fbpx
ಕಿರುತೆರೆ

ಸದಾ ನಗು ನಗುತ್ತಾ ಇರುತ್ತಿದ್ದ ಜೆಕೆ ಬಿಗ್’ಬಾಸ್ ಮನೆಯಲ್ಲಿ ಮೊದಲ ಬಾರಿ ಕಣ್ಣೀರು ಹಾಕಿದ್ಯಾಕೆ..?

ಸದಾ ನಗು ನಗುತ್ತಾ ಇರುತ್ತಿದ್ದ ಜೆಕೆ ಬಿಗ್’ಬಾಸ್ ಮನೆಯಲ್ಲಿ ಮೊದಲ ಬಾರಿ ಕಣ್ಣೀರು ಹಾಕಿದ್ಯಾಕೆ..?

 

 

ಬಿಗ್ ಬಾಸ್ ಸೀಸನ್ 5ನ ಸ್ಟ್ರಾಂಗ್ ಸ್ಪರ್ದಿಗಳಲ್ಲಿ ಒಬ್ಬರಾದ ಜೆಕೆ ಅಲಿಯಾಸ್ ಕಾರ್ತಿಕ್ ಬಿಗ್’ಬಾಸ್ ಒಳಗೆ ಮತ್ತು ಹೊರಗೆ ಎಲ್ಲರಿಗೂ ಇಷ್ಟವಾಗಿದ್ದಾರೆ. ತಮ್ಮ ತರ್ಲೆ ತಮಾಷೆಗಳಿಂದ ಸದಾ ಖುಷಿ ಖುಷಿಯಾಗಿ ತಾವೂ ಇದ್ದು ಮನೆಮಂದಿಯನ್ನೆಲ್ಲಾ ನಗಿಸುತ್ತಿದ್ದರು ಜೆಕೆ. ಬೇರೆ ಯಾರ ವಿಷ್ಯಕ್ಕೆ ಮೂಗು ತೋರಿಸದೆ ತಾವಾಯಿತು ತಮ್ಮ ಟಾಸ್ಕ್ ಆಯ್ತು ಅಂತ ಇರುವ ಜೆಕೆ ಬಿಗ್’ಬಾಸ್ ಮನೆಯೊಳಗೇ ಪ್ರವೇಶಿಸಿದ್ದಾಗಿನಿಂದ ಇದೇ ಮೊದಲು ಭಾವುಕರಾಗಿದ್ದರೆ.

 

 

ಈ ವಾರ ಜಗನ್ ಮತ್ತು ಜೆಗೆ ಕೈಗೆ ಕೋಳ ಹಾಕಿಕೊಂಡು ಜೋಡಿಯಾಗಿದ್ರು ಈ ವರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಜೆಕೆ ಸೇಫ್ ಮಾಡಲು ಜಗನ್ ತಮ್ಮನೆ ನಾಮಿನೇಟ್ ಮಾಡಿಕೊಂಡು ಎಲಿಮಿನೇಟ್ ಆಗಿ ಮನೆಯಿಂದ ಹೊರಹೋಗುವುದು ಜೆಕೆ ಮನಸಿಗೆ ನೋವನ್ನುಂಟು ಮಾಡಿದೆ.

 

 

ನಿರೂಪಕ ಸುದೀಪ್ ಜಗನ್ ಎಲಿಮಿನೇಟೆಡ್ ಎಂದು ಹೇಳುತ್ತಿದ್ದಂತೆ ಕುಸಿದ ಜೆಕೆ ಒಂದು ಕ್ಷಣ ಕಣ್ಣೀರು ಹಾಕಿದರು.”ನಾನು ಯಾರು ಎಲಿಮಿನೇಟ್ ಆದಾಗಲೂ ಕಣ್ಣೀರು ಹಾಕಿರಲಿಲ್ಲ ಆದರೆ ಇವತ್ತು ಕಣ್ಣೀರು ಬಂತು” ಎಂದು ಜೆಕೆ ಹೇಳಿದರು. ಸದಾ ನಗು ನಗುತ್ತಾ ಇರುತ್ತಿದ್ದ ಜೆಕೆ ಬಿಗ್’ಬಾಸ್ ಮನೆಯಲ್ಲಿ ಮೊದಲ ಬಾರಿ ಕಣ್ಣೀರು ಹಾಕಿದ್ದನ್ನು ನೋಡಿ ವೀಕ್ಷಕರು ಆಶ್ಚರ್ಯ ಪಟ್ಟರು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top