fbpx
ಧರ್ಮ

ಡಿಸೆಂಬರ್ 16 ನೇ ತಾರೀಖಿನಿಂದ ವಿವಾಹ, ಗೃಹಪ್ರವೇಶ, ಹೊಸತನ್ನು ಖರೀದಿ ಮಾಡುವುದು ಒಂದು ತಿಂಗಳುಗಳ ಕಾಲ ಬಂದ್!

ಡಿಸೆಂಬರ್ ಹದಿನಾರನೇ ತಾರೀಖಿನಿಂದ ಎಲ್ಲಾ ಶುಭ ಕೆಲಸಗಳುನ್ನೂ ಇನ್ನೂ ಒಂದು ತಿಂಗಳುಗಳ ಕಾಲ ಬಂದ್. ಯಾವುದೇ ರೀತಿಯ  ಶುಭ ಕಾರ್ಯಗಳು ವಿವಾಹ, ಗೃಹಪ್ರವೇಶ, ಹೊಸತನ್ನು ಖರೀದಿ ಮಾಡುವುದಕ್ಕೆ ಇದು ಶುಭ ಸಮಯವಲ್ಲ.

 

2017 ಡಿಸೆಂಬರ್ ಹದಿನಾರನೇ ತಾರೀಖಿನಿಂದ ಜನವರಿ 2018 ಹದಿನಾಲ್ಕನೇ ತಾರೀಖಿನವರೆಗೆ ಧನುರ್ಮಾಸವಿರುತ್ತದೆ. ಸೂರ್ಯನು ಈ ಒಂದು ತಿಂಗಳುಗಳ ಕಾಲ ಧನಸ್ಸು ರಾಶಿಯಲ್ಲಿ ಸ್ಥಿತನಿರುತ್ತಾನೆ. ಸೂರ್ಯನು ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಡಿಸೆಂಬರ್ ಹದಿನಾರನೇ ತಾರೀಖು ಪ್ರವೇಶ ಮಾಡಲಿದ್ದಾನೆ. ಇದರಿಂದ ಧನುರ್ಮಾಸ ಪ್ರಾರಂಭವಾಗುವುದು.ಈ ಮಾಸವನ್ನು ಮಲಮಾಸ  ಅಥವಾ ಕಾರ ಮಾಸ ಎಂದು ಸಹ ಕರೆಯಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಪ್ರಕಾರದ ಶುಭ ಕಾರ್ಯಗಳು ಮತ್ತು ಮಂಗಳ ಕಾರ್ಯಗಳನ್ನು ಮಾಡಬಾರದು.

 

 

ಧನಸ್ಸು ರಾಶಿಯ ಸ್ವಾಮಿ ದೇವಗುರು ಬೃಹಸ್ಪತಿಯಾಗಿದ್ದು ,ಈ ಸಮಯದಲ್ಲಿ ಗುರುವಿನ ಪ್ರಭಾವ ಶೂನ್ಯವಾಗುತ್ತದೆ. ಅಂದರೆ ಗುರುಗ್ರಹದ ಅಥವಾ ಗುರುದೇವನ ಪ್ರಭಾವ ,ಶಕ್ತಿ ಕಡಿಮೆಯಾಗಿ ಶಕ್ತಿ ಹೀನವಾಗುತ್ತದೆ. ಇದರಿಂದ ಈ ಮಾಸವನ್ನು ಶುಭ ಕಾರ್ಯಗಳನ್ನು ಮಾಡುವುದಕ್ಕೆ ವರ್ಜಿತ ಅಥವಾ ನಿಷೇಧ ಎಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡಿದರೆ ಯಾವುದೇ ಶುಭ ಫಲವೂ ಸಹ   ಪ್ರಾಪ್ತಿಯಾಗುವುದಿಲ್ಲ.

ಇದರ ಜೊತೆಗೆ ಡಿಸೆಂಬರ್ ಹದಿನೇಳನೇ ತಾರೀಕಿನಂದು ಶುಕ್ರ ಗ್ರಹವು ಸಹ ಅಸ್ತಂಗತನಾಗುತ್ತಿದ್ದಾನೆ.  2018 ಫೆಬ್ರವರಿ ಎರಡನೇ ತಾರೀಕಿನವರೆಗೆ ಶುಕ್ರನು ಆಸ್ತನಾಗಿರುತ್ತಾನೆ. ಡಿಸೆಂಬರ್ ಹದಿನಾರನೇ ತಾರೀಕಿನಂದು  ಫೆಬ್ರವರಿ ಎರಡನೇ ತಾರೀಕಿನವರೆಗೆ ಯಾವುದೇ ಶುಭ ಕೆಲಸ ಮತ್ತು ಕಾರ್ಯಗಳನ್ನು ಮಾಡಬಾರದು .

ಶಾಸ್ತ್ರ ಸಂಬಂಧಿತ ಕೆಲಸಗಳನ್ನು ಸಂಪ್ರದಾಯ ಬದ್ಧವಾಗಿ ಅದರ ಪ್ರಕಾರವೇ ಮಾಡಿದರೆ ಸುಖ, ಸಂತೋಷವಾಗಿ ಇರಬಹುದು ಎಂದು ಶಾಸ್ತ್ರ ಹೇಳುತ್ತದೆ. ಯಾವುದೇ ಶುಭ ಕೆಲಸವನ್ನು ಒಳ್ಳೆಯ ಶುಭ ಮುಹೂರ್ತವಿಲ್ಲದೆ ಮಾಡಬಾರದು. ಹೊಸ ಮನೆಯ ಗೃಹಪ್ರವೇಶ, ಹೊಸ ಮನೆ ಖರೀದಿ, ಹೊಸ ವಾಹನ ಖರೀದಿ, ವಿವಾಹ ವ್ಯಾಪಾರದ ಕೆಲಸಗಳಿಗೆ ಇವೆಲ್ಲವೂ ಶುಭ ಕಾರ್ಯಗಳೇ… ಆದರೆ ಈ ಧನುರ್ಮಾಸದಲ್ಲಿ ಈ ಒಂದು ತಿಂಗಳಿನಲ್ಲಿ ಯಾವ ಶುಭ ಕೆಲಸವನ್ನು ಸ್ವಲ್ಪ ದಿನಗಳವರೆಗೆ ಮಾಡಬೇಡಿ. ನಿಲ್ಲಿಸುವುದು ಉತ್ತಮ. ಯೋಚಿಸಿ, ಅರ್ಥ ಮಾಡಿಕೊಳ್ಳಿ, ವಿಚಾರ ವಿಮರ್ಶೆ ಮಾಡಿ, ಯಾವುದೇ ರೀತಿಯ ಶುಭ ಮತ್ತು ಮಂಗಳ ಕಾರ್ಯಗಳನ್ನು ಮಾಡಬೇಡಿ.

 

 

ಶಾಸ್ತ್ರ ಮತ್ತು ಜ್ಯೋತಿಷ್ಯದಲ್ಲಿ ಈ ಮಲ ಮಾಸದಲ್ಲಿ ಶುಭ ಮತ್ತು ಮಂಗಳ ಕಾರ್ಯಗಳನ್ನು ಮಾಡುವುದು ವರ್ಜಿತ ಎಂದು ಹೇಳಲಾಗಿದೆ. ಅಂದರೆ ಈ ಧನುರ್ಮಾಸದ ತಿಂಗಳು ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ನೀವು ಒಂದು ವೇಳೆ ಪ್ರಾರಂಭಿಸಿಬಿಟ್ಟರೆ ಅದರ  ದುಷ್ಪರಿಣಾಮಗಳನ್ನು ನೀವು ಎದುರಿಸಲು ಸಿದ್ಧರಾಗಿರಬೇಕಾಗುವುದು.

ಇಂಗ್ಲಿಷ್ ಮಾಸದ ಅನ್ವಯ  ಈ ಜನವರಿ ಹೊಸ ವರ್ಷ ಶುಭ ಎಂದು  ಪರಿಗಣಿಸಬಹುದು. ಆದರೆ ನಮ್ಮ ಹಿಂದೂ ಧರ್ಮ , ಶಾಸ್ತ್ರ , ಸಂಪ್ರದಾಯ ಮತ್ತು ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದಿಂದ ಶುರುವಾಗಿ ಫಾಲ್ಗುಣ ಮಾಸದವರೆಗೂ ಹಿಂದೂ ಪಂಚಾಂಗದ ಪ್ರಕಾರ ಹನ್ನೆರಡು ಮಾಸಗಳು ಬರುವವು.

ಸೂರ್ಯನು ಶುಭ ಫಲಗಳನ್ನು ಈ ಮಾಸದಲ್ಲಿ ಕೊಡುವುದಿಲ್ಲ.ಬೇಕಾದರೆ ನಿಮ್ಮ ಸುತ್ತಮುತ್ತ ಇರುವವರನ್ನು ನೋಡಿ ಅವರು ಒಂದು ವೇಳೆ ಈ ಧನುರ್ಮಾಸದಲ್ಲಿ ಮದುವೆಯಾಗಿದ್ದರೆ, ಜಗಳ , ದಾಂಪತ್ಯದಲ್ಲಿ ವಿರಸ, ವಿವಾಹ  ವಿಚ್ಛೇದನದಂತಹ ಸಮಸ್ಯೆಗಳನ್ನು  ಜೀವನದಲ್ಲಿ ಎದುರಿಸುತ್ತಿರುತ್ತಾರೆ. ಕೆಲವು ಜನರಿಗೆ ಮಹೂರ್ತದ ಮೇಲೆ ವಿಶ್ವಾಸ ಇರುವುದಿಲ್ಲ. ವಿವಾಹ ಮತ್ತಿತರ ಶುಭ ಕಾರ್ಯಗಳನ್ನು ಭಾನುವಾರ ಮತ್ತು ಶನಿವಾರ ಅಥವಾ ಇನ್ಯಾವುದೋ ಒಂದು ರಜೆ ದಿನಗಳಲ್ಲಿ ಇಟ್ಟುಕೊಳ್ಳುತ್ತಾರೆ. ಈ ದಿನ ಅಂಗಡಿ ಮುಂಗಟ್ಟುಗಳು, ವ್ಯವಸಾಯ ಎಲ್ಲರಿಗೂ ಸಹ ರಜೆ ಇರುತ್ತದೆ. ಆದ್ದರಿಂದ ಎಲ್ಲರೂ ಯಾವುದೇ ಕಷ್ಟಗಳಲ್ಲದೇ  ಆರಾಮವಾಗಿ ಬರುತ್ತಾರೆ ಎಂದು ಯೋಚಿಸುತ್ತಾರೆ. ಆದರೆ ಆ ದಿನ ಶುಭ ಮುಹೂರ್ತವೇ ಇರುವುದಿಲ್ಲ.

 

 

ವ್ಯಾಪಾರದವನ್ನು  ಸಹ ನೀವು ಹೊಸದಾಗಿ ಈ ಮಾಸದಲ್ಲಿ ಪ್ರಾರಂಭಿಸಿದರೆ ಎಲ್ಲ ರೀತಿಯಲ್ಲೂ ನಷ್ಟ ಅನುಭವಿಸುತ್ತೀರಿ. ಬೇರೆಯವರು ನಿಮಗೆ ಮೋಸ ಮಾಡುತ್ತಾರೆ. ಕೆಟ್ಟ ಮುಹೂರ್ತದಲ್ಲಿ ಶುರು ಮಾಡಿದರೆ ಸಮಸ್ಯೆಯೂ ಇವತ್ತು ಇಲ್ಲದಿದ್ದರೇನಂತೆ ನಾಳೆ ಖಂಡಿತವಾಗಿಯೂ ಒಂದಲ್ಲ ಒಂದು ದಿನ ಬಂದೇ ಬರುವುದು.

ಭಾರತವು ಆಧ್ಯಾತ್ಮಿಕ ಮತ್ತು ಸಂಸ್ಕೃತಿಯ ದೇಶವಾಗಿದೆ. ಮುಂದೆ ಬರುವ ದಿನಗಳಲ್ಲಿ ಭಾರತವು  ಇಡೀ ವಿಶ್ವದ ಗುರುವಾಗಲಿದೆ. ಯಾಕೆಂದರೆ ಗುರುವಿನ ಸಂಸ್ಕೃತಿಯೇ ನಾವೆಲ್ಲರೂ ಅನುಸರಿಸುತ್ತಾ ಬಂದಿದ್ದೇವೆ. ಗುರುವಿನ ಕೆಲಸವಾಗುತ್ತದೆ ಜ್ಞಾನವನ್ನು ಕೊಡುವುದು, ಸಂದೇಶವನ್ನು ತಿಳಿಸುವುದು, ಉಪದೇಶವನ್ನು ನೀಡುವುದು.

ಜನರಿಗೆ ಒಳ್ಳೆಯ ಸಮಯದ ಬಗ್ಗೆ ತಿಳಿದಿರುವುದಿಲ್ಲ. ಆದ್ದರಿಂದ ಯಾವ ಕೆಲಸವಾದರೂ ಸಹ ಮಾಡಿಯೇ ಬಿಡುತ್ತಾರೆ. ಆದರೆ ಯಶಸ್ಸು ಮತ್ತು ಸಫಲತೆ ಸಿಗುವುದಿಲ್ಲ. ಆಗ ನಮಗೆ ಪಶ್ಚಾತ್ತಾಪವಾಗುತ್ತದೆ. ಆದರೆ ಮನಸ್ಸು ಬಂದಂತೆ ಅದೆಷ್ಟೋ ಸಾವಿರಾರು ಜನರು ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡಿ ಮುಗಿಸಿ ಬಿಡುತ್ತಾರೆ. ನಂತರ ಅದರ ಪರಿಣಾಮವನ್ನು ಮುಂದೆ ಅವರು ಎದುರಿಸಬೇಕಾಗುವುದು. ಯಾಕೆಂದರೆ ಅವರಿಗೆ ಈ ರೀತಿಯ ವಿಷಯಗಳನ್ನು ತಿಳಿಸುವುದಕ್ಕೆ ಬೇರೆ ಯಾರೂ ಇರುವುದಿಲ್ಲ .ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಮುಹೂರ್ತದಲ್ಲಿ ನಾವು ಶುಭ ಮತ್ತು ಮಂಗಳ ಕಾರ್ಯಗಳನ್ನು ಮಾಡಿದರೆ  ಮುಂದೆ ನಾವು ಸಮಸ್ಯೆಯ ಸುಳಿಯಲ್ಲಿ ಸಿಲುಕುವ ಸಂದರ್ಭ ಬರುವುದಿಲ್ಲ.

 

 

ಮಲ ಮಾಸವೆಂದರೆ ಅದರ ಅರ್ಥ ಅದರಲ್ಲಿಯೇ ಮಾಲಿನ್ಯತೆ ಇರುತ್ತದೆ. ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಇದರಿಂದ ಹಾನಿ ಉಂಟಾಗುವುದು. ನಷ್ಟವನ್ನು ಎದುರಿಸಬೇಕಾಗುವುದು. ಯಾವುದೇ ರೀತಿಯ ಲಾಭವೂ ನಮಗೆ ಸಿಗುವುದಿಲ್ಲ. ನಂತರ ನಮಗೆ ಪಶ್ಚಾತ್ತಾಪವಾಗುತ್ತದೆ. ಆಗ ನಾವು ಯೋಚಿಸುತ್ತೇವೆ, ನಾವು ಸರಿಯಾದ ಸಮಯದಲ್ಲಿ ಕೆಲಸವನ್ನು ಪ್ರಾರಂಭಿಸಿಲ್ಲ ಎಂದು.. ಆಗ ನಾವು ಯೋಚಿಸಿ ಪಶ್ಚಾತ್ತಾಪ ಪಡುತ್ತೇವೆ.

ಹೊಸ ಮನೆಯ ಗೃಹ ಪ್ರವೇಶವನ್ನು ಮಾಡಿದರೆ ಆ ಮನೆಯಲ್ಲಿ ಜಗಳ, ಅನೇಕ ರೀತಿಯಲ್ಲಿ ದ್ವೇಷ , ಕೋಪ ಕಾಯಿಲೆಗಳನ್ನು ಸಹ ಎದುರಿಸಬೇಕಾಗುವುದು. ಆರ್ಥಿಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಿ ಬರುವುದು. ಮನೆಯಲ್ಲಿ ಕಷ್ಟಗಳು ಒಟ್ಟಿಗೆ ಬರುವವು . ಎಲ್ಲ ರೀತಿಯಲ್ಲೂ ದುಃಖ ಮತ್ತು ಕಷ್ಟವನ್ನೇ ಅನುಭವಿಸಬೇಕಾಗುವುದು.

ವಿವಾಹವನ್ನು ಈ ಸಮಯದಲ್ಲಿ ಮಾಡಿದರೆ  ದಾಂಪತ್ಯ ಜೀವನದಲ್ಲಿ ದುಃಖವೂ ಎದುರಾಗುವುದು, ಕಷ್ಟಗಳು ಎದುರಾಗುತ್ತವೆ, ಪತಿ ಪತ್ನಿಯ ವಿಚಾರದಲ್ಲಿ ಹೆಚ್ಚಾಗಿ ವೈಚಾರಿಕತೆಯ, ಮತ ಭೇದ ಉತ್ಪನ್ನವಾಗುತ್ತದೆ. ಪತಿ ಪತ್ನಿಯರ ಮಧ್ಯದಲ್ಲಿ ವೈಮನಸ್ಯ, ಜಗಳ ಉಂಟಾಗಿ ವಿಚ್ಛೇದನದಂತಹ ಸ್ಥಿತಿಗೆ ತಲುಪಬಹುದು.

ನಿಮಗೆ ಒಂದು ವೇಳೆ  ಶುಭ ಕಾರ್ಯಗಳನ್ನು ಮಾಡಬೇಕು ಎಂದಿದ್ದರೆ ಡಿಸೆಂಬರ್ ಹದಿನಾರನೇ ತಾರೀಕಿನ ಒಳಗೆ ಮತ್ತು ಫೆಬ್ರವರಿ ಎರಡನೇ ತಾರೀಕಿನ ನಂತರ ಮಾಡಿದರೆ ಉತ್ತಮ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top