fbpx
ಮನೋರಂಜನೆ

ಬಿಗ್‌ಬಾಸ್‌ ಮನೆಯಲ್ಲಿ ಇಡ್ಲಿ ತಿನ್ನೋಕು ನಂಬರ್ ಬೇಕಾ ? ಚಂದನ್ ಜಯಶ್ರೀನಿವಾಸನ್ ಬಗ್ಗೆ ಯಾಕಿಂಗೆ ಅಂದ್ರು!

ಬಿಗ್‌ಬಾಸ್‌ ಮನೆಯಲ್ಲಿ ಇಡ್ಲಿ ತಿನ್ನೋಕು ನಂಬರ್ ಬೇಕಾ ? ಚಂದನ್ ಜಯಶ್ರೀನಿವಾಸನ್ ಬಗ್ಗೆ ಯಾಕಿಂಗೆ ಅಂದ್ರು

 

ಯಾವಾಗಲು 3 ಅಥವಾ 5 ಇಡ್ಲಿಯನ್ನು ತಿನ್ನಬೇಕು” ಎಂದು ಜಯಶ್ರೀನಿವಾಸನ್ ಹೇಳಿದ್ದರು. ಇವರು ಹೇಳಿದೆಲ್ಲ ಅನುಸರಿಸೋಕೆ ಆಗುವುದಿಲ್ಲ ಎಂದು ದಿವಾಕರ್ ಹಾಗು ಚಂದನ್ ಜಯಶ್ರೀನಿವಾಸನ್ ಅವರ ಸಂಖ್ಯಾಶಾಸ್ತ್ರದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು.

 

 

ಚಂದನ್, ದಿವಾಕರ್, ಆಚಾರ್ಯ, ರಿಯಾಜ್ ಮತ್ತು ಜಯಶ್ರೀನಿವಾಸನ್ ಪ್ರಾಣಸ್ನೇಹಿತರಂತೆ ಯಾವಾಗಲು ಜೊತೆಗಿರುತ್ತಿದ್ದರು, ಆದರೆ ದಿನಗಳು ಕಳೆದಂತೆ ಇವರಿವರ ಮದ್ಯೆದಲ್ಲೇ ಮನಸ್ತಾಪಗಳು ಉಂಟಾಗಿ ಇವರ ಗುಂಪು ಬೇರೆಯಾಯಿತು. ಎಲ್ಲಾ ವಿಷಯಕ್ಕೂ ನಂಬರ್ ಹೇಳುವ ಜಯಶ್ರೀನಿವಾಸನ್ ಮಾತನ್ನು ಯಾರು ಕೇಳಲು ಸಿದ್ದವಿಲ್ಲ! ಅವರ ನಂಬರ್ ಅನ್ನು ಯಾರು ಬಿಗ್ ಬಾಸ್ ಮನೆಯಲ್ಲಿ ನಂಬುವುದು ಇಲ್ಲ..!

 

 

“ಒಬ್ಬ ವ್ಯಕ್ತಿ ಬೆಟ್ಟದ ತುದಿಯಿಂದ ಜಾರಿ ಬಿದ್ದಾಗ ಆಸರೆಗೆ ಒಂದು ಮರ ಸಿಗುತ್ತದೆ. ಅವನನ್ನು ರಕ್ಷಿಸಲು ಯಾರಾದರೂ ಬಂದಾಗ ವ್ಯಕ್ತಿಯನ್ನು ರಕ್ಷಿಸುವ ಬದಲು ನೀನು ಹುಟ್ಟಿದ ದಿನಾಂಕ ಏನು ಎಂದು ಯಾರೂ ಕೇಳುತ್ತಾ ನಿಲ್ಲುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮನುಷ್ಯತ್ವ ಮುಖ್ಯ” ಎಂದು ಚಂದನ್ ದಿವಾಕರ್ ಬಳಿ ಹೇಳಿದಾಗ ಅದನ್ನು ಸಂಪೂರ್ಣವಾಗಿ ಒಪ್ಪಿಕೊಂಡು ತಲೆಯಾಡಿಸಿದರು ದಿವಾಕರ್

 

ಮಹಿಳಾ ಸ್ಪರ್ಧಿಗಳಿಗೆ ಇಬ್ಬರು ಪುರುಷ ಸ್ಪರ್ಧಿಗಳನ್ನು ಹಾಗೂ ಪುರುಷ ಸ್ಪರ್ಧಿಗಳಿಗೆ ಇಬ್ಬರು ಮಹಿಳಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡಲು ಈ ಬಾರಿ ಬಿಗ್ ಬಾಸ್ ಹೇಳಿದ್ದರು, ಇದರ ಅನುಸಾರ ಅನುಪಮಾ, ನಿವೇದಿತಾ, ಸಮೀರ್, ಮತ್ತು ಜಯಶ್ರೀನಿವಾಸನ್ ಅವರು ನಾಮಿನೇಟ್ ಆಗಿದ್ದಾರೆ. ಜೆಕ್ ಅವರು ಅವರ ಸೂಪರ್ ಅಧಿಕಾರವನ್ನು ಬಳಸಿ ಲಾಸ್ಯ ಅವರನ್ನು ನೇರವಾಗಿ ಈ ವಾರ ನಾಮಿನೇಟ್ ಮಾಡಿದ್ದಾರೆ!

 

ಅನುಪಮಾ ಮತ್ತು ಶ್ರುತಿ ಕಳೆದ ವಾರದ ಟಾಸ್ಕ್ ನಲ್ಲಿ ಅದ್ಬುತ ಪ್ರದರ್ಶನ ನೀಡಿದ ಕಾರಣ ಬಿಗ್ ಬಾಸ್ ಅನುಪಮಾಗೆ ಅವರ ಮನೆಯಿಂದ ಊಟ ಕಳುಹಿಸಿ ಮತ್ತು ಶ್ರುತಿಗೆ ಪಿಜ್ಜಾ ಕಳುಹಿಸಿಕೊಡಲಾಗಿತ್ತು. ಬಿಗ್ ಬಾಸ್ ನಿಯಮದ ಪ್ರಕಾರ ಊಟವನ್ನು ಮನೆಯ ಬೇರೆ ಸದಸ್ಯರ ಜೊತೆ ಹಂಚಿಕೊಳ್ಳುವ ಹಾಗಿಲ್ಲ, ಆದರೂ ಕೃಷಿ ಅನುಪಮಾ ಅವರ ಬಾಕ್ಸ್ ನಿಂದ ಸ್ವಲ್ಪ ಊಟವನ್ನು ತಿನೀಡುಬೀಟರೂ, ಈ ಕುರಿತು ಬಿಗ್ ಬಾಸ್ 300 ಅಂಕಗಳನ್ನು ಅವರ ಲಕ್ಸುರಿ ಬಜೆಟ್ ನಿಂದ ಕಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top