fbpx
ದೇವರು

ಸ್ತ್ರೀಯರು ಶಬರಿಮಲೆ ಎಂದೇ ಪ್ರಸಿದ್ಧಿ ಪಡೆದು ಗಿನ್ನಿಸ್ ದಾಖಲೆಗೆ ಸೇರಿರುವ ದೇವಾಲಯ ಯಾವುದು ? ಎಂದು ನಿಮಗೆ ಗೊತ್ತೇ ?

ಸ್ತ್ರೀಯರು ಶಬರಿಮಲೆ ಎಂದೇ ಪ್ರಸಿದ್ಧಿ ಪಡೆದು ಗಿನ್ನಿಸ್ ದಾಖಲೆಗೆ ಸೇರಿರುವ ದೇವಾಲಯ ಯಾವುದು ? ಎಂದು ನಿಮಗೆ ಗೊತ್ತೇ ?

 

 

ಈ ದೇವಾಲಯವು ಹೆಣ್ಣು ಮಕ್ಕಳ ಶಬರಿಮಲೆ ಎಂದೇ ಪ್ರಖ್ಯಾತಿಯಾಗಿದೆ. ಹಾಗೂ ಈ ದೇವಿಯ ದೇವಸ್ಥಾನವೂ ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಯಾಗಿದೆ. ಯಾಕೆ ? ಎನ್ನುವುದನ್ನು ಇಲ್ಲಿ ಓದಿ ತಿಳಿದುಕೊಳ್ಳಿ. ನಮ್ಮ ಭಾರತೀಯ ಹಿಂದೂ ದೇವಾಲಯಗಳು ಪ್ರತಿಯೊಂದು ಸಹ ತನ್ನದೇ ಆದ ವಿಶೇಷತೆಯನ್ನು ಹಾಗೂ ತನ್ನದೇ ಆದ ಮಹತ್ವವನ್ನು ಸಹ ಹೊಂದಿದೆ.

 

 

 

ಅಟ್ಟುಕಲ್ ಭಗವತಿ ದೇವಾಲಯವು ಕೇರಳದಲ್ಲಿ ಅಷ್ಟೇ ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಅಟ್ಟುಕಲ್ ಭಗವತಿ ದೇವಾಲಯವು ಕೇರಳದ ತಿರುವನಂತಪುರಂ ಬಳಿ ಇರುವ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ದೇವಾಲಯ ಕೂಡ ಇದಾಗಿದೆ . ಇದು ಹೆಣ್ಣು ಮಕ್ಕಳ ಶಬರಿಮಲೆ ಎಂದೇ ಹೆಸರುವಾಸಿಯಾಗಿದೆ. ಈ ದೇವಿಯ ದೇವಸ್ಥಾನ ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಯಾಗಿ.

 

 

ಇದಕ್ಕೆ ಕಾರಣ ಇಡೀ ಪ್ರಪಂಚದಲ್ಲಿ ಅಧಿಕ ಸಂಖ್ಯೆಯ ಹೆಣ್ಣು ಮಕ್ಕಳು ಒಟ್ಟಾಗಿ ಸೇರಿ ಓಲೆ ಹಾಕಿ ಅದರ ಅದರ ಮೇಲೆ ಮಣ್ಣಿನ ಪಾತ್ರೆಯನ್ನಿಟ್ಟು ಪೊಂಗಲ್ ತಯಾರಿಸುತ್ತಾರೆ. ಅದು ಚೆನ್ನಾಗಿ ಕುದಿಯುವುದು ನಂತರ ಉಕ್ಕಿ ಮೇಲೆ ಬಂದು ಬೆಂಕಿಯ ಮೇಲೆ ಬೀಳಬೇಕು ಎನ್ನುವ ಸಂಪ್ರದಾಯ ಸಾವಿರಾರು ವರ್ಷಗಳ ಹಿಂದೆಯಿಂದಲೂ ನಡೆದುಕೊಂಡು ಬಂದಿದೆ.

 

 

ಅಷ್ಟೇ ಅಲ್ಲದೆ ಈ ಆಚರಣೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಣ್ಣು ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಅದು ಎಲ್ಲಿಯವರೆಗೆ ಅಂದರೆ ಸುಮಾರು ಹತ್ತು ಕಿಲೋಮೀಟರ್ ವಿಸ್ತೀರ್ಣದವರೆಗೂ ಹೆಣ್ಣು ಮಕ್ಕಳು ಇಲ್ಲಿ ಒಲೆ ಹಾಕಿ ಪೊಂಗಲ್ ತಯಾರಿಸುತ್ತಾರೆ.

 

 

ಇತ್ತೀಚೆಗೆ ಜನಸಂಖ್ಯೆ ಹೆಚ್ಚಾಗಿ ಕಂಡು ಬಂದಿರುವ ಕಾರಣ ಅದರ ಉದ್ದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದ ಕಡೆಯವರೆಗೂ ಮುಟ್ಟಿದೆ. ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಕೆಳಗಿಳಿದ ಯಾತ್ರಾರ್ಥಿಗಳು ( ಭಕ್ತಾದಿಗಳು) ಪೊಂಗಲ್ ಮಾಡಿ ತಮ್ಮ ದೈವ ಭಕ್ತಿಯನ್ನು ತೋರಿಸಿಕೊಳ್ಳುತ್ತಾರೆ. ಈ ಪೊಂಗಲ್ ಹಬ್ಬವೂ ವರ್ಷಂಪ್ರತಿ ಭರಣಿ ನಕ್ಷತ್ರದ ಮಕರ ಮಾಸ ಅಥವಾ ಕುಂಭ ಮಾಸದಲ್ಲಿ ಜರುಗುತ್ತದೆ. ಹತ್ತು ದಿವಸಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಉತ್ಸವದಲ್ಲಿ ವಿದೇಶಿ ಮಹಿಳೆಯರು ಸಹ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top