fbpx
ಜಾಗೃತಿ

ಇಡೀ ಕಾಲೋನಿಯ ಚರಂಡಿಯನ್ನು ಒಬ್ಬಳೇ ಸ್ವಚ್ಛಗೊಳಿಸಿದ 12ವರ್ಷದ ಪುಟ್ಟ ಬಾಲೆ..!

ಇಡೀ ಕಾಲೋನಿಯ ಚರಂಡಿಯನ್ನು ಒಬ್ಬಳೇ ಸ್ವಚ್ಛಗೊಳಿಸಿದ 12ವರ್ಷದ ಪುಟ್ಟ ಬಾಲೆ..!

 

 

ಚರಂಡಿ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯತಿಗೆ ಎಷ್ಟೇ ಮನವಿ ಮಾಡಿದರೂ ಅದು ದಲಿತರ ಕಾಲೋನಿ ಎನ್ನುವ ಒಂದೇ ಕಾರಣಕ್ಕೆ ಚರಂಡಿ ಸ್ವಚ್ಛಗೊಳಿಸದ ಹಿನ್ನಲೆ ಗ್ರಾಮ ಪಂಚಾಯತಿಯ ಈ ದಲಿತ ವಿರೋಧಿ ನೀತಿಯ ವ್ಯವಸ್ಥೆಯಿಂದ ಬೇಸತ್ತು 12ವರ್ಷದ ಪುಟ್ಟ ಬಾಲಕಿ ಇಡೀ ಕಾಲೋನಿಯ ಚರಂಡಿಯನ್ನು ಕ್ಲೀನ್ ಮಾಡಿ ಗ್ರಾಮ ಪಂಚಾಯತಿಯ ಸದಸ್ಯರು ಮತ್ತು ಅಧಿಕಾರಿಗಳು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದ್ದಾಳೆ. . ಅಷ್ಟಕ್ಕೂ ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗೌಡಗೆರೆ ಗ್ರಾಮದಲ್ಲಿ..

 

 

ಊರಿನ ದಲಿತ ಕೇರಿಯಲ್ಲಿ ಚರಂಡಿಗಳನ್ನು ಬಹು ದಿನಗಳಿಂದ ಕ್ಲೀನ್ ಮಾಡದ ಹಿನ್ನೆಲೆಯಲ್ಲಿ 150ಕ್ಕೂ ಹೆಚ್ಚು ಮನೆಗಳಿರುವ ಕಾಲೋನಿಯ ಹಲವು ಜನರು ಚಿಕನ್ ಗುನ್ಯಾ, ಮಲೇರಿಯಾ, ಡೆಂಗ್ಯೂ ಸೇರಿದಂತೆ ಅನೇಕ ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆಗಳಿಗೆ ತಿರುಗುತ್ತಿದ್ದರೆ..ಕಾಲೋನಿಯ ಚರಂಡಿಯನ್ನು ಕ್ಲೀನ್ ಮಾಡಿಸುವಂತೆ ಅನೇಕ ಬಾರಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಪತ್ರ ಬರೆದು ದೂರು ನೀಡಿದ್ದರೂ ಕ್ಯಾರೇ ಎನ್ನದ ಗ್ರಾ.ಪಂ.ಅಧಿಕಾರಿಗಳು ದಲಿತ ಕಾಲೋನಿ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದಲಿತ ಕಾಲೋನಿ ನಿವಾಸಿಗಳು ಆರೋಪಿಸಿದ್ದಾರೆ.

 

 

ಕಾಲೋನಿಯಲ್ಲಿನ ಚರಂಡಿಗಳ ಅಸ್ವಚ್ಛತೆಯಿಂದ ಬೇಸತ್ತ 7ನೇ ತರಗತಿ ಬಾಲಕಿ ರಂಜಿತ ಎನ್ನುವವಳು ತಾನೇ ಸ್ವತಃ ಚರಂಡಿಗೆ ಇಳಿದು  ಚರಂಡಿಯನ್ನು ಕ್ಲೀನ್ ಮಾಡಿದ್ದಾಳೆ. ಇದನ್ನ ನೋಡಿದ ಬೇರೆ ದಲಿತ ಕಾಲೋನಿ ಮನೆಯವರು ತಮ್ಮ ತಮ್ಮ ಮನೆಗಳ ಮುಂದಿನ ಚರಂಡಿಯನ್ನು ತಾವೇ ಕ್ಲೀನ್ ಮಾಡಿಕೊಂಡು ಗೌಡಗೆರೆ ಗ್ರಾಮ ಪಂಚಾಯತಿಯ ಸದಸ್ಯರು ಮತ್ತು ಅಧಿಕಾರಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top