fbpx
ಮನೋರಂಜನೆ

ತಂದೆಗೆ ಬರ್ತಡೇ ಗಿಫ್ಟ್ ನೀಡಿದ ನಿಖಿಲ್‌: ಸಕ್ಕತ್ತಾಗಿದೆ ಕುರುಕ್ಷೇತ್ರದ ಟೀಸರ್.

ತಂದೆಗೆ ಬರ್ತಡೇ ಗಿಫ್ಟ್ ನೀಡಿದ ನಿಖಿಲ್‌: ಸಕ್ಕತ್ತಾಗಿದೆ ಕುರುಕ್ಷೇತ್ರದ ಟೀಸರ್.

 

 

ಸದ್ಯ ಸ್ಯಾಂಡಲ್’ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರಗಳಲ್ಲಿ ಕುರುಕ್ಷೇತ್ರ ಚಿತ್ರವೂ ಕೂಡ ಒಂದು. ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತವನ್ನು ತಲುಪಿದ್ದು ಇದೆ ಡಿಸೆಂಬರ್ ಅಂತ್ಯದೊಳಗೆ ಶೂಟಿಂಗ್ ಪೂರ್ಣಗೊಳ್ಳಲಿದೆ.. ಈ ನಿಟ್ಟಿನಲ್ಲಿ ಚಿತ್ರದ ಶೂಟಿಂಗ್ ಮುಗಿಯುವ ಮೊದಲೇ ಪ್ರೊಮೋಷನ್ ಅನ್ನು ಆರಂಭಿಸಿರುವ ಚಿತ್ರತಂಡ ಮತ್ತೊಂದು ಟೀಸರ್ ಅನ್ನು ಬಿಡುಗಡೆ ಮಾಡಿದೆ.

 

 

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಜನುಮ ದಿನದ ಅಂಗವಾಗಿ ಇವತ್ತು (ಡಿಸೆಂಬರ್ 16) ಕುರುಕ್ಷೇತ್ರ ಚಿತ್ರದ ಮತ್ತೊಂದು ಟೀಸರ್ ಬಿಡುಗಡೆ ಮಾಡಲಾಗಿದೆ.ಚಿತ್ರದ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡಿರುವ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಗೌಡ ಅವರ ಪಾತ್ರದ ಟೀಸರ್ ಇದಾಗಿದ್ದು ಅಭಿಮನ್ಯುವಿನ ಝಲಕ್ ಟೀಸರ್ ನಲ್ಲಿ ಕಂಗೊಳಿಸುತ್ತಿದೆ. ಈ ಟೀಸರ್ ನೋಡಿದ ಮೇಲೆ ಚಿತ್ರದ ಮೇಲೆ ಇದ್ದ ನಿರೀಕ್ಷೆ ಎರಡರಷ್ಟಾಗುತ್ತದೆ ಎಂದು ಹೇಳಿದರೆ ತಪ್ಪಾಗೊದಿಲ್ಲ. 1 ನಿಮಿಷ 38 ಸೆಕೆಂಡ್ ಇರುವ ಈ ಟೀಸರ್ ತುಂಬಾ ರಿಚ್ ಆಗಿ ಮೂಡಿಬಂದಿದೆ.

ಕುರುಕ್ಷೇತ್ರ ಚಿತ್ರದ ಅಭಿಮನ್ಯು ಟೀಸರ್ ಅನ್ನು ಇಲ್ಲಿ ನೋಡಿ.

 

 

ಕುರುಕ್ಷೇತ್ರ ಚಿತ್ರವೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರವಾಗಿದ್ದು ಚಿತ್ರದಲ್ಲಿ ಅರ್ಜುನ್ ಸರ್ಜಾ, ರವಿಚಂದ್ರನ್, ಅಂಬರೀಷ್, ಸೋನು ಸೂದ್, ಡ್ಯಾನಿಶ್ ಅಖ್ತರ್ ಸೈಫಿ, ನಿಖಿಲ್ ಕುಮಾರ್, ರವಿಶಂಕರ್, ಮೇಘನಾ ರಾಜ್, ಭಾರತೀ ವಿಷ್ಣುವರ್ಧನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. .ಕುರುಕ್ಕ್ಷೇತ್ರ ಚಿತ್ರಕ್ಕೆ ಭಾರತೀಯ ಮಹಾಕಾವ್ಯ ಮಹಾಭಾರತವನ್ನು ಆಧರಿಸಿ ಜೆ.ಕೆ. ಭಾರವಿಯವರು ಬರೆದಿದ್ದಾರೆ..ಸಿನಿಮಾವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು, ಮುನಿರತ್ನ ನಿರ್ಮಾಪಕರಾಗಿದ್ದಾರೆ..ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top