fbpx
ಸಮಾಚಾರ

ಐಐಎಂ ಪದವೀಧರೆ ಚೆಲುವೆ! ಈ ಶ್ವೇತಾ ಬ್ರಹ್ಮ ಭಟ್ ಯಾರು?

ಐಐಎಂ ಪದವೀಧರೆ ಚೆಲುವೆ! ಈ ಶ್ವೇತಾ ಬ್ರಹ್ಮ ಭಟ್ ಯಾರು?

 

 

ಗುಜರಾತ್ ನಲ್ಲಿ ನಡೆದ ಚುನಾವಣೆ ಫಲಿತಾಂಶ ಬಂದಿದ್ದು, ಪ್ರಧಾನಿಯಾಗುವುದಕ್ಕಿಂತ ಮೊದಲು ನರೇಂದ್ರ ಮೋದಿ ಅವರು ವಾಸವಿದ್ದ ಮಣಿನಗರದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶ್ವೇತಾ ಬ್ರಹ್ಮಭಟ್ ಸೋಲನ್ನು ಒಪ್ಪಿಕೊಂಡಿದ್ದಾರೆ.

 

ಬಿಜೆಪಿಯ ಶಾಸಕ ಹಾಗೂ ಪ್ರಧಾನಿಯ ಪಕ್ಕಾ ಶಿಷ್ಯ ಸುರೇಶ ಪಟೇಲ್ ಮತ್ತು ಕಾಂಗ್ರೆಸ್ ನ ಶ್ವೇತಾ ಬ್ರಹ್ಮಭಟ್ ಈ ಕ್ಷೇತ್ರದಲ್ಲಿ ಸ್ಪರ್ದಿಸಿದ್ದರು. ಚುನಾವಣದ ಫಲಿತಾಂಶದ ಪ್ರಕಾರ, ಸುಮಾರು 75,199 ಮತಗಳ ಅಂತರದಿಂದ ಶ್ವೇತಾ ಬ್ರಹ್ಮಭಟ್ ಸೋತಿದ್ದಾರೆ. ಬಿಜೆಪಿಯ ಸುರೇಶ ಪಾಟೀಲ್ ಪರ 1,16,113 ಮತಗಳು ಪಡೆದಿದ್ದು, ಕಾಂಗ್ರೆಸ್ ನ ಶ್ವೇತಾ ಬ್ರಹ್ಮಭಟ್ ಪರ 40,914 ಮತಗಳನ್ನು ಪಡೆದಿದೆ.

 

 

ಕಾಂಗ್ರೆಸ್ ನಾಯಕ ನರೇಶ್ ಬ್ರಹ್ಮಭಟ್ ಅವರ ಪುತ್ರಿ ಈ ಶ್ವೇತಾ ಬ್ರಹ್ಮಭಟ್, ಇವರು 34 ವರ್ಷ ವಯಸ್ಸಿನವರಾಗಿದ್ದು, ಬೆಂಗಳೂರಿನಲ್ಲಿ ಐಐಎಂ ಮತ್ತು ಲಂಡನ್ ನಲ್ಲಿ ಪದವಿ ಪಡೆದಿದ್ದಾರೆ. ಇವರು ಮಣಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಕೀಯಕ್ಕೆ ಇಳಿದಿದ್ದು ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿತ್ತು!

 

ಮೋದಿ ಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಂದ್ರ ಕಚೇರಿಯಾಗಿರುವ ಮಣಿನಗರ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದರು . ಈ ಬಾರಿಯ ಚುನಾವಣೆಯಲ್ಲಿ ಮೋದಿ ಕ್ಷೇತ್ರ ಹಾಗೂ ಅಹಮದಾಬಾದ್‍ನ 16 ಕ್ಷೇತ್ರಗಳಲ್ಲಿ ಶ್ವೇತಾ ಬ್ರಹ್ಮಭಟ್ ಬಿಟ್ಟರೆ ಬೇರೆ ಯಾರು ಮಹಿಳಾ ಅಭ್ಯರ್ಥಿಗಳು ಇಲ್ಲದ ಕಾರಣ ಈ ಬಾರಿ ಮೋದಿ ಕ್ಷೇತ್ರದಲ್ಲಿ ಕುತೂಹಲ ಹೆಚ್ಚಿತ್ತು.

 

 

ನೋಟ್ ನಿಷೇಧ ಹಾಗು ಜಿ ಎಸ್ ಟಿ ಜಾರಿಗೆ ಬಂದಮೇಲೆ ಮಣಿನಗರದಲ್ಲಿ ಇದು ಮೊದಲ ಚುನಾವಣೆಯಾಗಿದೆ. ಈ ಕ್ಷೇತ್ರದಲ್ಲಿ ವ್ಯಾಪಾರಿಗಳು ಹೆಚ್ಚಿನೆ ಸಂಖ್ಯೆಯಲ್ಲಿದ್ದು, ಜಿ ಎಸ್ ಟಿ ಹಾಗು ನೋಟ್ ನಿಷೇಧದ ನಂತರ ಇಲ್ಲಿನ ವ್ಯಾಪಾರಿಗಳಿಗೆ ಬಹಳ ನಷ್ಟವಾಗಿದೆ ಎಂಬ ಮಾತುಗಳು ಎಲ್ಲಾರ ಬಾಯಲ್ಲಿ ಕೇಳಿಬರುತ್ತಿತ್ತು. ಇದರಿಂದಾಗಿ ಬಿಜೆಪಿಗೂ ಕೂಡ ಇದು ಒಂದು ಸವಾಲಿನ ಕ್ಷೇತ್ರವಾಗಿ ತಿರುಗಿತು.

 

 

 

“ನಾನು ರಾಜಕೀಯವನ್ನು ಬಹಳ ದಿನಗಳಿಂದಲೂ ನೋಡುತ್ತಿದ್ದೇನೆ. ರಾಜಕೀಯ ಒಂದು ಸಾಮಾಜಿಕ ಕಾರ್ಯ ಎಂದು ಪರಿಗಣಿಸಿದ್ದೇನೆ. ವ್ಯಾಪಾರ ಅಥವಾ ಉದ್ಯಮ ನನ್ನ ಕ್ಷೇತ್ರವಾಗಿರಲಿಲ್ಲ. ಆದರೆ ನಾನು ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಲ್ಲಿ ಪದವಿ ಪಡೆದುಕೊಂಡ ನಂತರವೂ ನನಗೆ ಉದ್ಯಮ ಆರಂಭಿಸಲು ಅಗತ್ಯವಾದ ಹಣಕಾಸಿನ ಸೌಲಭ್ಯ ಸಿಗಲಿಲ್ಲ, ನನ್ನಂತವರಿಗೆ ಹೀಗಾದರೆ ಇನ್ನು ಜನ ಸಾಮಾನ್ಯರ ಗತಿ ಏನು”. ಎಂದು ಶ್ವೇತಾ ಹೇಳಿದ್ದರು. ಹಾಗೆ ಮಹಿಳೆಯರಿಗೆ ಮತ್ತು ಯುವಕರಿಗೆ ಸಹಕಾರಿಯಾಗಬೇಕೆಂಬ ಕಾರಣದಿಂದ ನಾನು ಚುನಾವಣೆಗೆ ನಿಂತಿದ್ದೇನೆ ಎಂದು ಅಭ್ಯರ್ಥಿ ಶ್ವೇತಾ ಬ್ರಹ್ಮಭಟ್ ಮಾಧ್ಯಮಕ್ಕೆ ಅಂದು ಹೇಳಿದ್ದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top