fbpx
ಭವಿಷ್ಯ

ವಾರ ಭವಿಷ್ಯ ಡಿಸೆಂಬರ್ 18 ನೇ ತಾರೀಖಿನಿಂದ 23 ನೇ ತಾರೀಖಿನವರೆಗೆ.

ವಾರ ಭವಿಷ್ಯ ಡಿಸೆಂಬರ್ 18 ನೇ ತಾರೀಖಿನಿಂದ   23 ನೇ ತಾರೀಖಿನವರೆಗೆ.

ಮೇಷ (Mesha)

 

 

 

ಈ ವಾರ ನಿಮ್ಮ ಮನಸ್ಸಿನಲ್ಲಿರುವ ಆಲೋಚನೆಗಳನ್ನು ನೀವು ಎಲ್ಲರೊಂದಿಗೆ ಹಂಚಿಕೊಳ್ಳಲಿದ್ದೀರಿ. ಸ್ನೇಹಿತರ ಸಹಕಾರದಿಂದ ನಿಮ್ಮ ಕಾರ್ಯಗಳು ಯೋಗ್ಯ ರೂಪಕ್ಕೆ ಬರಲಿವೆ. ನಿಮ್ಮ ಉನ್ನತಿಗೆ ಎಲ್ಲರಿಂದಲೂ ಸಹಾಯ ದೊರೆಯಲಿದೆ. ಅನವಶ್ಯಕ ಖರ್ಚು ಹೆಚ್ಚಾಗುವ ಸಂಭವವಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ವ್ಯತ್ಯಯವಾಗಲಿದೆ. ಸರ್ಕಾರಿ ನೌಕರರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುತ್ತದೆ. ಮಹಿಳೆಯರಿಗೆ ಮಹಿಳಾ ಮಂಡಳಿಯಿಂದ ಸನ್ಮಾನ ದೊರೆಯುವ ಸಾಧ್ಯತೆಗಳಿವೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು. ಶುಭ ದಿನಗಳು ಸೋಮವಾರ ಹಾಗೂ ಶುಕ್ರವಾರ.

 

ವೃಷಭ (Vrushabha)

 

ಈ ವಾರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಮಕ್ಕಳ ನಡುವಳಿಕೆಯಲ್ಲಿ  ವ್ಯತ್ಯಾಸ ಕಂಡುಬರುವುದು. ಇದರಿಂದ ಮನೆಯಲ್ಲಿ ಅಶಾಂತಿಯ ವಾತಾವರಣ ಮೂಡುವುದು. ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ. ನಿರೀಕ್ಷಿತ ಶುಭ ಸಮಾಚಾರ ಕೇಳಿ ಬರುತ್ತದೆ. ಸಾಧು, ಸಜ್ಜನರ ಭೇಟಿಯಾಗುತ್ತದೆ. ಕೋರ್ಟ್ ಮತ್ತು ಕಚೇರಿಯ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಅನಾವಶ್ಯಕವಾಗಿ ಉದ್ವೇಗಗೊಳ್ಳುವುದರಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುವುದು. ಸಾಮಾಜಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ. ವೃಷಭ ರಾಶಿಯವರಿಗೆ ಶುಭ ದಿನಗಳು ಗುರುವಾರ ಮತ್ತು ಶುಕ್ರವಾರ .

 

ಮಿಥುನ (Mithuna)

 

 

ನಿಮ್ಮ ಆರ್ಥಿಕ ಪರಿಸ್ಥಿತಿಯು ಹಳಿ ತಪ್ಪದಂತೆ ನೋಡಿಕೊಳ್ಳಿ. ಬಂಧುಗಳಿಂದ ಅಪರೂಪದ ಭೇಟಿ ಸಂತೋಷ ತರಲಿದೆ. ಕೆಲವೊಮ್ಮೆ ಸಹೋದ್ಯೋಗಿಗಳ ವಿರೋಧಕ್ಕೆ  ಕೆಲಸ ಮಾಡಬೇಕಾದ ಪ್ರಸಂಗ ಒದಗಿ ಬರಬಹುದು. ಕೆಟ್ಟ ಆಹಾರ ಸೇವನೆಯಿಂದ ಉದರ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ.  ಮಡದಿಯೊಂದಿಗೆ ಮನಸ್ತಾಪ ಬೇಡ. ಗುರುವಿನ ಸ್ತೋತ್ರವನ್ನು ಪಠಿಸಿರಿ. ನವದಂಪತಿಗಳಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಗಳಿವೆ. ತಾಳ್ಮೆ ಈ ವಾರದ ಮಂತ್ರವಾಗಿರಲಿ.

 

ಕರ್ಕ (Karka)

 

 

ಹಮ್ಮಿಕೊಂಡ ಕೆಲಸ ಕಾರ್ಯಗಳು ದೈವಕೃಪೆಯಿಂದ ಪೂರ್ಣಗೊಳ್ಳುತ್ತವೆ. ಸ್ನೇಹಿತರಿಗೆ ನಿಮ್ಮ ಸಹಾಯ ಬೇಕಾಗಬಹುದು. ಮಕ್ಕಳ ಅಲಕ್ಷ್ಯದಿಂದಾಗಿ ನೀವು ವ್ಯವಹಾರದಲ್ಲಿ ಕಿರಿಕಿರಿ ಅನುಭವಿಸಿದ್ದೀರಿ. ಲೇವಾದೇವಿ ವ್ಯವಹಾರದಲ್ಲಿ ಅತಿಯಾದ ನಂಬಿಕೆಯಿಂದ ಅಪಾರ ನಷ್ಟ ಅನುಭವಿಸಲಿದ್ದೀರಿ. ಹಿರಿಯರಿಂದ ಬರುವ ಸಲಹೆಗಳನ್ನು ತಿರಸ್ಕಾರ ಮಾಡಬೇಡಿ ಆದಷ್ಟು ಪಾಲಿಸಿ. ಹಳೆಯ ವ್ಯಾಜ್ಯಗಳು ರಾಜಿ ಪಂಚಾಯಿತಿಗಳೊಂದಿಗೆ ಬಗೆಹರಿಯುತ್ತವೆ. ಮಾತೇ ನಿಮ್ಮ  ಮುಖ್ಯ ಬಂಡವಾಳ ವಾಗಿರುತ್ತದೆ. ಶುಭ ವಾರಗಳು ಶುಕ್ರವಾರ ಹಾಗೂ ಗುರುವಾರ .

 

ಸಿಂಹ (Simha)

ಮನೆಯಲ್ಲಿ ವಿಶೇಷ ದೇವತಾ ಕಾರ್ಯಗಳು ನಡೆಯಲಿವೆ. ಅಕಾಲ ಭೋಜನದಿಂದ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಕೆಲವು ಗ್ರಹಗಳ ಸಂಚಾರದಿಂದ ಮಾನಸಿಕ ಕಿರಿಕಿರಿ ಉಂಟಾಗಲಿದೆ. ಅಪರಿಚಿತ ವ್ಯಕ್ತಿಗಳಿಂದ ವ್ಯವಹಾರ ಚಾತುರ್ಯವನ್ನು ಕಲಿತು ಕೊಳ್ಳುತ್ತೀರಿ. ಅನಪೇಕ್ಷಿತ ಭೋಗ ವಸ್ತುಗಳಿಗೆ ವಿಪರೀತ ಖರ್ಚು ಹೆಚ್ಚಾಗುವುದು. ಕೃಷಿಕರಿಗೆ ವಿಶೇಷ ಧನಲಾಭವಾಗಲಿದೆ. ಸಂಘ ಸಂಸ್ಥೆಗಳಿಂದ ನಿಮ್ಮ ಸೇವೆಯನ್ನು ಪರಿಗಣಿಸಿ ನಿಮ್ಮನ್ನು ಸನ್ಮಾನಿಸಲಿವೆ. ಸಿಂಹ ರಾಶಿಯವರಿಗೆ ಶುಭ ದಿನ ಭಾನುವಾರ.

 

ಕನ್ಯಾರಾಶಿ (Kanya)

ಮಾತೇ ಮುತ್ತು ಮಾತೇ ಶತ್ರು ಎಂದಿದ್ದಾರೆ ಅನುಭವಸ್ಥರು. ನೀವು ತಮಾಷೆಗೆ ಆಡಿದ ಮಾತು ತುಂಬಾ ವಿಕೋಪಕ್ಕೆ ಹೋಗುವ ಸಂಭವ ಹೆಚ್ಚಾಗಿದೆ. ಹೀಗಾಗಿ ಸಾಮಾಜಿಕವಾಗಿ ವ್ಯವಹರಿಸುವಾಗ ಎರಡು ಬಾರಿ ಯೋಚಿಸಿ ಮುನ್ನಡೆಯುವುದು ಉತ್ತಮ. ಆರ್ಥಿಕ ಭದ್ರತೆ ವಿಶೇಷವಾಗಿ ಕಂಡು ಬರುವುದು. ತುಸು ನೆಮ್ಮದಿಯಿಂದ ಇರುತ್ತೀರಿ. ವ್ಯವಹಾರದಲ್ಲಿ ಹಾಕಿದ ಬಂಡವಾಳ ಮುಂದೆ ದೊಡ್ಡ ಮಂತ್ರವಾಗಿ ಬಂದು ನಿಮ್ಮ ಕೈಸೇರುತ್ತದೆ. ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಉತ್ತಮ ವಾರ ಇದಾಗಿದೆ.

 

ತುಲಾ (Tula)

 

ತುಲಾ ರಾಶಿಯವರಿಗೆ ಈ ವಾರ ಕೆಲಸ ಕಾರ್ಯಗಳಲ್ಲಿ ವಿಪರೀತ ಒತ್ತಡ ಕಂಡುಬರುವುದರಿಂದ ಎಚ್ಚರ ವಹಿಸುವುದು ಅಗತ್ಯವಿದೆ. ನಿಮ್ಮ ತಪ್ಪು ಲೆಕ್ಕಾಚಾರ ನಿಮಗೆ ಭಾರೀ ನಷ್ಟವನ್ನು ಉಂಟು ಮಾಡುವುದು. ಬಂಧುಗಳ ಭರವಸೆ ನಿಮ್ಮಲ್ಲಿ ಹೊಸ ಚೈತನ್ಯವನ್ನು ತರುತ್ತದೆ. ಆತ್ಮೀಯರೊಂದಿಗೆ ರಹಸ್ಯ ಸಮಾಲೋಚನೆ ನಡೆಯಲಿದೆ ವಿವಾಹ ಯೋಗ್ಯರಾದ ವಧು ಮತ್ತು ವರರಿಗೆ ಕಂಕಣಭಾಗ್ಯ ಕೂಡಿಬರುವುದು. ಹೊಸ ಉದ್ಯಮ ಆರಂಭಿಸಲು ಇದು ಸೂಕ್ತ ಸಮಯವಾಗಿದೆ. ಮಡದಿಯ ಆರೋಗ್ಯದ ಬಗ್ಗೆ ಅಲಕ್ಷ್ಯ ಬೇಡ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ತುಲಾ ರಾಶಿಯವರಿಗೆ ಉತ್ತಮವಾದ ದಿನ ಗುರುವಾರ

ವೃಶ್ಚಿಕ (Vrushchika)

 

ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಕೆಲವರಿಗೆ ಮನೆ ಬದಲಾವಣೆಯಾಗಲಿದೆ. ಊರು ಸಹ ಬದಲಾವಣೆಯಾಗುವ ಸಾಧ್ಯತೆಗಳು ಸಾಕಷ್ಟಿವೆ. ಬಂಧು ವರ್ಗದವರೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಲಿವೆ. ಮನೋಬಲ ವೃದ್ಧಿಸಿಕೊಳ್ಳಲು ಧ್ಯಾನ ಮಾಡುವುದು ಅತ್ಯವಶ್ಯಕ. ನಿಮ್ಮ ಕೆಲಸ ಕಾರ್ಯಗಳಿಗೆ ಸಕಾಲದಲ್ಲಿ ಆರ್ಥಿಕ ನೆರವು ದೊರೆಯುವುದು. ಮಡದಿಯ ಆರೋಗ್ಯದ ಕಡೆಗೆ ಗಮನ ಹರಿಸುವುದು ಕ್ಷೇಮ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. ಸ್ನೇಹಿತರ ಭೇಟಿಯಾಗಲಿದೆ. ಶಿವಪಂಚಾಕ್ಷರಿ ಮಂತ್ರವನ್ನು ಪಠಿಸಿರಿ. ಉತ್ತಮ ದಿನ ಶುಕ್ರವಾರ.

 

ಧನು ರಾಶಿ (Dhanu)

 

ಅಂದುಕೊಂಡ ಸಂಕಲ್ಪಿಸಿದ ಶುಭ ಕಾರ್ಯಗಳು ನಿಗದಿತ ವೇಳೆಯಲ್ಲಿ ನಡೆಯಲಿವೆ. ಆದರ ಯಶಸ್ಸಿನ ಫಲ ಬಹುಪಾಲು ನಿಮ್ಮದಾಗುವುದು. ನಿಮ್ಮ ಆರೋಗ್ಯದಲ್ಲಿ ದಿಢೀರನೆ ವ್ಯತ್ಯಯ ಕಂಡುಬರುವುದು. ವಿದೇಶದಿಂದ ಮಗನ ಆಗಮನವಾಗಲಿದೆ. ಉದ್ಯೋಗಕ್ಕಾಗಿ ಸಂದರ್ಶನವನ್ನು ಎದುರಿಸುವವರಿಗೆ ಈ ವಾರ ಒತ್ತಡ ತಪ್ಪಿದ್ದಲ್ಲ. ದೈವಕೃಪೆಯಿಂದ ಸನ್ಮಾನಗಳು ಆಗುತ್ತವೆ. ಪರಿವಾರದವರೊಂದಿಗೆ ಕುಲದೇವರ ದರ್ಶನ ಮಾಡಿಕೊಳ್ಳಿ.

 

ಮಕರ (Makara)

 

ಮಕರ ರಾಶಿಯಲ್ಲಿ ಇರುವವರಿಗೆ ಈ ವಾರ ಆತ್ಮಬಲವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಿಕೊಳ್ಳಬೇಡಿ. ಇದರಿಂದ ಕೆಲಸಗಳಲ್ಲಿ ನಿರಾಸಕ್ತಿ ಮೂಡುವ ಸಾಧ್ಯತೆ ಇದೆ . ಮಕ್ಕಳ ನಡವಳಿಕೆಗಳು ಈ ವಾರ ನಿಮಗೆ ಬೇಸರವನ್ನು ಉಂಟು ಮಾಡಲಿವೆ. ಅಜೀರ್ಣ ಸಮಸ್ಯೆ ನಿಮ್ಮನ್ನು ಕಾಡಲಿದೆ. ವಿದ್ಯಾರ್ಥಿಗಳು ಪರಿಶ್ರಮ ಪಡೆಲಿದ್ದಾರೆ. ಬರಲಿರುವ ಉತ್ತಮ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಿ. ಅತಿಯಾದ ಸಂಶಯದ ಕಾರಣದಿಂದಾಗಿ ಒಳ್ಳೆಯ ಅವಕಾಶಗಳನ್ನು ಮತ್ತು ಒಳ್ಳೆಯ ಸಮಯವನ್ನು ಕಳೆದುಕೊಳ್ಳಬೇಡಿ. ಶುಭದಿನ ಗುರುವಾರ.

 

ಕುಂಭರಾಶಿ (Kumbha)

 

ಕುಂಭ ರಾಶಿಯವರಿಗೆ ಬಹುದಿನಗಳ ಆಕಾಂಕ್ಷೆ ಈ ವಾರ  ನೆರವೇರುವ ಸಾಧ್ಯತೆಗಳಿವೆ. ಪರಿವಾರದವರೊಂದಿಗೆ ಉತ್ತಮವಾದ ಮಧುರ ಬಾಂಧವ್ಯ ಬೆಳೆಯಲಿದೆ. ಹಿರಿಯರ ಆಸ್ತಿ ನಗ ನಾಣ್ಯಗಳು ನಿಮಗೆ ದೊರೆಯುತ್ತವೆ.ಹೆಚ್ಚಿನ ಲೇವಾದೇವಿ ವ್ಯವಹಾರದಲ್ಲಿ ಲಾಭವಾಗುತ್ತದೆ. ಸಗಟು ವ್ಯಾಪಾರಿಗಳಲ್ಲಿ ಲಾಭವಿದೆ. ಬಿಡುವಿಲ್ಲದ ಕಾರ್ಯಗಳ ನಡುವೆಯು ಸಂಬಂಧಿಕರ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ನಿಮ್ಮ ಮೇಲೆ ವಿಶೇಷ ಅಭಿಮಾನ ವ್ಯಕ್ತವಾಗುತ್ತದೆ. ರಾಜಕಾರಣಿಗಳು ವಿಶೇಷ ಸಮಾಜ ಸೇವೆ ಮಾಡುವರು .ಮಂಗಳವಾರ ಶುಭ ದಿನ.

 

ಮೀನರಾಶಿ (Meena)

 

ಮೀನ ರಾಶಿಯವರಿಗೆ ಈ ವಾರ ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ನಿರೀಕ್ಷೆಗೂ ಮೀರಿ ಲಾಭವನ್ನು ಪಡೆದುಕೊಳ್ಳುತ್ತೀರಿ. ಅದನ್ನು ದುರುಪಯೋಗ ಮಾಡಿಕೊಳ್ಳಬೇಡಿ. ಅನಾವಶ್ಯಕ ಖರೀದಿ ಮೋಜು ಮಸ್ತಿಯಿಂದಾಗಿ ಬಂದ ಲಾಭ ಕರಗಿ ಹೋಗಬಹುದು. ನಿಮ್ಮ ಸಮಯೋಚಿತ ಪ್ರಜ್ಞೆಯನ್ನು ಎಲ್ಲರೂ ಕೊಂಡಾಡುತ್ತಾರೆ. ಸಂಶೋಧನಾ ಕಾರ್ಯದಲ್ಲಿರುವವರಿಗೆ ವಿಶೇಷ ಯಶಸ್ಸು ದೊರೆಯಲಿದೆ. ಕಚೇರಿಗಳಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಹೊಂದಾಣಿಕೆ ಅತ್ಯಗತ್ಯ. ಪ್ರಯಾಣದಲ್ಲಿ ಎಚ್ಚರ ವಹಿಸಬೇಕು. ಗುರುವಿನ ಸ್ತೋತ್ರವನ್ನು ಪಠಿಸಿ. ಬುಧವಾರ ಮತ್ತು ಗುರುವಾರ ಶುಭ ದಿನಗಳು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top