fbpx
ಭವಿಷ್ಯ

ಸೂರ್ಯ ಮುಳುಗಿದ ನಂತರ ಹಾಲು ಮೊಸರು ದಾನ ಮಾಡಬಾರದು ಯಾಕೆ ಗೊತ್ತಾ ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ನಿರ್ದಿಷ್ಟವಾದ ಸಮಯದಲ್ಲಿಯೇ ದಾನ ಮಾಡಬೇಕು ಇಲ್ಲವಾದಲ್ಲಿ ಆರ್ಥಿಕವಾಗಿ ನಷ್ಟ ಸಂಭವಿಸುವುದು.

 

 

ಸೂರ್ಯ ಮುಳುಗಿದ ನಂತರ ಹಾಲು ಮೊಸರು ದಾನ ಮಾಡಬಾರದು ಯಾಕೆ ಗೊತ್ತಾ ? ಸೂರ್ಯಾಸ್ತದ ನಂತರ ಈ ವಸ್ತುಗಳನ್ನು ದಾನ ಮಾಡಿದರೆ ಸಂಕಷ್ಟ ನಿಶ್ಚಿತವೆಂದು ಹೇಳಲಾಗಿದೆ.

ಜೀವನದಲ್ಲಿ ಸಮಸ್ಯ, ಆರ್ಥಿಕವಾಗಿ ನಷ್ಟ ಉಂಟಾದಾಗ ಅದರಿಂದ ಹೊರಬರಲು ಜನರು ಏನ್ನೆಲ್ಲ ಕಸರತ್ತು ಮಾಡುತ್ತಾರೆ. ಕೆಲವರು ಜ್ಯೋತಿಷ್ಯಗಳು ಮೊರೆ ಹೋಗುತ್ತಾರೆ, ಮತ್ತೆ ಕೆಲವರು ದಾನ ಧರ್ಮಕ್ಕೆ ಮುಂದಾಗುತ್ತಾರೆ. ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ ನಿಜ.

 

 

ಆದರೆ ಎಲ್ಲ ವಸ್ತುಗಳನ್ನು ಎಲ್ಲ ಸಮಯದಲ್ಲಿಯೂ ದಾನ ಮಾಡುವುದು ಸೂಕ್ತವಲ್ಲ. ಶಾಸ್ತ್ರದ ಪ್ರಕಾರ ಸಂಜೆ ಕೆಲವೊಂದು ವಸ್ತುಗಳನ್ನು ದಾನ ಮಾಡುವುದು ಶುಭವಲ್ಲ. ಅದರಿಂದ ಧನ ಹಾನಿ ಉಂಟಾಗುತ್ತದೆ. ಈರುಳ್ಳಿ, ಬೆಳ್ಳುಳ್ಳಿಯನ್ನು ಕೇತುವಿಗೆ ಹೋಲಿಕೆ ಮಾಡಲಾಗುತ್ತದೆ .

ಕೇತು ಗ್ರಹವನ್ನು ನಕಾರಾತ್ಮಕ ಶಕ್ತಿಯ ಮಾಲೀಕರೆಂದು ಪರಿಗಣಿಸಲಾಗಿದೆ. ತಾಂತ್ರಿಕರು ಮಂತ್ರ ವಿದ್ಯೆಯನ್ನು ಸಂಜೆಯ ಸಮಯದಲ್ಲಿ ಮಾಡುತ್ತಾರೆ. ಹಾಗಾಗಿ ಸಂಜೆ ವೇಳೆ ಈರುಳ್ಳಿ, ಬೆಳ್ಳುಳ್ಳಿಯನ್ನು ದಾನ ಮಾಡಬಾರದು .

ಸಂಜೆ ವೇಳೆ ಯಾರಾದರೂ ಹಣ ಕೇಳಲು ಬಂದರೆ ಅಪ್ಪಿತಪ್ಪಿಯೂ ಅವರಿಗೆ ದಾನ ನೀಡಬಾರದು. ಸೂರ್ಯಾಸ್ತದ  ಸಮಯ ಲಕ್ಷ್ಮೀ ದೇವಿಯು  ಮನೆಗೆ ಬರುವ ಸಮಯವಾಗಿದೆ. ಈ ವೇಳೆ ಹಣವನ್ನು ದಾನ ಮಾಡಬಾರದು.

 

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಾರ ಯಾರಿಗೂ ಯಾವುದೇ ಕಾರಣಕ್ಕೂ ಅರಿಶಿನವನ್ನು ದಾನ ಮಾಡಬಾರದು. ಈ ದಿನ ಅರಿಶಿನವನ್ನು ದಾನ ಮಾಡಿದರೆ ಗುರುಗ್ರಹ ದುರ್ಬಲವಾಗುತ್ತದೆ. ಅರಿಶಿನ ಎಂದರೆ ಹಳದಿ ಬಣ್ಣದಲ್ಲಿರುವ ಹರಿಶಿಣ ಇದು  ಗುರುಗ್ರಹದ ಸಂಕೇತವಾಗಿದೆ.

ಸೂರ್ಯ ಹಾಗೂ ಚಂದ್ರ ಇಬ್ಬರನ್ನು ಹಾಲಿಗೆ ಹೋಲಿಕೆ ಮಾಡಲಾಗುತ್ತದೆ. ಸೂರ್ಯಾಸ್ತದ ವೇಳೆ ಹಾಗೂ ರಾತ್ರಿಯ ಸಮಯದಲ್ಲಿ ಹಾಲನ್ನು ದಾನ ಮಾಡಿದರೆ ತಾಯಿ ಲಕ್ಷ್ಮೀ ದೇವಿಯು ಹಾಗೂ  ಶ್ರೀಮನ್ನಾ ನಾರಾಯಣ ದೇವನು ಕೋಪಗೊಳ್ಳುತ್ತಾರೆ ಎಂದು ನಂಬಲಾಗಿದೆ.

 

 

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮೊಸರನ್ನು ಶುಕ್ರನಿಗೆ ಹೋಲಿಸಲಾಗಿದೆ. ಇದು ಸಂತೋಷ  ಮತ್ತು ಸಮೃದ್ಧಿಯನ್ನು ಮನೆಯಲ್ಲಿ ಹೆಚ್ಚಿಸುತ್ತದೆ. ಹಾಗಾಗಿ ಸೂರ್ಯಾಸ್ತದ ಸಮಯದಲ್ಲಿ ಮತ್ತು ಸೂರ್ಯಾಸ್ತದ ನಂತರ ಮೊಸರನ್ನು ದಾನ ಮಾಡಬಾರದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top