fbpx
ಕಿರುತೆರೆ

ಬಿಗ್’ಬಾಸ್ ಮನೆಯಿಲ್ಲಿ ಇದೆ ಮೊದಲ ಬಾರಿಗೆ ಕಣ್ಣೀರಿಟ್ಟ ದಿವಾಕರ್.

ಬಿಗ್’ಬಾಸ್ ಮನೆಯಿಲ್ಲಿ ಇದೆ ಮೊದಲ ಬಾರಿಗೆ ಕಣ್ಣೀರಿಟ್ಟ ದಿವಾಕರ್.

 

 

ಬಿಗ್ ಬಾಸ್ ಶುರುವಾಗಿ ಸುಮಾರು ಎರಡು ತಿಂಗಳುಗಳು ಕಳೆದಿವೆ, ಈ ಎರಡು ತಿಂಗಳಲ್ಲಿ ಸಾಮಾನ್ಯ ಅಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿರುವ ದಿವಾಕರ್ ಬಹುತೇಕ ಎಲ್ಲಾ ಸ್ಪರ್ಧಿಗಳ ಜೊತೆ ಜಗಳಮಾಡಿದ್ದಾರೆ, ಬೈದಿದ್ದಾರೆ ಇವರಿಗೂ ಕೆಲ ಸ್ಪರ್ಧಿಗಳು ನೋವನ್ನುಂಟು ಮಾಡಿದ್ದಾರೆ. ಆದರೆ ಯಾವತ್ತೂ ಬೇಜಾರ್ ಮಾಡ್ಕೊಂಡು ಕಣ್ಣೀರು ಹಾಕಿರಲಿಲ್ಲ. ಆದರೆ ಮೊನ್ನೆಯ ಸಂಚಿಕೆಯಲ್ಲಿ ದಿವಾಕರ್ ತನ್ನ ಹೆಂಡತಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

 

 

ದಿವಾಕರ್ ತಮ್ಮ ಹೆಂಡತಿಯನ್ನು ನೆನಸಿಕೊಂಡು ಭಾವುಕರಾದರು ಅಂದು ದಿವಾಕರ್ ಅವರ ಪತ್ನಿಯ ಹುಟ್ಟಿದ ದಿನವಂತೆ. ಅವರ ಜತೆ ಮಾತಾಡಿ ಅವರಿಗೆ ಶುಭಕೋರಬೇಕು ಎನ್ನುವ ಆಸೆ ದಿವಾಕರ್ ಅವರಿಗೆ ಬಂದಿತ್ತು. ಮಾತನಾಡಲು ಬಿಗ್ ಬಾಸ್ ನಲ್ಲಿ ಅವಕಾಶವಿಲ್ಲದಿರುವುದರಿಂದ “ನಾನು ಯಾರ ಬಳಿಯೂ ಜಗಳ ಮಾಡಲ್ಲ. ಇನ್ನುಮುಂದೆ ಏನಾದರೂ ಯಾರ ಜೊತೆಯಾದರು ಮಾತನಾಡಬೇಕಾದರೆ ಯೋಚಿಸಿ ಮಾತನಾಡುತ್ತೇನೆ, ಬೇಕು ಬೇಕು ಅಂತ ಏನೂ ಮಾತನಾಡಲ್ಲ, ದಯವಿಟ್ಟು ತನ್ನ ಹೆಂಡತಿಯ ಧ್ವನಿಯನ್ನು ಕೇಳಿಸಿ ಬಿಗ್‌ಬಾಸ್‌” ಎಂದು ದಿವಾಕರ್ ಕಣ್ಣೀರು ಹಾಕಿದರು.

 

 

ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ನಿವೇದಿತಾ ಗೌಡಳ ತಾಯಿ, ಕೃಷಿಯವರ ಸಹೋದರ, ಜೆಕೆ ಮತ್ತು ಜಗನ್ ಅವರ ತಾಯಿಯಾರ ಧ್ವನಿಯನ್ನು ಪ್ಲೆ ಮಾಡಲಾಗಿದ್ದು ದಿವಾಕರ್ ಅವರ ಮನೆಯಿಂದ ಯಾರ ಧ್ವನಿಯನ್ನು ಇನ್ನೂ ಪ್ಲೇ ಮಾಡಲಾಗಿಲ್ಲ. ದಿವಾಕರ್ ಮಾತ್ರ ತಮ್ಮ ಪತ್ನಿಯ ಧ್ವನಿಯನ್ನು ಕೇಳಲು ಆತೊರೆಯುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top