fbpx
ಕಿರುತೆರೆ

ಚಂದನ್‌ ಕೊರಳಿನ ಕೆಳಗಿರುವ ‘XIV’ ಟ್ಯಾಟೂವಿನ ಸೀಕ್ರೆಟ್ ಏನು?

ಚಂದನ್‌ ಕೊರಳಿನ ಕೆಳಗಿರುವ ‘XIV’ ಟ್ಯಾಟೂವಿನ ಸೀಕ್ರೆಟ್ ಏನು?

 

 

ಬಿಗ್ ಬಾಸ್ ಸೀಸನ್ 5ನ ಸ್ಟ್ರಾಂಗ್ ಸ್ಪರ್ದಿಗಳಲ್ಲಿ ಒಬ್ಬರಾದ ಚಂದನ್ ಶೆಟ್ಟಿ ಬಿಗ್ ಬಾಸ್ ಒಳಗೆ ಮತ್ತು ಹೊರಗೆ ಎಲ್ಲರಿಗೂ ಇಷ್ಟವಾಗಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನೇ ಸಂಗೀತ ಸಂಯೋಜನೆಗೆ ಉಪಕರಣಗಳನ್ನಾಗಿ ಉಪಯೋಗಿಸಿಕೊಂಡು, ಸ್ಥಳದಲ್ಲೇ ರ‍್ಯಾಪ್‌ ಸಾಂಗ್‌ ಮಾಡುವ ಚಂದನ್‌ ಟ್ಯಾಲೆಂಟ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಬೇರೆ ಯಾರ ವಿಷ್ಯಕ್ಕೆ ಮೂಗು ತೋರಿಸದೆ ತಾವಾಯಿತು ತಮ್ಮ ಟಾಸ್ಕ್ ಆಯ್ತು ಅಂತ ಇರುವ ಚಂದನ್ ಕೊರಳಿನ ಬಳಿ ಹಾಕಿಸಿರುವ ಟ್ಯಾಟೂವನ್ನು ಎಲ್ಲರೂ ನೋಡಿರತೀರಾ.

 

 

 

ಚಂದನ್‌ ಶೆಟ್ಟಿ ಕೊರಳಿನ ಕೆಳ ಭಾಗದಲ್ಲಿ ರೋಮನ್‌ ಸಂಖ್ಯೆಯಲ್ಲಿ XIV (14) ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಹಚ್ಚೆಯ ಹಿಂದಿನ ಸಿಕ್ಟ್ರೆಟ್ ಏನು ಎಂಬ ಪ್ರಶ್ನೆ ವೀಕ್ಷಕರನ್ನು ಕಾಡುತಿತ್ತು. ಸಂಯುಕ್ತಾ ಹೆಗಡೆ ಅವರಿಗೂ ಅದನ್ನು ತಿಳಿದುಕೊಳ್ಳುವ ಕುತೂಹಲವಿತ್ತೋ ಏನೋ ಆದರೆ “ಚಂದನ್‌ ಅವರನ್ನು ಟ್ಯಾಟೂ ಬಗ್ಗೆ ಪ್ರಶ್ನಿಸಿದರು”

 

 

ಸಂಯುಕ್ತ ಟ್ಯಾಟೂ ಬಗ್ಗೆ ಕೇಳಿದಾಗ ಚಂದನ್ “ನಮ್ಮ ತಂದೆ-ತಾಯಿಗೆ ನಾನು 14ನೇ ಮಗ ಅದಕ್ಕೆ XIV ಅಂತ ಟ್ಯಾಟೂ ಹಾಕಿಸ್ಕೊಂಡಿದ್ದೀನಿ ಎಂದು ಹೇಳಿದರು ಆದರೆ, ಈ ಉತ್ತರ ಸಮಂಜಸವಾಗಿರಲಿಲ್ಲವಾದ್ದರಿಂದ ಪಟ್ಟು ಬಿಡದ ಸಂಯಕ್ತಾ, ಸುಳ್ಳು ಹೇಳಬೇಡ ಏನು ಅಂತ ಹೇಳು ಅಂತ ಸತಾಯಿಸಿದ್ರು. ಆದರೆ ಚಂದನ್ ಮಾತ್ರ ಏನೇನೋ ಸೀಕ್ಟ್ರೆಟ್ಸ್ ಇರ್ತವೆ ಎಂದು ಗುನುಗುತ್ತಾ ಅದರ ಬಗ್ಗೆ ಹೆಚ್ಚು ಮಾತನಾಡದೇ ಅಲ್ಲಿಂದ ಹೊರ ಹೋದ್ರು”

 

 

ಚಂದನ್ ಶೆಟ್ಟಿಯ XIV ಟ್ಯಾಟೂವಿನ ಹಿಂದಿರುವ ಗುಟ್ಟೇನು ಎಂಬುದನ್ನು ತಿಳಿದುಕೊಳ್ಳಲು ವೀಕ್ಷಕರಿಗೆ ಕುತೂಹಲವಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top