fbpx
ಆರೋಗ್ಯ

ಸೊಳ್ಳೆ ಬತ್ತಿ ,ಕಾಯಿಲ್ ಮತ್ತು ಲಿಕ್ವಿಡ್ಗಳಿಂದ ನಿಮ್ಮ ಆರೋಗ್ಯಕ್ಕೆ ಆಗುವ ಹಾನಿ ಬಗ್ಗೆ ತಿಳಿದುಕೊಂಡರೆ ಇನ್ಮೇಲಿಂದ ಇದನ್ನ ಉಪಯೋಗಿಸುವುದನೆ ನಿಲ್ಲಿಸಿಬಿಡ್ತೀರಾ .

ಸೊಳ್ಳೆ ಬತ್ತಿ ,ಕಾಯಿಲ್ ಮತ್ತು ಲಿಕ್ವಿಡ್ಗಳಿಂದ ಆಗುವ ಆರೋಗ್ಯ ಹಾನಿ:

 

ಮನೆಯಲ್ಲಿ ಸೊಳ್ಳೆಗಳು ಶುರು ಆದ್ರೆ ಸಾಕು ಸೊಳ್ಳೆ ಬತ್ತಿ ,ಕಾಯಿಲ್ ಮತ್ತು ಲಿಕ್ವಿಡ್ಗಳನ್ನೂ ಉಪಯೋಗಿಸಲು ಶುರು ಮಾಡ್ಬಿಡ್ತೀರಿ.
ಆದರೆ ಸೊಳ್ಳೆ ಬತ್ತಿ ,ಕಾಯಿಲ್ ಮತ್ತು ಲಿಕ್ವಿಡ್ಗಳು ಸೊಳ್ಳೆಗಳನ್ನೂ ಮಾತ್ರ ಅಲ್ಲ ನಮನ್ನು ಸಾಯಿಸುತ್ತೆ ಅಂದ್ರೆ ನೀವು ನಂಬುತ್ತಿರಾ?
ಅದಕ್ಕೆ ಉತ್ತರ ಹೌದು ಇದು ಸತ್ಯ ,ಅದು ಜನರನ್ನು ಕೂಡ ಸಾಯಿಸುತ್ತದೆ.ಕೆಲವು ದೊಡ್ಡ ದೊಡ್ಡ ಕಂಪನಿಗಳು ತಮ್ಮ ಲಾಭಕ್ಕಾಗಿ ಜನರ ಜೀವದ ಜೊತೆ ಆಟ ಆಡುತ್ತಾ ಇದ್ದಾರೆ .

 

 

ಸೊಳ್ಳೆ ಬತ್ತಿ ,ಕಾಯಿಲ್ ಮತ್ತು ಲಿಕ್ವಿಡ್ಗಳಿಂದ ಮನುಷ್ಯರಿಗೆ ಆಗುವ ಹಾನಿ ಮತ್ತು ಅದ್ರಲ್ಲಿ ಬಳಸುವಂತ ವಿಷಪೂರಿತ ಅಂಶದ ಬಗ್ಗೆ ತಿಳಿದುಕೊಳ್ಳಣ.
ನಾವು ಇರುವ ಭೂಮಿ,ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿ ಎಲ್ಲ ಮಾಲಿನ್ಯದಿಂದ ಕೂಡಿದೆ, ಇದರಿಂದ ನಮ್ಮ ಆರೋಗ್ಯ ದಿನೇ ದಿನೇ ಕ್ಷಣಿಸುತ್ತಿದೆ.ಅದ್ರಲ್ಲಿ ನಾವು ಮನೆಯಲ್ಲಿ ಉಪಯೋಗಿಸುವ ಈ ಸೊಳ್ಳೆ ಬತ್ತಿ ,ಕಾಯಿಲ್ ಮತ್ತು ಲಿಕ್ವಿಡ್ಗಳು ಕೂಡ ವಿಷಪೂರಿತ,ಬನ್ನಿ ಇದರಲ್ಲಿ ಇರುವ ವಿಷಪೂರಿತ ರಾಸಾಯನಿಕ ಅಂಶಗಳ ಬಗ್ಗೆ ತಿಳಿದುಕೊಳ್ಳಣ.

ಇದರಲ್ಲಿ ಫಾರ್ಮಲ್ ಡಿಹೈದೆ,ಪ್ರೊಸಫಿನ್ ,ಡಯಟ್ ಹೈಲೆನೆ ಮತ್ತು ಮೆಫ್ಲೋಕ್ಸ್ನ್ನ್ಎಂಬ ರಾಸಾಯನಿಕ ಪದಾರ್ಥಗಳು ಇರುತ್ತವೆ,ಈ ರಾಸಾಯನಿಕ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಅಮೇರಿಕಾ ,ಬ್ರಿಟನ್ ನಂತ ದೇಶಗಳು ಇದನ್ನು ನಿಷೇಧಿಸಿದೆ.ಆದರೆ ನಮ್ಮ ದೇಶದಲ್ಲಿ ಕಾಣದ ವಿಷಕ್ಕೆ ನಾವು ಬಲಿಯಾಗುತ್ತಿದ್ದೇವೆ.
ಇದರ ಹೊಗೆ ಹೊರಹೋಗುವುದಕ್ಕೆ ಜಾಗವಿಲ್ಲದೆ ಉಸಿರಾಟದ ತೊಂದರೆ ಮತ್ತು ಗಂಟಲ ನೋವಿನ ಸಮಸ್ಯೆ ಹೆಚ್ಚಾಗುತ್ತಿದೆ . .

ಥೈಲ್ಯಾಂಡ್ನಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ಸೊಳ್ಳೆ ಬತ್ತಿ ,ಕಾಯಿಲ್ ಮತ್ತು ಲಿಕ್ವಿಡ್ಗಳಿಂದ ಬರುವ ಹೊಗೆಯಲ್ಲಿ ಉಸಿರಾಡುವುದು ೧೦೦ ಸಿಗರೇಟ್ ಸೇದುವುದಕ್ಕೆ ಸರಿಸಮವಂತೆ.ಇದರಿಂದ ಆಸ್ತಮಾ ,ಥೈರಾಯಿಡ್ ,ಶ್ವಾಸಕೋಶ ತೊಂದರೆಗಳು ಬರುವುದು ಖಂಡಿತಾ ಎಂದು ಹೇಳುತ್ತಾರೆ.

 

 

೨೦೧೨ರಲ್ಲಿ ವೈದ್ಯರೊಬ್ಬರು ಶ್ವಾಸಕೋಶ ಕ್ಯಾನ್ಸರ್ ಬಂದಿರುವ ಕೆಲವರ ಬಗ್ಗೆ ಅಧ್ಯಯನ ಮಾಡಿದರು ,ಅದರಲ್ಲಿ ೫೦% ಜನರಿಗೆ ಧೂಮಪಾನ ಮಾಡುವ ಅಭ್ಯಾಸ ಇರಲಿಲ್ಲ ಅದು ಸೊಳ್ಳೆ ಬತ್ತಿ ,ಕಾಯಿಲ್ ಮತ್ತು ಲಿಕ್ವಿಡ್ಗಳಿಂದ ಬಂದಿರುವುದು ಎಂದು ಖಚಿತವಾಯಿತು .ಮೊದಲು ಇದನ್ನು ಉಪಯೋಗಿಸುವುದನ್ನು ನಿಲ್ಲಿಸಿ.

ಮತ್ತೆ ನಾವು ಸೊಳ್ಳೆ ಯಿಂದ ಕಚ್ಚಿಸಿಕೊಳ್ಳಬೇಕಾ ಎಂದು ನೀವು ಕೇಳಬಹುದು ?ಅದಕ್ಕೆ ಉತ್ತರ

ನಮ್ಮ ಪೂರ್ವಿಕರು ಉಪಯೋಗಿಸಿದ ಮಾರ್ಗದಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.ನಮ್ಮ ಪೂರ್ವಿಕರು ಯಾವತ್ತು ರಸಾಯನಿಕ ಪದಾರ್ಥಗಳನ್ನು ಉಪಯೋಗಿಸಿಲ್ಲ ಬದಲಾಗಿ ಸೊಳ್ಳೆ ಪರದೆ,ವಿಳ್ಯದ ಎಲೆ ಮತ್ತು ನಿಂಬೆ ಎಲೆ ಉಪಯೋಗಿಸುತ್ತಿದ್ದರು.ಇದು ಮಾರುಕಟ್ಟೆಗಳಲ್ಲಿ ದೊರೆಯುತ್ತದೆ ಇದನ್ನು ನಮ್ಮ ಮನೆಗಳಲ್ಲಿ ಬೆಳೆಯಬಹುದು.ಇದರ ವಾಸನೆ ಯಿಂದ ಸೊಳ್ಳೆ ಮನೆಯೊಳಗೆ ಬರುವುದಿಲ್ಲ ಮತ್ತು ನಮ್ಮ ದೇಹಕ್ಕೆ ಯಾವುದೇ ರೋಗಗಳು ಬರುವುದಿಲ್ಲ .

 

 

ಮತ್ತು ಸಹಜವಾಗಿ ದೊರಕುವಂತ ಬೇವಿನ ಎಣ್ಣೆ ,ಲವಂಗದ ಎಣ್ಣೆ ಯಿಂದ ದೀಪಹಚ್ಚುವುದರಿಂದ ಆ ದೀಪದ ಹೊಗೆಗೆ ಯಾವುದೇ ಸೊಳ್ಳೆ ಮನೆಗೆ ಬರುವುದಿಲ್ಲ ಮತ್ತು ನಮ್ಮ ಆರೋಗ್ಯಕ್ಕೂ ಯಾವುದೇ ಕೆಟ್ಟದು ಆಗುವುದಿಲ್ಲ .

 

 

ಆದಷ್ಟು ನೈಸರ್ಗಿಕವಾಗಿ ದೊರಕುವ ಪದಾರ್ಥಗಳನ್ನೂ ಉಪಯೋಗಿಸಿ ನಿಮ್ಮ ಆರೋಗ್ಯ ವೃದ್ಧಿಗೊಳಿಸಿಕೊಳ್ಳಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top