fbpx
ಭವಿಷ್ಯ

ನೀವು ಹುಟ್ಟಿದ ತಿಂಗಳು ನಿಮ್ಮ ಬಗ್ಗೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ ! ಅದು ಹೇಗೆ ಅಂತ ನೀವೇ ಮುಂದೆ ಓದಿ

ವರ್ಷದಲ್ಲಿ ಬರುವ ಹನ್ನೆರಡು ತಿಂಗಳಿನ  ಆಧಾರದ ಮೇಲೆ ನೀವು ಹುಟ್ಟಿದ ತಿಂಗಳನ್ನು ತಿಳಿದು ನಿಮ್ಮ ವ್ಯಕ್ತಿತ್ವವನ್ನು ಮತ್ತು ನಿಮ್ಮ ಬಗ್ಗೆ ನೀವೆ ತಿಳಿದುಕೊಳ್ಳಿ.

 ಜನವರಿ.

 

 

ಈ ತಿಂಗಳಿನಲ್ಲಿ ಹುಟ್ಟಿದವರು ಸ್ವತಂತ್ರವಾಗಿ ಜೀವಿಸಲು ಇಷ್ಟಪಡುತ್ತಾರೆ. ನಾಯಕತ್ವದ ಗುಣಗಳು ಹೆಚ್ಚಾಗಿ ಇರುತ್ತವಂತೆ. ಇವರು ತುಂಬಾ ಆಕರ್ಷಕ ವ್ಯಕ್ತಿಗಳಾಗಿದ್ದು, ಇತರರನ್ನು ಬೇಗನೆ ಆಕರ್ಷಿಸುತ್ತಾರೆ. ಎದುರಿಗೆ ಇರುವವರ ತಪ್ಪುಗಳನ್ನು ಮತ್ತು ಬಲಹೀನತೆಯನ್ನು ಲೆಕ್ಕಿಸದೆ ನಿಯತ್ತಾಗಿ ಪ್ರೀತಿಸುತ್ತಾರೆ. ಈ ತಿಂಗಳಲ್ಲಿ ಹುಟ್ಟಿದವರಿಗೆ ಹಠ ಹಿಡಿಯುವ ಗುಣ ಹೆಚ್ಚಾಗಿರುತ್ತದೆ. ಅಂದುಕೊಂಡದ್ದನ್ನು ಸಾಧಿಸುವವರೆಗೂ ಬಿಡುವುದಿಲ್ಲ. ಇವರು ನೋಡಲು ತುಂಬಾ ಸುಂದರವಾಗಿರುತ್ತಾರೆ. ಇವರಿಗೆ ಎಲ್ಲಿ  ಬಗ್ಗಬೇಕು, ಎಲ್ಲಿ ಹೇಳಬೇಕು ಎನ್ನುವುದು ತುಂಬಾ ಚೆನ್ನಾಗಿ ಗೊತ್ತಿರುತ್ತದೆ.

 ಫೆಬ್ರವರಿ .

 

 

ಇವರು ನೋಡಲು ತುಂಬಾ ಆಕರ್ಷಕರಾಗಿ ಕಾಣುತ್ತಾರೆ. ಆದರೆ ಎಲ್ಲರ ಜೊತೆ ಬೆರೆಯುವುದಿಲ್ಲ. ನಿಯತ್ತಿನ ಜೊತೆಗೆ ರೋಮಾಂಚನ ಭರಿತವಾಗಿರುತ್ತಾರೆ. ಮನಸ್ಸಿನ ಹಿಡಿತ  ಸ್ವಲ್ಪ ಇವರಿಗೆ ಕಡಿಮೆ. ಸಂಕೋಚದ  ಸ್ವಭಾವ ಇವರದ್ದು, ಪ್ರೀತಿಯನ್ನು ಬೇಗ ವ್ಯಕ್ತಪಡಿಸುವುದಿಲ್ಲ, ಇವರು ಸ್ವಲ್ಪ ಮೃದು ಸ್ವಭಾವದವರಾಗಿದ್ದು, ಕೋಪಾ ಕೂಡ ಸ್ವಲ್ಪ  ಜಾಸ್ತಿಯೇ ಇರುತ್ತದೆ. ಇತರರ ಮೇಲೆ ಆ ಕೋಪವನ್ನು ತೋರಿಸಿ ಮರು ಕ್ಷಣದಲ್ಲೇ ಅದನ್ನು ಮರೆತುಬಿಡುವ ಸ್ವಭಾವ ಇವರದ್ದು.

ಮಾರ್ಚ್ .

 

 

ಈ ತಿಂಗಳಿನಲ್ಲಿ ಹುಟ್ಟಿದವರಿಗೆ ಪ್ರವಾಸ ಅಂದರೆ ತುಂಬಾ ಇಷ್ಟ. ನಾಚಿಕೆ ಹೆಚ್ಚು. ಪ್ರೀತಿಯ ಭಾವನೆ ಹೊಂದಿರುತ್ತಾರೆ .ಯಾವುದನ್ನು ಬೇಗನೆ ಹೇಳಿಕೊಳ್ಳುವುದಿಲ್ಲ. ಇವರು ನಂಬಿಕಸ್ಥರು ಇವರ ಭಾವನೆಗಳಲ್ಲಿ ಬದುಕುವುದು ಹೆಚ್ಚು. ಹೃದಯದಿಂದ ಭಾವನೆಗಳು ತುಂಬಾ ಬೇಗನೇ ಇವರಿಗೆ ಹುಟ್ಟಿಕೊಳ್ಳುತ್ತವೆ. ಯಾವುದಾದರೂ ವಿಷಯಕ್ಕೆ ಬೇಗನೆ ಪ್ರತಿಕ್ರಿಯೆ ಮಾಡುವುದು ಹೆಚ್ಚು.

 ಏಪ್ರಿಲ್.

 

 

ಒಳ್ಳೆಯ ಮನಸ್ಸನ್ನು ಇವರು ಹೊಂದಿರುತ್ತಾರೆ. ಇತರರ ಜೊತೆ ಸೇರಿ ಕೆಲಸ ಮಾಡುವುದಕ್ಕೆ ಇಷ್ಟ ಪಡುತ್ತಾರೆ. ಸಹಾಯ ಮಾಡುವ ಗುಣ ಹೊಂದಿರುತ್ತಾರೆ. ಇವರು ಡೈನಾಮಿಕ್ ಮತ್ತು ಕ್ರಿಯಾ ಶೀಲರಾಗಿರುತ್ತಾರೆ, ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸ್ನೇಹಿತರ ಸಹಾಯ ಇವರಿಗೆ ಬೇಕಾಗುವುದು. ಇವರಿಗೆ ಬೇಗನೆ ಕೋಪ ಬರುವುದು. ಆದರೆ ಹೃದಯ ಒಳ್ಳೆಯದು ಪ್ರೀತಿಯಲ್ಲಿ ಬೇಗನೆ ಬಿದ್ದು ಬಿಡುತ್ತಾರೆ .

ಮೇ.

 

 

ಪ್ರೀತಿ ಪ್ರೇಮ ವಿಷಯದಲ್ಲಿ ಸ್ವಲ್ಪ ದುರ್ಬಲರು, ಬೇಗ ಎಲ್ಲರನ್ನೂ ನಂಬುತ್ತಾರೆ. ಎಲ್ಲದಕ್ಕೂ ಬೇಗ ಆಕರ್ಷಿತರಾಗುತ್ತಾರೆ. ಎಲ್ಲರ ಮೇಲೂ ಪ್ರೀತಿಯನ್ನು ಒಂದೇ ರೀತಿ ತೋರಿಸುತ್ತಾರೆ. ಇವರು ತಮ್ಮ ಸ್ವಂತ ನಿರ್ಣಯಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಾರೆ. ಸಂಗೀತ ಕ್ಷೇತ್ರದಲ್ಲಿ ಅಥವಾ ನಾಯಕ ನಟರಾಗುವ ಸಾಧ್ಯತೆ ಹೆಚ್ಚು. ಜೀವನದಲ್ಲಿ ಕಷ್ಟ ಪಡುತ್ತಾರೆ. ಕುಟುಂಬವನ್ನು ಇಷ್ಟಪಡುತ್ತಾರೆ. ಹೆಚ್ಚು ಮಕ್ಕಳನ್ನು ಹೊಂದಲು ಇಷ್ಟಪಡುವುದಿಲ್ಲ. ಸಹೃದಯ ಮನೋಭಾವದವರು.

 ಜೂನ್.

 

 

ಇವರು ಸುತ್ತ ಜನ ಇರಬೇಕು ಎಂದು ಬಯಸುತ್ತಾರೆ. ಹೊಸಬರ ಜೊತೆಗೆ ಸ್ನೇಹ ಬೆಳೆಸಲು ಇಷ್ಟಪಡುತ್ತಾರೆ. ಸ್ನೇಹಿತರ ಜೊತೆ ಸೇರಿ ಸಮಯ ಕಳೆಯುವುದು ಇಷ್ಟ. ಆಕರ್ಷಣೀಯ ವ್ಯಕ್ತಿಗಳು ಇವರು, ಬೇರೆಯವರು ಇವರನ್ನು  ಕಂಡ ಕೂಡಲೇ ಇಷ್ಟ ಪಡುತ್ತಾರೆ . ರೋಮಾಂಚನ ಭರಿತವಾಗಿರುವ ಇವರಿಗೆ ಸ್ವಲ್ಪ ಅಸೂಯೆ ಜಾಸ್ತಿ. ಪ್ರೀತಿ ,ಪ್ರೇಮಕ್ಕೆ ಹೇಳಿ ಮಾಡಿಸಿದ ವ್ಯಕ್ತಿಗಳು ಇವರು. ಬೇರೆಯವರ ಜೊತೆ ಸುಲಭವಾಗಿ ಹೊಂದಿಕೊಂಡು ಹೋಗುತ್ತಾರೆ. ಕೋಪ ಮೂಗಿನ ಮೇಲೆ ಇರುತ್ತದೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದರಲ್ಲಿ ಮುಂದಿರುತ್ತಾರೆ.

 ಜುಲೈ.

 

 

ಇವರಿಗೆ ಅಹಂಕಾರ ಜಾಸ್ತಿ. ನಾನೇ ಎಲ್ಲವನ್ನೂ ಮಾಡಬೇಕು ಎಂದುಕೊಳ್ಳುತ್ತಾರೆ. ದೊಡ್ಡ ಹೆಸರು ಪಡೆಯಬೇಕು ಎಂದು ಭಾವಿಸುತ್ತಾರೆ. ಅಂದುಕೊಂಡಿದ್ದು ಆಗದಿದ್ದರೆ ತುಂಬಾ ನಿರುತ್ಸಾಹ ಪಡುತ್ತಾರೆ. ಅಹಂಕಾರದಿಂದ ಆತ್ಮೀಯರನ್ನು ದೂರ ಮಾಡಿಕೊಳ್ಳುವರು.  ನಿಯತ್ತಿನ ವ್ಯಕ್ತಿಗಳು ಇವರು ಆದರೆ ಇವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಒಂದು ಸಾರಿ ಮನಸ್ಸಿಗೆ ನೋವಾದರೆ ಸಹಜ ಸ್ಥಿತಿಗೆ ಬರಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ.

 ಆಗಸ್ಟ್ .

 

 

ಇವರಿಗೆ ಸಂಗೀತ ಎಂದರೆ ಇಷ್ಟ. ಜೀವನದಲ್ಲಿ ಹಾಗೆ ಆಗಬೇಕು, ಹೀಗೆ ಆಗಬೇಕು ಎಂದು ಬರೀ ಹಗಲುಗನಸು ಕಾಣುತ್ತಾರೆ ಹಾಗೂ ಅವುಗಳು ನೆರವೇರದೆ ಹೋದಲ್ಲಿ ತುಂಬಾ ನೋವು ಪಡುತ್ತಾರೆ. ಇವರಿಗೆ ಅನುಮಾನ ಕೂಡ ಜಾಸ್ತಿ . ಪ್ರತಿ ವಿಷಯವನ್ನು ಅನುಮಾನದಿಂದಲೇ ನೋಡುತ್ತಾರೆ. ಎಷ್ಟು ಸಹಜವಾಗಿ ಇರುತ್ತಾರೋ… ಅಷ್ಟೇ ರಹಸ್ಯಗಳನ್ನು ಸಹ ಬಚ್ಚಿಟ್ಟಿರುತ್ತಾರೆ.  ಸಮಾಜದ ಮೂಲ ಸ್ತಂಭಗಳು ಇವರು. ಇವರು ಇತರರನ್ನು ಪ್ರೋತ್ಸಾಹಿಸುತ್ತಾರೆ. ಸುಲಭವಾಗಿ ಹಣವನ್ನು ಸಂಪಾದಿಸುತ್ತಾರೆ. ಪ್ರೀತಿಸಿದವರನ್ನು ತುಂಬಾ ಚೆನ್ನಾಗಿ ಆರೈಕೆ ಮಾಡುತ್ತಾರೆ. ಜೀವನದಲ್ಲಿ ಸ್ವಲ್ಪ ಕಷ್ಟಗಳನ್ನು ಎದುರಿಸಬೇಕಾಗುವುದು ಮತ್ತು ಇವರಿಗೆ ಧೈರ್ಯ ಜಾಸ್ತಿ.

 ಸೆಪ್ಟೆಂಬರ್.

 

 

ಸ್ನೇಹಿತರ ಸಮಸ್ಯೆಗಳನ್ನು ತಿಳಿದುಕೊಂಡು ಅದನ್ನು ಪರಿಹರಿಸುವುದು ಮತ್ತು ಅವರಿಗೆ ಸಾಂತ್ವನ ಹೇಳುವುದು ಜಾಸ್ತಿ . ತುಂಬಾ ಬುದ್ಧಿವಂತರು  ಮತ್ತು ಭಯಪಡುವುದಿಲ್ಲ. ಆತ್ಮೀಯರನ್ನು ತುಂಬಾ ಚೆನ್ನಾಗಿ ಆರೈಕೆ ಮಾಡುತ್ತಾರೆ. ಇವರ ದೊಡ್ಡ ಬಲಹೀನತೆ ಎಂದರೆ ಖಿನ್ನತೆ  ಹಾಗೂ  ಬೇಗನೇ ರಾಜಿಯಾಗುತ್ತಾರೆ, ಜಾಗೃತರಾಗಿರುತ್ತಾರೆ, ತುಂಬಾ ಸೂಕ್ಷ್ಮ ಸ್ವಭಾವದವರು. ರಹಸ್ಯಗಳನ್ನು ಬಚ್ಚಿಡುತ್ತಾರೆ, ಭಾವನೆಗಳನ್ನು ಯಾರ ಬಳಿಯೂ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ .

ಅಕ್ಟೋಬರ್ .

 

 

ಸ್ನೇಹಿತರಿಗೆ ಬೇಗ ನೋವು ಕೊಟ್ಟರೂ ಮತ್ತೆ ಮಾತನಾಡುತ್ತಾರೆ . ತುಂಬಾ ಸೂಕ್ಷ್ಮ ಮತ್ತು ಆಕರ್ಷಕ ವ್ಯಕ್ತಿಗಳು. ಸುಳ್ಳನ್ನು ಸಹ ಹೇಳುತ್ತಾರೆ. ಆದರೆ ನಟನೆ ಮಾಡುವುದಿಲ್ಲ. ಬೇರೆಯವರ ಜೊತೆ ಸಂಭಾಷಣೆ ಮಾಡಲು ಇಷ್ಟ ಪಡುತ್ತಾರೆ . ಇವರು ತುಂಬಾ ಅದೃಷ್ಟವಂತರು. ಗುರಿಯನ್ನು ಮುಟ್ಟುತ್ತಾರೆ. ತುಂಬಾ ಭಾವನಾತ್ಮಕ ವ್ಯಕ್ತಿಗಳು, ಎಲ್ಲರನ್ನೂ ಪ್ರೀತಿಸುವ ಇವರು ತಮ್ಮನ್ನು ಬೇರೆಯವರು ಪ್ರೀತಿಸಬೇಕು ಎಂದು ನಿರೀಕ್ಷಿಸುತ್ತಾರೆ. ಕೆಲವೊಮ್ಮೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ.

 ನವೆಂಬರ್.

 

 

ತುಂಬಾ ನಂಬಿಕಸ್ತರು, ವಿಶ್ವಾಸ ಜಾಸ್ತಿ ಉಳ್ಳವರು, ಏನಾದರೂ ಮಾಡಬೇಕು ಅಂದುಕೊಂಡರೆ ಅದರ ಬಗ್ಗೆ ಆಲೋಚನೆ ಮಾಡುತ್ತಾರೆ. ತುಂಬಾ ಪ್ರಮಾದದ ವ್ಯಕ್ತಿಗಳು ಗಡಿಬಿಡಿಯಾಗಿದ್ದರೂ ರಹಸ್ಯಗಳನ್ನು ಮಾತ್ರ ಬಿಚ್ಚಿಡುವುದಿಲ್ಲ. ಸ್ವತಂತ್ರವಾಗಿರಲು ಇಷ್ಟ ಪಡುತ್ತಾರೆ. ಇವರು  ನೋಡಲು ತುಂಬಾ ಸುಂದರವಾಗಿರುತ್ತಾರೆ . ಕೆಲವೊಮ್ಮೆ ಸೂಕ್ಷ್ಮ ಭಾವನೆಗಳಿಂದ ಒತ್ತಡಕ್ಕೆ ಗುರಿಯಾಗುತ್ತಾರೆ. ತುಂಬಾ ಸೂಕ್ಷ್ಮವಾಗಿ ಆಲೋಚಿಸುತ್ತಾರೆ. ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುತ್ತಾರೆ. ಹಾಗೆ ತುಂಬಾ ರೋಮಾಂಚನ ವ್ಯಕ್ತಿಗಳು.

 ಡಿಸೆಂಬರ್ .

 

ಮೇಲೆ ಹೇಳಿದ ಎಲ್ಲಾ ವ್ಯಕ್ತಿಗಳಿಗೆ ಹೋಲಿಸಿದರೆ ಎಲ್ಲ ವಿಷಯದಲ್ಲೂ ಉತ್ತಮ ರಾಗಿರುತ್ತಾರೆ. ನೋಡುವುದಕ್ಕೆ ತುಂಬಾ ಚೆನ್ನಾಗಿ ಇರುವುದರ ಜೊತೆಗೆ ವಿಶ್ವಾಸವನ್ನು ಹೊಂದಿರುತ್ತಾರೆ. ಉದಾರವಾದ ಮನಸ್ಸನ್ನು ಹೊಂದಿರುವ ಇವರು ಪ್ರತಿಯೊಂದು ವಿಷಯದಲ್ಲೂ ಪೈಪೋಟಿಗೆ ಬೀಳುತ್ತಾರೆ. ಇವರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ . ಪ್ರೀತಿಯಿಂದ ಇರುತ್ತಾರೆ. ಆದರೆ ಬೇಗ ಇವರ ಮನಸ್ಸಿಗೆ ನೋವುಂಟಾಗುತ್ತದೆ . ಇವರು ಹೆಚ್ಚು  ತತ್ವಜ್ಞಾನಿಗಳಾಗುತ್ತಾರೆ. ಸುಲಭವಾಗಿ ಅದೃಷ್ಟವನ್ನು ಹೊಂದುತ್ತಾರೆ. ಸಹನೆ ಕಡಿಮೆ, ಹೊಗಳಿಕೆಯನ್ನು ಇಷ್ಟಪಡುತ್ತಾರೆ. ತುಂಬಾ ನಕಾರಾತ್ಮಕವಾಗಿ ಆಲೋಚನೆ ಮಾಡುತ್ತಾರೆ. ಒಳ್ಳೆಯ ವ್ಯಕ್ತಿಗಳು ಆದರೆ ಎಲ್ಲದಕ್ಕೂ ಹೊಂದಿಕೊಳ್ಳುವುದು ಕಡಿಮೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top