fbpx
ದೇವರು

ಲಕ್ಷ್ಮೀ ದೇವಿಗೆ  ಪಾಡ್ಯಮಿಯಿ೦ದ ನವಮಿಯವರೆಗೆ ವಾರದಲ್ಲಿ 7 ದಿನ ಯಾವ ನೈವೇದ್ಯವನ್ನು ಸಮರ್ಪಿಸಿದರೆ ಶಾಸ್ತ್ರದ ಪ್ರಕಾರ ಒಳ್ಳೆಯದು

ಲಕ್ಷ್ಮೀ ದೇವಿಗೆ  ಪಾಡ್ಯಮಿಯಿ೦ದ ನವಮಿಯವರೆಗೆ  ಮತ್ತು ವಾರದಲ್ಲಿ ಬರುವ ಏಳು ದಿನಗಳ ಪ್ರತಿಯೊಂದು ದಿನವೂ ಯಾವ ನೈವೇದ್ಯವನ್ನು ಸಮರ್ಪಿಸಿದರೆ ನಮಗೆ ಲಕ್ಷ್ಮೀ  ದೇವಿಯ ಕೃಪಾಕಟಾಕ್ಷ ದೊರೆಯುವುದು ಎಂದು ನಿಮಗೆ ಗೊತ್ತೇ ?

 

ಲಕ್ಷ್ಮೀ ದೇವಿಯ ಕೃಪಾ ಕಟಾಕ್ಷವನ್ನು ಪಡೆಯಲು ಭಕ್ತರು ಹಲವು ರೀತಿಯ ಪೂಜೆಗಳನ್ನು ಹೋಮ ,ಹವನ,  ವ್ರತಗಳನ್ನು ಮಾಡುತ್ತಾ ಇರುತ್ತಾರೆ. ಆದರೆ ಲಕ್ಷ್ಮೀ ದೇವಿಯ ಕೃಪೆ ಪಡೆಯುವುದು ಅಷ್ಟು ಸುಲಭವಲ್ಲ, ಆದ್ದರಿಂದ  ಲಕ್ಷ್ಮೀ  ದೇವಿಯನ್ನು ಭಕ್ತಿ, ಶ್ರದ್ಧೆಯಿಂದ ಆರಾಧನೆ ಮಾಡುವುದರ ಜೊತೆಗೆ ಶುಚಿತ್ವವನ್ನು ಪಾಲಿಸಬೇಕು. ದೀಪಾರಾಧನೆ , ತುಳಸಿ ಪೂಜೆ ಮಾಡಬೇಕು. ಹಸುವನ್ನು ಪೂಜಿಸಬೇಕು  ಇಂಥದ್ದೆಲ್ಲವನ್ನೂ ಮಾಡಬೇಕು. ಹಾಗೆಯೇ ಲಕ್ಷ್ಮೀ ದೇವಿಗೆ  ಯಾವ ತಿಥಿಯಲ್ಲಿ ಯಾವ ಅಭಿಷೇಕ ಮತ್ತು ನೈವೇದ್ಯ ಅರ್ಪಿಸಬೇಕು. ವಾರದ ಏಳು ದಿನಗಳಲ್ಲಿ ಯಾವ ಪ್ರಸಾದವನ್ನು ಸಮರ್ಪಿಸಬೇಕು ಎಂದು ನಾವು ತಿಳಿದುಕೊಳ್ಳೋಣ ಬನ್ನಿ…

 

 

ಪಾಡ್ಯಮಿ ತಿಥಿಯ ದಿನ ಹಸುವಿನ ತುಪ್ಪದಿಂದ ಅಭಿಷೇಕ ಮಾಡಿದರೆ ಸಕಲ ರೋಗಗಳು ನಿವಾರಣೆಯಾಗುತ್ತವೆ.

ದ್ವಿತೀಯ ತಿಥಿಯ ದಿನ ಸಕ್ಕರೆಯಿಂದ ಅಭಿಷೇಕ ಮಾಡಿದರೆ ದೀರ್ಘಾಯುಷ್ಯ ಪ್ರಾಪ್ತಿಯಾಗುವುದು.

ತೃತೀಯ ತಿಥಿಯ ದಿನ ಹಸುವಿನ ಹಾಲಿನಿಂದ ಅಭಿಷೇಕ ಮಾಡಿದರೆ ಅಕಾಲ ಮೃತ್ಯು ದೋಷಗಳು ದೂರವಾಗುತ್ತವೆ.

ಚೌತಿ ತಿಥಿಯ ದಿನ ತಿಂಡಿ ತಿನಿಸನ್ನು ನೈವೇದ್ಯವಾಗಿ ಸಮರ್ಪಿಸಿದರೆ ಸಕಲ ವಿದ್ಯೆ ಪ್ರಾಪ್ತಿಯಾಗುತ್ತದೆ.

ಪಂಚಮಿ ತಿಥಿಯ ದಿನ ಬಾಳೆಹಣ್ಣಿನ  ನೈವೇದ್ಯವನ್ನು ಸಮರ್ಪಿಸುವುದರಿಂದ ಮೇದಸ್ಸು ,ಬುದ್ಧಿ ಶಕ್ತಿ ಹೆಚ್ಚಾಗುತ್ತದೆ.

 

 

ಷಷ್ಠಿ ತಿಥಿಯ ದಿನ ಜೇನುತುಪ್ಪದಿಂದ ಅಭಿಷೇಕ ಮಾಡಿ ಬ್ರಾಹ್ಮಣರಿಗೆ ದಕ್ಷಿಣೆ ಸಮೇತ ಏನಾದರೂ ದಾನ ಮಾಡಿದರೆ  ಮುಖದ ಕಾಂತಿ ಹೆಚ್ಚಾಗಿ ಯಶಸ್ಸು ಹೆಚ್ಚಾಗುತ್ತದೆ .

ಸಪ್ತಮಿ ತಿಥಿಯ ದಿನ ಹಣ್ಣುಗಳನ್ನು ನೈವೇದ್ಯವಾಗಿ ಸಮರ್ಪಿಸುವುದರಿಂದ ಸಾಲದ ಬಾಧೆಗಳು ದೂರವಾಗುತ್ತವೆ.

ಅಷ್ಟಮಿ ತಿಥಿಯ ದಿನ ಬೆಲ್ಲದ ನೀರಿನಿಂದ ಅಭಿಷೇಕ ಮಾಡಿದರೆ  ಮತ್ತು ಬೆಲ್ಲವನ್ನು ದಾನ ಮಾಡಿದರೆ ಅಷ್ಟ ಕಷ್ಟಗಳು ಧರಿದ್ರಗಳು ದೂರವಾಗಿ ಸುಖ ಪ್ರಾಪ್ತಿಯಾಗುತ್ತವೆ.

ನವಮಿ ತಿಥಿಯ ದಿನ ಮಂಡಕ್ಕಿಯನ್ನು ನೈವೇದ್ಯವಾಗಿ ಸಮರ್ಪಿಸಿದರೆ ಸಕಲ ಸೌಭಾಗ್ಯ ದೊರೆಯುತ್ತದೆ.

ದಶಮಿ ತಿಥಿ ದಿನ ಕಪ್ಪು ಎಳ್ಳಿನಿಂದ ಮಾಡಿದ ಸಿಹಿ ಪದಾರ್ಥಗಳನ್ನು ನೈವೇದ್ಯವಾಗಿ ಸಮರ್ಪಿಸುವುದರಿಂದ ಸಕಲ ರೋಗಗಳು ದೂರವಾಗಿ ದೀರ್ಘಾಯುಷ್ಯ ಪಡೆಯುತ್ತಾರೆ.

 

 

 ವಾರದಲ್ಲಿ ಲಕ್ಷ್ಮೀ ದೇವಿಗೆ ಯಾವ ದಿನ ? ಯಾವ ನೈವೇದ್ಯ  ಸಮರ್ಪಿಸಬೇಕು ?

 

ಭಾನುವಾರ ಹಾಲನ್ನು ನೈವೇದ್ಯವಾಗಿ ಸಮರ್ಪಿಸಿದರೆ ಒಳ್ಳೆಯದು.

ಸೋಮವಾರ ಪಾಯಸವನ್ನು ನೈವೇದ್ಯವಾಗಿ ಸಮರ್ಪಿಸಿದರೆ ಒಳ್ಳೆಯದು.

ಮಂಗಳವಾರ ಬಾಳೆಹಣ್ಣಿನ ನೈವೇದ್ಯವನ್ನು ಸಮರ್ಪಿಸಿದರೆ ದೇವಿಯ ಅನುಗ್ರಹವನ್ನು ಪಡೆಯಬಹುದು.

ಬುಧವಾರ ಬೆಣ್ಣೆಯನ್ನು ನೈವೇದ್ಯವಾಗಿ ಸಮರ್ಪಿಸಿದರೆ ಒಳ್ಳೆಯದು.

 

 

ಗುರುವಾರ ಕಲ್ಲು ಸಕ್ಕರೆಯನ್ನು ನೈವೇದ್ಯವಾಗಿ ಸಮರ್ಪಿಸಿದರೆ ಒಳ್ಳೆಯದು.

ಶುಕ್ರವಾರ ಸಿಹಿ ಪದಾರ್ಥವನ್ನು ದೇವಿಗೆ ನೈವೇದ್ಯವಾಗಿ ಸಮರ್ಪಿಸಿದರೆ ದೇವಿಯ ಅನುಗ್ರಹ ಪಡೆಯಬಹುದು.

ಶನಿವಾರ ಹಸುವಿನ ತುಪ್ಪದಿಂದ ಮಾಡಿದ ನೈವೇದ್ಯವನ್ನು ಸಮರ್ಪಿಸಿದರೆ ಒಳ್ಳೆಯದು.

ಹೀಗೆ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆಯಲು ನಾವು ತಿಥಿಗೆ ಅನುಸಾರವಾಗಿ ಮತ್ತು  ವಾರದಲ್ಲಿ ಬರುವ ಏಳು ದಿನಗಳು ಒಂದೊಂದು ನೈವೇದ್ಯವನ್ನು ಸಮರ್ಪಿಸಿದರೆ ದೇವಿಯ ಅನುಗ್ರಹ  ಪಡೆಯಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top