fbpx
ಸಾಧನೆ

ಒಂದ್ ‘ಹೊಳ್ಳೆ’ ಕೆಲಸ.. ಮೂಗಿನ ಒಂದೇ ಹೊಳ್ಳೆಯಿಂದ ಕಾರ್ ಟ್ಯೂಬ್ಗೆ ಗಾಳಿ ತುಂಬಿಸುತ್ತಾನೆ!

ಒಂದ್ ‘ಹೊಳ್ಳೆ’ ಕೆಲಸ

 

ಮೂಗಿನ ಒಂದೇ ಹೊಳ್ಳೆಯಿಂದ ಕಾರ್ ಟ್ಯೂಬ್‍ಗೆ ಗಾಳಿ ತುಂಬಿಸುತ್ತಾನೆ!

 

ನಮಗೆ ಸಣ್ಣದೊಂದು (ಬೆಲೂನ್) ಪುಗ್ಗೆಗೆ ಗಾಳಿ ಊದಿ ದೊಡ್ಡದು ಮಾಡುವುದೇ ಕಷ್ಟ. ಕೆಲವರಿಗೆ ಪಂಪ್‍ನಿಂದ ಸೈಕಲ್ ಟ್ಯೂಬ್‍ಗೆ ಗಾಳಿ ಹೊಡೆಯುವಷ್ಟರಲ್ಲಿಯೇ ಸಾಕಾಗಿರುತ್ತದೆ. ಆದರೆ ಫಾಂಗ್ ಜುನ್ಹಾಯಿ ಮೂಗಿನ ಒಂದೇ ಹೊಳ್ಳೆಯಿಂದ  ಕಾರ್ ಟ್ಯೂಬ್‍ಗೆ ಗಾಳಿ ತುಂಬಿಸುತ್ತಾನೆ.

 

 

ಫಾಂಗ್ ಜುನ್ಹಾಯೇ ವಿಶ್ವದ ಮೊಟ್ಟಮೊದಲ ‘ಹ್ಯೂಮನ್ ಪಂಪ್’ ಏನೂ ಅಲ್ಲ. ಇವನಂತೆ ಅನೇಕರು ಚೀನಾ ದೇಶದಲ್ಲಿದ್ದಾರೆ.  ಸುಮಾರು ನಾಲ್ಕು ವರ್ಷಗಳ ಹಿಂದೆ ಗ್ಸಿ ಕ್ವಾಂಗೋ ಎಂಬ ಗಾಳಿ‘ಪಂಪ’ ಕೇವಲ 15 ಉಸಿರಲ್ಲೇ ಟ್ಯೂಬ್ ತುಂಬಿಸಿ ಸುದ್ದಿ ಮಾಡಿದ್ದ. ಆದರೆ ಅವರ್ಯಾರು ಫಾಂಗ್‍ನಂತೆ ಏಕ ಹೊಳ್ಳೆ ಬಳಸಿ  ಟ್ಯೂಬ್ ತುಂಬಿಸಿರಲಿಲ್ಲ. ಹೀಗಾಗಿ ಜುನ್ಹಾಯಿ ವಿಶೇಷವಾಗಿ ಕಾಣುತ್ತಾನೆ.

 

 

 

ಕುಂಗ್‍ಫು ಮಾಸ್ಟರ್ ಆಗಿರುವ ಜುನ್ಹಾಯಿ  10 ವರ್ಷಗಳಿಂದ   ಕರುಳು, ಶ್ವಾಸಕೋಶ ಹಾಗೂ ಹೃದಯಗಳಿಗೆ ಸಾಕಷ್ಟು ತಾಲೀಮು ಮಾಡಿಸಿದ್ದಾನೆ. ಕುಂಗ್‍ಫು ಆಡುವಷ್ಟೇ ಸಲೀಸಾಗಿ ಮೂಗಿನ ಒಂದೇ ಹೊಳ್ಳೆಯಿಂದ ಟ್ಯೂಬ್ ತುಂಬಿಸುತ್ತಾನೆ. 44ವರ್ಷಗಳ ಜುನ್ಹಾಯಿ ಮಾಡಿದ ಸಾಹಸವನ್ನು ನಾವು ಮಾಡಿದರೆ ಕಾದಿದೆ ಆಪತ್ತು. ಅಭ್ಯಾಸವಿಲ್ಲದೆ ಇಂತಹ ಗಾಳಿ ಊದುವ ಕೆಲಸಕ್ಕೆ ಕೈ ಹಾಕಿದರೆ ದೇಹದ ‘ಗಾಳಿ’ಯೇ ಹಾರಿ ಹೋಗಿರುತ್ತದೆ! ಈತನಿಂದ  ‘ಗಾಳಿ’ಊದುವುದನ್ನು ಕಲಿಯ ಬಯಸುವವರು ಚೀನಾದ ಪಶ್ಚಿಮೋತ್ತರ ಭಾಗದ ಜ್ಸಿಯಾನ್ ಪಟ್ಟಣಕ್ಕೆ ತೆರಳಬೇಕು.

 

 

ನಮ್ಮ ಕನ್ನಡನಾಡಿನಲ್ಲಿ ಈತ ಇದ್ದಿದ್ದರೆ ಅಭಿನವ ‘ಪಂಪ’ ಎನ್ನಬಹುದಿತ್ತು. ಅದೆಲ್ಲಾ ಏನಾದ್ರೂ ಇರ್ಲಿ…ಒಂದೊಳ್ಳೆ ಕಾರ್ಯಕ್ರಮ ಮಾಡುವ  ಜನಶ್ರೀ ಚಾನಲ್‍ನವರು  ಇವನ ಸಾಧನೆ ಕಂಡರೆ ಏನಂದಾರು?

 

ಒಂದ್ ‘ಹೊಳ್ಳೆ’ ಕೆಲಸ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top