fbpx
ಮನೋರಂಜನೆ

ಫಿಕ್ಸ್‌ ಆಯ್ತು ನಟಿ ಭಾವನಾ ಮದುವೆ ಡೇಟ್..!

ಫಿಕ್ಸ್‌ ಆಯ್ತು ನಟಿ ಭಾವನಾ ಮದುವೆ ಡೇಟ್..!

 

 

ಬಹುಭಾಷಾ ನಟಿ, ಮಲಯಾಳಂ ಬೆಡಗಿ ಭಾವನಾ ಮೆನನ್ ಅವರ ಮದುವೆಗೆ ಮುಹೂರ್ತ ಫಿಕ್ಸ್ ಆಗಿದ್ದು ಶೀಘ್ರದಲ್ಲಿಯೇ ಭಾವನಾ ಸಪ್ತಪದಿ ತುಳಿಯಲಿದ್ದಾರೆ. ಕನ್ನಡ ಚಿತ್ರ ನಿರ್ಮಾಪಕ ನವೀನ್ ಅವರನ್ನು ಶೀಘ್ರದಲ್ಲೇ ವರಿಸಲಿದ್ದಾರೆ.

 

 

ಕಳೆದ ಮಾರ್ಚ್ 9ರಂದು ಕೊಚ್ಚಿಯಲ್ಲಿ ನವೀನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾವನಾ ಇದೆ ತಿಂಗಳು 22ರಂದು ಕೇರಳದ ತ್ರಿಶೂರ್’ನಲ್ಲಿ ನವೀನ್ ಅವರ ಜೊತೆ ವಿವಾಹ ಮಾಡಿಕೊಳ್ಳಲಿದ್ದಾರೆ. ಸಂಬಂಧಿಕರು ಹಾಗೂ ಆಪ್ತರನ್ನಷ್ಟೇ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ವತಃ ಭಾವನಾ ಅವರ ತಾಯಿ ಪುಷ್ಪಾ ಅವರು ಹೇಳಿದ್ದಾರೆ.

ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದ ಭಾವನಾ ನಂತರ ಬಂದ `ರೋಮಿಯೊ’, `ವಿಷ್ಣುವರ್ಧನ್’ `ಬಚ್ಚನ್’ ‘ಟೋಪಿವಾಲ’ ‘ಮುಕುಂದ ಮುರಾರಿ’ ಚಿತ್ರಗಳಲ್ಲೂ ಅಭಿನಯಿಸಿದ್ದರು. ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಟಗರು ಚಿತ್ರದಲ್ಲೂ ಕೂಡ ಭಾವನಾ ನಟಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top