fbpx
ವಿಶೇಷ

ಹಕ್ಕಿ ಮರವನ್ನೇ ನುಂಗಿತ್ತಾ…ನೋಡವ್ವಾ ತಂಗೀ… ಆಶ್ಚರ್ಯ ಆದ್ರು ಇದು ನಿಜ ಈ ಗೂಡು ಒಂದು ಟನ್ ತೂಕ

ಹಕ್ಕಿ ಮರವನ್ನೇ ನುಂಗಿತ್ತಾ…ನೋಡವ್ವಾ ತಂಗೀ… ಆಶ್ಚರ್ಯ ಆದ್ರು ಇದು ನಿಜ ಈ ಗೂಡು ಒಂದು ಟನ್

ತೂಕ

‘ಜೇನಿನಗೂಡು ನಾವೆಲ್ಲಾ..ಬೇಯಾದರೆ ಜೇನಿಲ್ಲಾ..’ ಎಂಬ ಹಾಡನ್ನು ತಿದ್ದಿಕೊಂಡು… ‘ಹಾಡು ಹಕ್ಕಿಗಳು ನಾವು ಬೇರೆಯಾದರೆ ಗೂಡಿಲ್ಲಾ…’ ಎಂದು ಬೃಹತ್ ಗೂಡಿನ ಫ್ಲಾಟ್ ನಿರ್ಮಿಸಿಕೊಳ್ಳುತ್ತಿರುವ ಸುದ್ದಿಯಿದು…

 

 

ಹಾಡುಹಕ್ಕಿಗೆ ಬೇಕು ಗೂಡು, ಗೂಡು ಕಟ್ಟಲು ಮರಬೇಕು. ಮರಗಳೇ ಅಪರೂಪ. ಮನುಷ್ಯರನ್ನು ಕಂಡಿರುವ ಹಾಡುಹಕ್ಕಿಗಳು ಇದೀಗ ಥೇಟ್ ನಮ್ಮನ್ನು ಕಾಪಿ ಹೊಡೆಯುತ್ತಿವೆ! ನಾವು ಫ್ಲಾಟ್ಗಳನ್ನು ನಿರ್ಮಿಸಿಕೊಳ್ಳುವಂತೆ ಈ ಹಕ್ಕಿಗಳು ಬಹುಗೂಡು ಸಂಸ್ಕøತಿಯನ್ನು ಅನುಸರಿಸುತ್ತಿವೆ. 10 ಅಡಿ ಅಗಲ, 20 ಅಡಿ ಎತ್ತರದವರೆಗೆ ಸೂರು ಕಟ್ಟುತ್ತವೆ. ಸುಮಾರು 1 ಟನ್ಗಳ ಭಾರವಿದೆ. ದೂರದ ಸ್ಥಳಗಳಿಂದ ಕಡ್ಡಿ, ಹುಲ್ಲುಗಳನ್ನು ತಂದು, ಮರದಲ್ಲಿ ಬೆಸೆದು ಗೂಡು ಕಟ್ಟಿ ಸಂಸಾರ ಮಾಡುತ್ತಿವೆ. ಈ ಬೃಹತ್ ಗೂಡಿನ ಸಮುಚ್ಚದಲ್ಲಿ ಕನಿಷ್ಠವೆಂದರೂ ಒಂದರಿಂದ ಒಂದೂವರೆ ಸಾವಿರ ಹಕ್ಕಿಗಳು ಸಂಸಾರ ನಡೆಸುತ್ತಿವೆ!

 

 

ಬೆಳಿಗ್ಗೆ ಡ್ಯೂಟಿಗೆ ತೆರಳುವ ಹಕ್ಕಿಗಳು ಸಂಜೆಯಾಗುತ್ತಿದ್ದಂತೆ ಗೂಡಿಗೆ ಮರಳುತ್ತವೆ. ರಾತ್ರಿಯಾಗುತ್ತಾ ಹೋದಂತೆ ಇವುಗಳ ಕಲರವ ಸುಮಾರು 1ಕಿ.ಮೀವರೆಗು ಕೇಳಲಿದೆ. 8ಡಿಗ್ರಿ ಸೆ. ಉಷ್ಣಾಂಶವಿದ್ದರೂ ಈ ಗೂಡುಗಳು ಬೆಚ್ಚಗಿರಲಿದೆ. ಕೂಡಿ ಬಾಳುತ್ತಿರುವುದರಿಂದ ಶತ್ರುಗಳ ದಾಳಿಯೂ ತಗ್ಗಿದೆಯಂತೆ.

ಅದೆಲ್ಲಾ ಏನಾದರೂ ಇರಲಿ… ಸುಮಾರು 1ಟನ್ ಬಾರದ ಗೂಡು, ಜೊತೆಗೆ ಹಕ್ಕಿಗಳ ಭಾರಕ್ಕೆ ಮರಗಳು ಬಸವಳಿಯುತ್ತಿವೆ. ಗಾಳಿ ಮಳೆಗೆ ಇಡೀ ಮರದ ಟೊಂಗೆಗಳು ಮುರಿದು ಬೀಳುತ್ತಿವೆ. ಒಂದು ಟೊಂಗೆ ಕುಸಿದ ನಂತರ ‘ಟೊಂಗ್’ ಎಂದು ಮತ್ತೊಂದಕ್ಕೆ ನಮ್ಮ ರಾಜಕಾರಣಿಗಳಂತೆಯೇ ಹಾರಿ ಗೂಡಿನ ಸಮುಚ್ಛಯ ನಿರ್ಮಿಸುತ್ತವೆ. ಕೆಲವೇ ದಿನಗಳಲ್ಲಿ ಆ ರೆಂಬೆಯೂ ಕುಸಿಯುತ್ತದೆ…. ಒಟ್ಟಾರೆಯಾಗಿ ವರ್ಷದಲ್ಲಿ ಹಲವು ಮರಗಳನ್ನು ಈ ಹಕ್ಕಿ ಸಂಸಾರ ಕೆಡವಿಹಾಕುತ್ತಿವೆಯಂತೆ!

 

 

‘ತಾಯಿಗೆ ಮಗ ಭಾರ ಅಲ್ಲ. ಮರಕ್ಕೆ ಹಕ್ಕಿ ಭಾರ ಅಲ್ಲ’ ಎನ್ನುವ ಗಾದೆ ಮಾತು ಅಕ್ಷರಶಃ ಸುಳ್ಳಾಗಿವೆ. ನೆರಳು ಕೊಟ್ಟಿದಕ್ಕೆ ತನ್ನ ಉಸಿರನ್ನೇ ಕಸಿಯುತ್ತಿರುವ ಹಕ್ಕಿಗಳು ಮತ್ತು ಅವುಗಳ ಗೂಡು ನೋಡಲು ದಕ್ಷಿಣ ಆಫ್ರಿಕಾದ ಮರಳಗಾಡಿನ ತೀರ ಪ್ರದೇಶಗಳಿಗೆ ತೆರಳಬೇಕು. ಅಷ್ಟು ದೂರ ತೆರಳಲು ಸಾಧ್ಯವಿಲ್ಲವದವರು ಇಲ್ಲೇ ಸುದ್ದಿ – ಚಿತ್ರಗಳನ್ನು ಓದಿ ಆನಂದಿಸಬಹುದು.

ನಮ್ಮ ಸಂತ ಶಿಶುನಾಳ ಷರೀಫ್ ಏನಾದರೂ ಈ ಸುದ್ದಿ ಓದಿದರೆ ಏನೆಂದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top