fbpx
ಭವಿಷ್ಯ

ಜನ್ಮ ಕುಂಡಲಿ ನೋಡಿ ನಿಮ್ಮ ಜಾತಕವನ್ನು ಹೇಗೆ ನೀವೇ  ತಿಳಿದುಕೊಳ್ಳಬಹುದು. ಹೇಗೆ ನೋಡಬೇಕು? ಎಂದು ತಿಳಿಯಿರಿ

ನಿಮ್ಮ ಜಾತಕವನ್ನು ಹೇಗೆ ನೀವೇ  ತಿಳಿದುಕೊಳ್ಳಬಹುದು. ಹೇಗೆ ನೋಡಬೇಕು? ಎಂದು ತಿಳಿಯಿರಿ .

 

ನಿಮ್ಮ ಜಾತಕವನ್ನು ನಿವೇ ತಿಳಿಯಬಹುದು. ನಾವು ಹುಟ್ಟಿದ ದಿನಾಂಕ, ತಿಂಗಳು, ವರ್ಷ ಮತ್ತು ಜನಿಸಿದ  ಸರಿಯಾದ ಸಮಯ ಇದ್ದರೆ ನಮ್ಮ ಜನ್ಮ ಜಾತಕವನ್ನು ನಾವೇ ನೋಡಿ ತಿಳಿದುಕೊಳ್ಳಬಹುದು . ಯಾವ ಮನೆಯಲ್ಲಿ ಯಾವ ಗ್ರಹಗಳಿವೆ ಅವುಗಳಿಂದ ಎಂತಹ ದೋಷ ಉಂಟಾಗಲಿದೆ  ಯಾವೆಲ್ಲ ಕಷ್ಟಗಳನ್ನು ಎದುರಿಸಬೇಕು ಮತ್ತು ಯಾವೆಲ್ಲಾ ಒಳ್ಳೆಯ ಫಲಗಳಿವೆ, ಎಂಬುದನ್ನು ಮತ್ತು ನಮ್ಮ ಜೀವನ ಮುಂದೆ ಹೇಗಿರುತ್ತದೆ ಎನ್ನುವ ಎಲ್ಲ ವಿಷಯಗಳನ್ನು ಸಹ ತಿಳಿದುಕೊಳ್ಳಬಹುದಾಗಿದೆ.

 

 

ಈ ಜನ್ಮ ಕುಂಡಲಿಯಲ್ಲಿ ಅಥವಾ ಜನ್ಮಜಾತಕ ಎಂದು ಕರೆಯುವುದನ್ನು ಹೇಗೆ ನೋಡಬೇಕು ? ಅದರ ಬಗ್ಗೆ ತಿಳಿದುಕೊಳ್ಳಬೇಕು  ಎಂದರೆ ನಮಗೆ ಒಬ್ಬ ವ್ಯಕ್ತಿಯು ಜನಿಸಿದ ಸಮಯ, ದಿನಾಂಕ, ತಿಂಗಳು,ವರ್ಷ  ಮತ್ತು ಜನಿಸಿದ ಸ್ಥಳ ಇದ್ದರೆ ಸಾಕು ನಾವು ನಮ್ಮ ಜಾತಕವನ್ನು ನಾವೇ ತಿಳಿದುಕೊಳ್ಳಬಹುದು.

ಸಾಮಾನ್ಯವಾಗಿ ಜನ್ಮ ಜಾತಕ ಅಥವಾ ಜನ್ಮ ಕುಂಡಲಿಯಲ್ಲಿ ಒಟ್ಟು ಎಲ್ಲ ಸೇರಿ ಹನ್ನೆರಡು ಮನೆಗಳು ಇರುತ್ತವೆ. ಒಂದರಿಂದ ಪ್ರಾರಂಭವಾಗಿ ಒಟ್ಟು ಹನ್ನೆರಡು ಮನೆಗಳು ಇರುತ್ತವೆ. ಒಟ್ಟಾಗಿ ಒಂಬತ್ತು ಗ್ರಹಗಳಿವೆ. ಅವುಗಳೆಂದರೆ ಸೂರ್ಯ, ಚಂದ್ರ ,ಮಂಗಳ, (ಕುಜ ,ಅಂಗಾರಕ) ಬುಧ, ಗುರು, ಶುಕ್ರ, ಶನಿ ರಾಹು ಮತ್ತು ಕೇತು ಮತ್ತು ಲಗ್ನವೂ ಸಹ ಇರುವುದು .ಈ ಒಂಬತ್ತು ಗ್ರಹಗಳು ಮತ್ತು ಲಗ್ನವೂ ಹನ್ನೆರಡು ರಾಶಿಗಳಲ್ಲಿ ಇರುತ್ತದೆ.

ಜನ್ಮ ಜಾತಕದಲ್ಲಿರುವ ಹನ್ನೆರಡು ಮನೆಗಳನ್ನು ಒಟ್ಟಾಗಿ ಹನ್ನೆರಡು ರಾಶಿಗಳಾಗಿ ವಿಂಗಡಿಸಲಾಗಿದೆ. ಮೇಷ ರಾಶಿಯಿಂದ ಹಿಡಿದು ಕೊನೆಯ ರಾಶಿ ಮೀನ ರಾಶಿಯವರೆಗೂ ಇಲ್ಲಿ ಹನ್ನೆರಡು ಮನೆಗಳಲ್ಲಿ ವಿಂಗಡಿಸಲಾಗಿದೆ. ಯಾವ ರಾಶಿಯಲ್ಲಿ ಯಾವ ಗ್ರಹ ಇರುವುದು ಎಂಬುದನ್ನು ತಿಳಿದುಕೊಳ್ಳಬೇಕು, ಮತ್ತು ಯಾವ ರಾಶಿಗೆ ಯಾವ ಗ್ರಹಕ್ಕೆ ಯಾವುದು ಮಿತ್ರ ರಾಶಿ, ಮಿತ್ರ ಗ್ರಹ ಯಾವುದು ? ವೈರಿ ಗ್ರಹ ಯಾವುದು ಎಂಬುದನ್ನು ಸಹ ನಾವು ತಿಳಿದುಕೊಳ್ಳಬಹುದು.

 

 ಲಗ್ನ ಎಂದರೆ  ಏನು ?

 

ನಮ್ಮ ರಾಶಿಯನ್ನು ಜನ್ಮ ಜಾತಕದಲ್ಲಿ ಹೇಗೆ ತಿಳಿದುಕೊಳ್ಳುವುದು ?

ಜನ್ಮ ಕುಂಡಲಿ ಅಥವಾ ಜನ್ಮ ಜಾತಕದಲ್ಲಿ ಯಾವ ಮನೆಯಲ್ಲಿ ‘  ಲ ’ಅಂದರೆ ಲಗ್ನ ಇರುವುದೋ ಅದೇ ಮೊದಲನೆ ಮನೆಯಾಗಿರುತ್ತದೆ.

ಜನ್ಮ ಕುಂಡಲಿಯಲ್ಲಿ ಯಾವ ಮನೆಯಲ್ಲಿ ಚಂದ್ರನು ಸ್ಥಿತ ನೀರುತ್ತಾನೋ ಅದೇ ನಮ್ಮ ಜನ್ಮ  ರಾಶಿಯಾಗಿರುತ್ತದೆ.

 

 

ಈ ಮೇಲೆ ಇರುವ ಜನ್ಮ ಕುಂಡಲಿ ಅಥವಾ ಜನ್ಮ ಜಾತಕದಲ್ಲಿ ಇರುವ ಗ್ರಹಗಳನ್ನು ಗಮನಿಸಿ  ಕೆಳಗೆ ಹೇಳಿರುವ ವಿವರಗಳನ್ನು ನೋಡಿ ಅರ್ಥ ಮಾಡಿಕೊಳ್ಳಿ.

ಒಂದನೇ ಮನೆಯಲ್ಲಿ ‘ಲ’ ಎಂದು ಇದ್ದರೆ ಲಗ್ನ ಎಂದರ್ಥ.

ಎರಡನೇ ಮನೆಯಲ್ಲಿ ‘ಶ’ ಎಂದು ಇದ್ದರೆ ಶನಿ ಸ್ಥಿತನಿದ್ದಾನೆ ಎಂದರ್ಥ.

ಮೂರನೇ ಮನೆಯಲ್ಲಿ ಖಾಲಿ ಇದ್ದರೆ ಯಾವ ಗ್ರಹವೂ ಇಲ್ಲ .

ನಾಲ್ಕನೇ ಮನೆಯಲ್ಲಿ  ‘ರ’ ಎಂದು ಇದ್ದರೆ ರಾಹು ಎಂದರ್ಥ.

ಐದನೇ ಮನೆಯಲ್ಲಿ ‘ಚ’ ಎಂದು ಇದ್ದರೆ ಚಂದ್ರ ಎಂದರ್ಥ,  ‘ಮ’ ಎಂದು ಇದ್ದರೆ ಮಾಂದಿ ಎಂದರ್ಥ, ಮಾಂದಿ ಎಂದರೆ ಅದು ಗ್ರಹವಲ್ಲ ಬದಲಾಗಿ ಗುಳಿಕ ಕಾಲಕ್ಕೆ ಲೆಕ್ಕ  ಹಾಕಲಾಗುತ್ತದೆ.

ಆರನೇ ಮನೆಯಲ್ಲಿ ‘ಸೂ’ ಎಂದು ಇದ್ದರೆ  ಸೂರ್ಯ ಸ್ಥಿತನಿದ್ದಾನೆ, ‘ಶು’ ಅಂದರೆ ಶುಕ್ರನು ಸಹ ಇದೇ ಮನೆಯಲ್ಲಿ ಸ್ಥಿತನಿದ್ದಾನೆ.

ಏಳನೇ ಮನೆಯಲ್ಲಿ ‘ಬು’ ಎಂದರೆ ಬುಧನಿದ್ದಾನೆ ‘ಗು’ ಎಂದರೆ ಗುರು ಗ್ರಹವಿದ್ದಾನೆ.

ಎಂಟನೇ ಮನೆಯಲ್ಲಿ ‘ಕುಜ’ (ಅಂಗಾರಕ ಅಥವಾ ಮಂಗಳ) ಗ್ರಹ  ಸ್ಥಿತನಿದ್ದಾನೆ.

ಒಂಬತ್ತನೇ ಮನೆಯಲ್ಲಿ ಯಾವ ಗ್ರಹವೂ ಇಲ್ಲ.

ಹತ್ತನೇ ಮನೆಯಲ್ಲಿ ಕೇತು ಸ್ಥಿತನಿದ್ದಾನೆ ಹನ್ನೊಂದನೇ ಮನೆಯಲ್ಲಿಯೂ ಸಹ ಯಾವ ಗ್ರಹವೂ ಸ್ಥಿತರಿಲ್ಲ.

ಹನ್ನೆರಡನೇ ಮನೆಯಲ್ಲಿ  ಸಹ ಖಾಲಿ ಇದೆ.

ಇನ್ನು ಯಾವ ಗ್ರಹಗಳು ಎಂತಹ ಸ್ವಭಾವವನ್ನು ಹೊಂದಿವೆ ಎಂದು  ತಿಳಿಯಿರಿ.

ರವಿ ಎಂದರೆ ಸೂರ್ಯ ತಂದೆಯ ಗುಣವನ್ನು ಹೆಚ್ಚಾಗಿ ಹೊಂದಿರುತ್ತಾನೆ ಸೂರ್ಯ ಗ್ರಹದ ದಿಕ್ಕು ಪೂರ್ವ ದಿಕ್ಕು.

ಚಂದ್ರ ಗ್ರಹ ಎಂದರೆ ಶಾಂತ ಸ್ವರೂಪವಾದ ಗುಣ ಉಳ್ಳವನು  ಅಂದರೆ ಚಂದ್ರ ಎಂದರೆ ತಾಯಿಯನ್ನು ಅಥವಾ ತಾಯಿಯ ಗುಣಗಳಿಗೆ ಹೋಲಿಸಲಾಗಿದೆ. ಚಂದ್ರನ ದಿಕ್ಕು ವಾಯುವ್ಯ.

ಕುಜ ಅಂಗಾರಕ ಅಥವಾ ಮಂಗಳ ಗ್ರಹ ಎಂದು ಕರೆಯುವ ಈ ಗ್ರಹವು ಸೋದರ ಸೋದರಿಯರ ಗುಣವನ್ನು ಪ್ರತಿನಿಧಿಸುತ್ತದೆ ಮತ್ತು ಇದರ ದಿಕ್ಕು ದಕ್ಷಿಣ .

ಬುಧ ಗ್ರಹವು ವಿದ್ಯಾ, ವಾಕ್ಚಾತುರ್ಯ ಮತ್ತು ಬಂಧುತ್ವ ಗುಣವನ್ನು ಹೊಂದಿರುತ್ತದೆ. ಬುಧಗ್ರಹದ ದಿಕ್ಕು ಉತ್ತರ ದಿಕ್ಕು.

ಗುರು ಗ್ರಹವು ಪುತ್ರ, ಜ್ಞಾನ, ಸದ್ಗುಣ ಸಂತಾನ, ಹಣಕಾಸು, ಸ್ಥಿತಿಗತಿಯನ್ನು ಸೂಚಿಸುತ್ತದೆ ಗುರುಗ್ರಹದ ದಿಕ್ಕು ಈಶಾನ್ಯ ದಿಕ್ಕು.

ಶುಕ್ರ ಗ್ರಹವು ಪತ್ನಿ ಮತ್ತು ವಾಹನ ಮತ್ತು ಮಡದಿಯ ಜೊತೆಗಿನ ಸಂಬಂಧವನ್ನು ಸೂಚಿಸುತ್ತದೆ. ಶುಕ್ರ ಗ್ರಹವು ಆಗ್ನೇಯ ದಿಕ್ಕನ್ನು ಮುಂದಿದೆ.

ಶನಿಗ್ರಹವು ಆಯುಷ್ಯ ಮತ್ತು ಸೇವಕರ ಸ್ವಭಾವವನ್ನು ಪ್ರತಿನಿಧಿಸುವುದಾಗಿ ಶನಿಗ್ರಹದ ದಿಕ್ಕು ಪಶ್ಚಿಮ.

ರಾಹು ಗ್ರಹವು ತಾಯಿಯ ಸ್ವಭಾವವನ್ನು ಪ್ರತಿನಿಧಿಸುವುದಾಗಿ ರಾಹು ಗ್ರಹವು ನೈಋತ್ಯ ದಿಕ್ಕಾಗಿದೆ.

ಕೇತು ಗ್ರಹವು ಪಿತಾಮಹರ ಸ್ವಭಾವವನ್ನು ಒಳಗೊಂಡಿದ್ದು ಕೇತು ಗ್ರಹದ ದಿಕ್ಕು ಈಶಾನ್ಯ ದಿಕ್ಕು .

ಈ ಒಂಬತ್ತು ಗ್ರಹಗಳು ಮತ್ತು ಹನ್ನೆರಡು ರಾಶಿಗಳಲ್ಲಿ ಯಾವ ಗ್ರಹಗಳ ಸ್ಥಿತರಿವೆ ಎಂಬುದರ ಆಧಾರದ ಮೇಲೆ ನಮ್ಮ ಜನ್ಮ ಜಾತಕ ಅಥವಾ ಜನ್ಮ ಕುಂಡಲಿಯನ್ನು ನೋಡಿಕೊಂಡು ಮುಂದೆ ಭವಿಷ್ಯದಲ್ಲಿ ಏನು ನಡೆಯುವುದು ಎಂಬುದನ್ನು ತಿಳಿಯಬಹುದು. ನಮಗೆ ಕಾಡಬಹುದಾದ ಕಾಯಿಲೆಗಳು, ಉದ್ಯೋಗ, ವ್ಯಾಪಾರ, ವೈವಾಹಿಕ ಜೀವನ, ಮದುವೆ , ಪ್ರೀತಿ , ಆರೋಗ್ಯ ಎಲ್ಲವನ್ನೂ ಸಹ ನಾವು  ತಿಳಿದುಕೊಳ್ಳಬಹುದಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top