fbpx
ಸಿನಿಮಾ

36 ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಭರ್ಜರಿಯಾಗಿ ಆಚರಿಸಿಕೊಂಡ ರೋರಿಂಗ್ ಸ್ಟಾರ್

36 ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಭರ್ಜರಿಯಾಗಿ ಆಚರಿಸಿಕೊಂಡ ರೋರಿಂಗ್

ಸ್ಟಾರ್

ಉಗ್ರಂ ಚಿತ್ರದಿಂದ ಮತ್ತೋಮ್ಮೆ ಉಸಿರು ಪಡೆದುಕೊಂಡು , ರಥಾವರದಿಂದ ಸ್ಥಾನವನ್ನು ಭದ್ರವಾಗಿಸಿಕೊಂಡು, ಈಗ ಮಫ್ತಿ ಹಿಟ್ ಆದ ಕಾರಣ ಚಂದನವನದಲ್ಲಿ ತಮ್ಮದೆ ಛಾಪನ್ನು ಉಳಿಸಿಕೊಂಡಿರುವ ಶ್ರೀಮುರಳಿ ಭಾನುವಾರದಂದು 36ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡರು.

 

ನಂತರ ಮಾದ್ಯಮದೊಂದಿಗೆ ಮಾತನಾಡಿದ ಮುರಳಿ. ಇಂದು ಅವರಿಗಾಗಿ  ಸಮಯವನ್ನು ಮೀಸಲಿಟ್ಟಿದ್ದೇನೆ. ಬೆಳಿಗ್ಗೆ ಕುಟುಂಬದೊಂದಿಗೆ ದೇವಸ್ಥಾನಕ್ಕೆ  ತೆರಳಿ, ಇಡೀ ದಿನ ಅವರೊಂದಿಗೆ ಬೆರತು  ಕಾಲ ಕಳೆಯುವುದು ಖುಷಿ ನೀಡುತ್ತದೆ. ಸದ್ಯ ಜಯಣ್ಣ-ಭೋಗೇಂದ್ರ ಅವರೊಂದಿಗೆ ಚಿತ್ರ ಮಾಡುತ್ತಿದ್ದು, ಇದಾದ ಬಳಿಕ ಯೋಗಿ.ಪಿ.ರಾಜ್ ಅವರ ನಿರ್ದೇಶನದಲ್ಲಿ ನಟಿಸುವ ಸಾದ್ಯತೆ ಇದೆ. ಇನ್ನು ಮುಂದೆಯೂ ಒಳ್ಳೆ ಚಿತ್ರಗಳಲ್ಲಿ ನಟಿಸುವ ಇರಾದೆ ಇದೆ. ಅಭಿಮಾನಿಗಳು ನನ್ನನ್ನು ಇದೇ ಸ್ಟೈಲ್‍ನಲ್ಲಿ ನೋಡಲು ಇಷ್ಟಪಟ್ಟಿರುವುದರಿಂದ, ಅವರನ್ನು ಖುಷಿ ಪಡಿಸುವ ಜವಬ್ದಾರಿ ನನ್ನದು ಆಗಿದೆ. ಅದಕ್ಕಾಗಿ ಸದ್ಯಕ್ಕೆ ಇದೇ ಗೆಟಪ್‍ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಇದೇ ಸುಸಂದರ್ಭದಲ್ಲಿ   ಹಲವು ಕೇಕ್‍ಗಳನ್ನು  ಕತ್ತರಿಸಿ ಸಂಭ್ರಮಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top