fbpx
ಮನೋರಂಜನೆ

ಗಾಂಧಿನಗರ ರಸ್ತೆಗೆ ಪಾರ್ವತಮ್ಮ ರಾಜಕುಮಾರ್ ಹೆಸರು..!

ಗಾಂಧಿನಗರ ರಸ್ತೆಗೆ ಪಾರ್ವತಮ್ಮ ರಾಜಕುಮಾರ್ ಹೆಸರು..!

 

 

ಕನ್ನಡ ಚಿತ್ರರಂಗಕ್ಕೆ ನೂರಾರು ಉದಯೋನ್ಮುಖ ಕಲಾವಿದರನ್ನು ಪರಿಚಯಿಸಿದ ವರನಟ ಡಾ.ರಾಜಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ರವರ ಸ್ಮರಣಾರ್ಥವಾಗಿ ಕನ್ನಡ ಚಿತ್ರರಂಗದ ಹೃದಯ ಭಾಗ ಎಂದೇ ಕರೆಯಲಾಗುವ ಬೆಂಗಳೂರಿನ ಗಾಂಧಿನಗರದ ರಸ್ತೆಗೆ ವಜ್ರೇಶ್ವರಿ ರೋಡ್ ಎಂದು ಹೆಸರಿಡಲು ಬಿಬಿಎಂಪಿ ನಿರ್ಧರಿಸಿದೆ.

 

 

ಪಾರ್ವತಮ್ಮನವರು ಪ್ರಾರಂಭ ಮಾಡಿದ್ದ ವಜ್ರೇಶ್ವರಿ ಕಂಬೈನ್ಸ್ ಚಿತ್ರ ನಿರ್ಮಾಣ ಸಂಸ್ಥೆ ಇರುವ ಗಾಂಧಿನಗರದ 6ನೇ ಕ್ರಾಸ್ ರಸ್ತೆಗೆ ಅಧಿಕೃತವಾಗಿ ವಜ್ರೇಶ್ವರಿ ರಸ್ತೆ ನಾಮಕರಣ ಮಾಡಲಾಗಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಗಾಂಧಿನಗರದ ಕಾಳಿದಾಸ ಮತ್ತು ಸುಬೇದಾರ್ ಛತ್ರಂ ರಸ್ತೆ ನಡುವಿನ 6ನೇ ಅಡ್ಡರಸ್ತೆ ಇನ್ನುಮುಂದೆ ವಜ್ರೇಶ್ವರಿ ರಸ್ತೆಯಾಗಿದೆ.

 

 

ಗಾಂಧಿನಗರದ 6ನೆ ಅಡ್ಡರಸ್ತೆಗೆ ವಜ್ರೇಶ್ವರಿ ರಸ್ತೆ ಎಂದು ನಾಮಕರಣ ಮಾಡಬೇಕೆಂದು ಸಂಸದ ಪಿ.ಸಿ.ಮೋಹನ್ ಅವರು ಬಿಬಿಎಂಪಿಗೆ ಪತ್ರ ಬರೆದಿದ್ದರು. ಸಂಸದರ ಮನವಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದ್ದು ಮೇಯರ್ ಕೂಡ ಸಹಿ ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top