fbpx
ಸಮಾಚಾರ

ನ್ಯೂಸ್ ರಂಗಣ್ಣನಿಗೆ ಶಾ.. ಬೋ..ಮಗ ಜೆಡಿಎಸ್ ಕುಮಾರಣ್ಣ: ಸ್ಪಷ್ಟನೆ ಕೊಟ್ಟ ಜೆಡಿಎಸ್

ನ್ಯೂಸ್ ರಂಗಣ್ಣನಿಗೆ ಜೆಡಿಎಸ್ ಕುಮಾರಣ್ಣನ ಶಾ.. ಬೋ..ಮಗ ಅಂದಿದ್ಯಾಕೆ..!

 

 

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತ ರಂಗನಾಥ್ ಅವರಿಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ. ಖಾಸಗಿ ಚಾನೆಲ್ ಒಂದರ ಸಂದರ್ಶನಕ್ಕೆ ಹೋಗಿದ್ದ ಕುಮಾರಸ್ವಾಮಿಯವರು ಕಾರ್ಯಕ್ರಮ ಮುಗಿದ ನಂತರ ಕೆಂಡಾಮಂಡಲವಾಗಿದ್ದಾರೆ.

 

 

ಕಾರ್ಯಕ್ರಮ ಮುಗಿದ ನಂತರ ಸಿಡಿಮಿಡಿಗೊಂಡ ಕುಮಾರಣ್ಣನ ಮೈಕನ್ನು ಕಿತ್ತೆಸೆದು “ಯಾವುದ್ರಿ ಇದು ಶಾ** ಚಾನೆಲ್, ನಾನ್ ಆವಾಗ್ಲೇ ಕೇಳಿದ್ದೀನಿ ಯಾರ್ ಯಾರ್ ಕುತ್ತಿದ್ದಾರೆ ಅಂತ, ಚರ್ಚೆಗೆ ಒಂದು ಇತಿ ಮಿತಿ ಬೇಡ್ವಾ? ಅವ್ನ್ ಯಾವನ್ ನಿಮ್ ರಂಗನಾಥನ ಇಟ್ಕೊಂಡು ಇದುನ್ ತೆಗಿತೀರಾ ನೀವು. ನಿಮ್ ರಂಗನಾಥ್ ಕೂತಿದ್ದಾಗ ಈ ತರಹದವನ್ನು ಯಾವತ್ತೂ ತರಬೇಡಿ. ಬೋ** ನನ್ ಮಕ್ಳು ತಂದು” ಎಂದು ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.

 

 

ಸದ್ಯ ರಂಗಣ್ಣನನ್ನು ತರಾಟೆಗೆ ತೆಗೆದುಕೊಂಡಿರುವ ಕುಮಾರಣ್ಣನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದ್ದು ಕುಮಾರಣ್ಣನ ಬೈದಿರುವುದು ಪಬಲಿಕ್ ಟಿವಿಯ ರಂಗಣ್ಣನಿಗೋ ಅಥವಾ tv9ನ ರಂಗನಾಥ್ ಭಾರದ್ವಾಜ್ ಗೋ ತಿಳಿದುಬಂದಿಲ್ಲ.

ಕುಮಾರಸ್ವಾಮಿಯವರ ವಿಡಿಯೋವನ್ನ ಇಲ್ಲಿ ನೋಡಿ.

 

 

 

ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಜೆಡಿಎಸ್ “ನಮ್ಮ ಪಕ್ಷದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಕುಮಾರಸ್ವಾಮಿಯವರು ತಾವು ಪಾಲ್ಗೊಂಡಿದ್ದ ಆ ಚರ್ಚಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಸಾಗುತ್ತದೆ ಎಂದು ತಿಳಿದುಕೊಂಡಿದ್ದರು. ಆದರೆ ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್,ಬಿಜೆಪಿ ನಾಯಕರು ಹಾಗು ಚಾನೆಲ್ ನ ನಿರೂಪಕ ಸೇರಿ ಕಾರ್ಯಕ್ರಮದ ಚರ್ಚಾ ವಿಷಯವನ್ನೇ ಕುಲಗೆಡಿಸಿ ವಿಷಯಾಂತರಿಸಿದರು. ಇದರಿಂದ ಕೋಪಗೊಂಡ ಕುಮಾರ ಸ್ವಾಮಿ ಇಂತಹ ಚರ್ಚೆಗಳಿಗೆ ನಮ್ಮನ್ನು ಏಕೆ ಕರೆಸುತ್ತೀರಿ ಎಂದು ಸಿಡುಕುಕೊಂಡಾಗ ಮಾತಿನ ಭರದಲ್ಲಿ ಈ ರೀತಿಯ ಮಾತುಗಳು ಅವರ ಬಾಯಿಂದ ಬಂದಿವೆಯೇ ಹೊರತು ಅವರು ಉದ್ದೇಶ ಪೂರ್ವಕವಾಗಿ ಮಾತನಾಡಿಲ್ಲ” ಎಂದು ಜೆಡಿಸ್ ತಿಳಿಸಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top