದೇವಿಯಾಗಿ ಅವತರಿಸಿದರು.  ಅವರಿಬ್ಬರೂ ಭೈರವನ ಆರೈಕೆ ಮಾಡಿ ಅವನಿಗೆ ಮತ್ತೆ ದೇವನಾಗಲು ಸಹಾಯ ಮಾಡಿದರು .ಈ ಕಥೆಯು ಶಿವ ಮಹಾಪುರಾಣದ ಏಳನೇ ಸಂಹಿತದಲ್ಲಿ ಉಲ್ಲೇಖಿಸಲಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top