fbpx
ಮನೋರಂಜನೆ

ಅಂದುಕೊಂಡದ್ದಕ್ಕಿಂತ ಮೊದಲೇ ಬರ್ತಿದೆ ಮುನಿರತ್ನ ಕುರುಕ್ಷೇತ್ರ.

ಅಂದುಕೊಂಡದ್ದಕ್ಕಿಂತ ಮೊದಲೇ ಬರ್ತಿದೆ ಮುನಿರತ್ನ ಕುರುಕ್ಷೇತ್ರ.

 

 

 

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರಗಳಲ್ಲಿ ಕುರುಕ್ಷೇತ್ರ ಚಿತ್ರವೂ ಕೂಡ ಒಂದು. ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತವನ್ನು ತಲುಪಿದ್ದು ಇದೆ ಡಿಸೆಂಬರ್ 20 ಶೂಟಿಂಗ್ ಪೂರ್ಣಗೊಳ್ಳಲಿದೆ ಅಲ್ಲದೆ ಚಿತ್ರವನ್ನು ಕೂಡ ಅಂದುಕೊಂಡದ್ದಕ್ಕಿಂತ ಮುಂಚೆಯೇ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಚಿತ್ರದ ಶೂಟಿಂಗ್ ಮುಗಿಯುವ ಮೊದಲೇ ಪ್ರೊಮೋಷನ್ ಅನ್ನು ಆರಂಭಿಸಿದೆ. ಚಿತ್ರತಂಡ ನಾಡಿದ್ದು (ಡಿಸೆಂಬರ್ 16) ಚಿತ್ರದಲ್ಲಿ ಅಭಿಮನ್ಯು ಪಾತ್ರವನ್ನು ಮಾಡಿರುವ ನಿಖಿಲ್ ಕುಮಾರ್ ಅವರ ಟೀಸರ್’ಅನ್ನು ಬಿಡುಗಡೆ ಮಾಡಲಿದೆ.

 

 

ಮುಂಬರುವ ಫೆಬ್ರವರಿಯಲ್ಲಿ ಚಿತ್ರವನ್ನು ರಿಲೀಸ್ ಮಾಡಬೇಕೆಂದು ಯೋಚಿಸಿದ್ದ ಚಿತ್ರತಂಡ ಈಗ ಫೆಬ್ರವರಿಗೂ ಮುಂಚೆಯೇ ಬಿಡುಗಡೆ ಮಾಡುವ ಪ್ಲಾನ್’ನಲ್ಲಿದೆಯಂತೆ ಆ ನಿಟ್ಟಿನಲ್ಲಿ ಈಗಾಗಲೇ ಚಿತ್ರಕ್ಕೆ ಸಂಭಂದಿಸಿದ ತಾಂತ್ರಿಕ ಕೆಲಸಗಳನ್ನು ಹಗಲಿರುಳು ಮಾಡುತ್ತಿದ್ದಾರೆ.ಒಂದೆಡೆ ಡಬ್ಬಿಂಗ್ ಕೆಲಸಗಳು ನಡೆಯುತ್ತಿದೆ ಮತ್ತೊಂದೆಡೆ ಗ್ರಾಫಿಕ್ಸ್ ಮತ್ತು VFX ಕೆಲಸಗಳು ಭರದಿಂದ ಸಾಗಿವೆ. ಮಾತಿನ ಭಾಗದ ಚಿತ್ರೀಕರಣವವನು ಮುಗಿಸಿ ಸಾಹಸ ದೃಶ್ಯಗಳನ್ನು ಚೆಟ್ರಿಕ್ಸ್ರಿಸುತ್ತಿರುವ ಚಿತ್ರತಂಡ ಅದು ಮುಗಿದ ನಂತರ ಹಾಡುಗಳನ್ನು ಚಿತ್ರೀಕರಿಸಲಿದೆಯಂತೆ.

 

 

ಕುರುಕ್ಷೇತ್ರ ಚಿತ್ರವೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರವಾಗಿದ್ದು ಚಿತ್ರದಲ್ಲಿ ಅರ್ಜುನ್ ಸರ್ಜಾ, ರವಿಚಂದ್ರನ್, ಅಂಬರೀಷ್, ಸೋನು ಸೂದ್, ಡ್ಯಾನಿಶ್ ಅಖ್ತರ್ ಸೈಫಿ, ನಿಖಿಲ್ ಕುಮಾರ್, ರವಿಶಂಕರ್, ಮೇಘನಾ ರಾಜ್, ಭಾರತೀ ವಿಷ್ಣುವರ್ಧನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. .ಕುರುಕ್ಕ್ಷೇತ್ರ ಚಿತ್ರಕ್ಕೆ ಭಾರತೀಯ ಮಹಾಕಾವ್ಯ ಮಹಾಭಾರತವನ್ನು ಆಧರಿಸಿ ಜೆ.ಕೆ. ಭಾರವಿಯವರು ಬರೆದಿದ್ದಾರೆ..ಸಿನಿಮಾವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಮುನಿರತ್ನ ನಿರ್ಮಾಪಕರಾಗಿದ್ದಾರೆ..ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top