fbpx
ಕ್ರೈಂ ಸ್ಟೋರಿ

ನಾಲ್ಕು ವರ್ಷದ ಮುಗ್ದ ಬಾಲಕಿಯ ಮೇಲೆ ಅತ್ಯಾಚಾರ.. ತಲೆ ಮೇಲೆ ಕಲ್ಲೆಸೆದು ಭೀಕರ ಹತ್ಯೆ !!

ನಾಲ್ಕು ವರ್ಷದ ಮುಗ್ದ ಬಾಲಕಿಯ ಮೇಲೆ ಅತ್ಯಾಚಾರ.. ತಲೆ ಮೇಲೆ ಕಲ್ಲೆಸೆದು ಭೀಕರ ಹತ್ಯೆ !!

 

ಭೋಪಾಲ್: ಮಧ್ಯಪ್ರದೇಶದ ಮಾನವಾರ್ ಪ್ರದೇಶದಲ್ಲಿ ಒಂದು ದುರಂತ ಘಟನೆ ನಡೆದಿದೆ, ಬುಡಕಟ್ಟು ಜನಾಂಗದ ನಾಲ್ಕು ವರ್ಷದ ಏನು ಅರಿಯದ ಬಾಲಕಿಯನ್ನು ಅತ್ಯಾಚಾರ ಮಾಡಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.

 

 

ಆರೋಪಿಯ ಹೆಸರು ಕರಣ್(25), ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ.

 

 

ಬಾಲಕಿಯ ಪಕ್ಕದ ಮನೆಯವನಾಗಿದ್ದ ಕರಣ್, ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ಬಾಲಕಿಯನ್ನು ಯಾರು ಕಂಡುಹಿಡಿಯಬಾರದೆಂದು ಆಕೆಯ ತಲೆ ಮೇಲೆ ಕಲ್ಲು ಎಸೆದು, ಊರಿನ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬಾಲಕಿಯ ಮೃತ ದೇಹವನ್ನು ಎಸೆದಿದ್ದಾನೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

ಅಪ್ರಾಪ್ತೆಯ ಮೃತ ದೇಹವನ್ನು ಇಂದೋರ್ ಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದು, ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮಾಡುತ್ತಿರುವುದಾಗಿ  ಎಸ್ ಪಿ ವಿರೇಂದ್ರ ಸಿಂಗ್ ಹೇಳಿಕೆ ಕೊಟ್ಟಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top