fbpx
ಮನೋರಂಜನೆ

ಒಂದೇ ಚಿತ್ರದಲ್ಲಿ ಮತ್ತೆ ನಟಿಸುತ್ತಿದ್ದಾರೆ ಸುದೀಪ್ ಮತ್ತು ರಾಗಿಣಿ..!

ಒಂದೇ ಚಿತ್ರದಲ್ಲಿ ಮತ್ತೆ ನಟಿಸುತ್ತಿದ್ದಾರೆ ಸುದೀಪ್ ಮತ್ತು ರಾಗಿಣಿ..!

 

 

ಸ್ಯಾಂಡಲ್’ವುಡ್ ನ ಯಶಸ್ವಿ ಜೋಡಿಗಳಲ್ಲಿ ಒಂದಾದ ಸುದೀಪ್ ಮತ್ತು ರಾಗಿಣಿ ಕೆಂಪೇಗೌಡ ಚಿತ್ರದ ನಂತರ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಇಬ್ಬರು ಕಲಾವಿದರು ಈಗ ಒಂದೇ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ ಆದರೆ ಈಬಾರಿ ಸುದೀಪ್ ಅವರು ರಾಗಿಣಿಯ ಜೊತೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿಲ್ಲ ಬದಲಾಗಿ ರಾಗಿಣಿಯವರು ನಟಿಸಿರುವ ಕಿಚ್ಚು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಈ ವರ್ಷ ನಿಧನ ಹೊಂದಿದ್ದ ಸಿಸಿಲ್ ಆಟಗಾರ ಧೃವ ಶರ್ಮ ಈ ಚಿತ್ರದಲ್ಲಿ ನಟಿಸಿದ್ದು ಸಿನಿಮಾದಲ್ಲಿ ಧ್ರುವ್ ನಿಜ ಜೀವನದಲ್ಲಿದ್ದಂತೆಯೇ ಮಾತು ಬಾರದ ಮತ್ತು ಕಿವಿ ಕೇಳದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಚಿತ್ರದ ನಾಯಕಿ ಅಭಿನಯಾ ಕೂಡ ನಿಜಜೀವನದಲ್ಲಿ ಮೂಕ ಮತ್ತು ಕಿವುಡಾಗಿದ್ದು ತೆರೆ ಮೇಲೆ ದೃವನ ಪತ್ನಿಯಾಗಿ ನಟಿಸಿದ್ದು ಆಕೆ ಕೂಡ ಕಿವುಡಿ ಮತ್ತು ಮೂಕಿಯಾಗಿರುತ್ತಾಳೆ. ಧೃವ ಮತ್ತು ಅಭಿನಯಾ ಮುಖ್ಯಭೂಮಿಕೆಯಲ್ಲಿರುವ ಚಿತ್ರದಲ್ಲಿ ರಾಗಿಣಿ ಮತ್ತು ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಸದ್ಯ ಶೂಟಿಂಗ್ ಅನ್ನು ಮುಗಿಸಿಕೊಂಡಿರುವ ಚಿತ್ರತಂಡ ಕೆಲವೇ ದಿನಗಳಲ್ಲೇ ಆಡಿಯೋವನ್ನು ಬಿಡುಗಡೆ ಮಾಡಲಿದೆ. ಚಿತ್ರದಲ್ಲಿ ಅಭಿನಯ ಚಕ್ರವತಿ ಕಿಚ್ಚ ಸುದೀಪ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರಕ್ಕೆ ಮೈಲೇಜ್ ಕೊಟ್ಟಿದೆ. ಈ ಹಿಂದೆ ಕಿರಾತಕ, ಅಂಜದ ಗಂಡು, ಮಿ.420, ಬೆಂಗಳೂರು-560094 ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಪ್ರದೀಪ್ ರಾಜ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top