fbpx
ಸಮಾಚಾರ

ಬಾಟಲ್ ನೀರು: ಕಂಡಷ್ಟ್ ರೇಟಿಗೆ ಮಾರು! ‘ದಿ ಎಕನಾಮಿಕ್ಸ್ ಟೈಮ್ಸ್’ ವರದಿಯಲ್ಲೇನಿದೆ?

ಬಾಟಲ್ ನೀರು: ಕಂಡಷ್ಟ್ ರೇಟಿಗೆ ಮಾರು! ‘ದಿ ಎಕನಾಮಿಕ್ಸ್ ಟೈಮ್ಸ್’ ವರದಿಯಲ್ಲೇನಿದೆ?

 

ನೀರು ಜೀವಜಲ. ಅದು ನಿಸರ್ಗ ಸಹಜ ಕೊಡುಗೆ. ಅಭಿವೃದ್ಧಿ ಹೆಸರಿನಲ್ಲಿ ಪ್ರಭುತ್ವ ನಡೆಸುತ್ತಿರುವ ‘ಕಾರ್ಯಕ್ರಮ’ಗಳಿಂದಿಂದು ಶುದ್ಧ ಕುಡಿಯುವ ನೀರಿಗೇ ಸಂಚಕಾರ ಬಂದಿದೆ. ಇದನ್ನೇ ಅವಕಾಶ ಮಾಡಿಕೊಂಡ ಉದ್ಯಮಗಳು ಕಳೆದ ಮೂರು ದಶಕಗಳಿಂದ ‘ಬಾಟಲ್ ನೀರು’ ಮಾರುತ್ತ ಬೆಳೆದಿವೆ.

ಈ ಕಂಪನಿಗಳು ನಿಸರ್ಗದ ನೀರನ್ನೇ ಎತ್ತಿ, ಅದನ್ನು ಶುದ್ಧಿಕರಿಸಿ ತಮಗೆ ಇಷ್ಟ ಬಂದ ದರಕ್ಕೆ ಮಾರುತ್ತ ಬಂದಿವೆ. ಪ್ರತಿಷ್ಠಿತ ಹೊಟೆಲ್, ರೆಸ್ಟೊರೆಂಟ್, ಲಾಡ್ಜ್‍ಗಳು ಎಂಆರ್‍ಪಿ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ನೀರನ್ನುಮಾರಿ ಜನರನ್ನು ಕೊಳ್ಳೆ ಹೊಡೆಯುತ್ತಿವೆ. ವಿಪರ್ಯಾಸವೆಂದರೆ, ಇತ್ತೀಚಿನ ಕೋರ್ಟ್ ತೀರ್ಪೊಂದು ಈ ಲೂಟಿಕೋರರ ಪರವಾಗಿಯೇ ಬಂದಿರುವುದನ್ನು ‘ದಿ ಎಕನಾಮಿಕ್ಸ್ ಟೈಮ್ಸ್’ ವರದಿ ಮಾಡಿದೆ.

 

 

ಕೇಂದ್ರ ಸರ್ಕಾರದ ವಿರುದ್ಧ ಭಾರತದ ಹೊಟೆಲ್ ಉದ್ಯಮಗಳ ಒಕ್ಕೂಟ (ಎಫ್‍ಎಚ್‍ಆರ್‍ಎಐ) ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್‍ನ ಪೀಠವೊಂದು, ‘ಹೊಟೆಲ್‍ಗಳು, ರೆಸ್ಟೊರೆಂಟ್‍ಗಳು ಸೇವೆಯನ್ನೂ ಒದಗಿಸುತ್ತವಾದ್ದರಿಂದ ಅವು ಹೆಚ್ಚಿನ ದರದಲ್ಲಿ ನೀರುಮತ್ತು ಇತರ ಪ್ಯಾಕೇಜ್ಡ್ ಆಹಾರಗಳ ಮೇಲೆ ಎಂಆರ್‍ಪಿಗಿಂತ ಹೆಚ್ಚಿನ ದರ ವಿಧಿಸಬಹುದು’ ಎಂದು ತೀರ್ಪು ನೀಡಿದೆ!

 

ಅಂದರೆ ಶುದ್ಧ ನೀರನ್ನೀಗ ಕಂಡಷ್ಟು ರೇಟಿಗೆ ಮಾರಬಹುದು!

 

 

ನಮ್ಮ ಪ್ರಶ್ನೆ ಇಷ್ಟೇ: ಕೇಂದ್ರ ಸರ್ಕಾರದ ವಕೀಲರು ಇದರ ವಿರುದ್ಧ ಸಮಂಜಸ ವಾದ ಮಂಡಿಸಬಹುದಿತ್ತಲ್ಲವೇ? ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ಸಾವಿರಾರು ಗ್ರಾಮಗಳಲ್ಲಿ ತೆರೆದಿರುವ ಶುದ್ಧ ನೀರಿನ ಘಟಕಗಳು ಕೇವಲ 2 ರೂಪಾಯಿಗೆ 20 ಲೀಟರ್ ಶುದ್ಧನೀರನ್ನು ನೀಡುತ್ತಿವೆ ಎಂಬ ಅಂಶವನ್ನು ಕೋರ್ಟಿನ ಗಮನಕ್ಕೆ ತಂದಿದ್ದರೆ ತೀರ್ಪೇ ಬೇರೆಯಾಗುತ್ತಿತ್ತು ಅಲ್ಲವೇ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top