fbpx
ಸಮಾಚಾರ

ಅಮ್ಮನ ಅನೈತಿಕ ಸಂಬಂಧಕ್ಕೆ ಬಲಿಯಾಯ್ತು ಆರು ವರ್ಷದ ಕೂಸು!

ಅಮ್ಮನ ಅನೈತಿಕ ಸಂಬಂಧಕ್ಕೆ ಬಲಿಯಾಯ್ತು ಆರು ವರ್ಷದ ಕೂಸು!

 

 

ಅನೈತಿಕ ಸಂಬಂಧವೆಂಬುದು ಮನುಷ್ಯರನ್ನು ಮೃಗವಾಗಿಸುತ್ತದೆ. ಇದರಿಂದಾಗಿರೋ ಭಯಾನಕ ಅನಾಹುತಗಳು ಒಂದೆರಡಲ್ಲ. ಗುಟ್ಟಾಗಿ ನಡೆಯೋ ಈ ವ್ಯವಹಾರ ಬಯಲಾಗೋ ಸಂದರ್ಭ ಬಂದರೆ ರಕ್ತ ಸಂಬಂಧವೂ ನೆತ್ತರಲ್ಲಿ ತೋಯ್ದು ಬಿಡೋದಿದೆ. ಪೂರ್ವ ದಿಲ್ಲಿಯ ಗಾಝೀಪುರ್ ಪ್ರದೇಶದಲ್ಲಿಯೂ ಅಂಥಾದ್ದೇ ಒಂದು ಬೀಭತ್ಸ ಕೃತ್ಯ ನಡೆದಿದೆ.

 

ಮುನ್ನಿದೇವಿ ಎಂಬ ಪೈಚಾಚಿಕ ಮನಸಿನ ಹೆಂಗಸು ತನ್ನದೇ ಆರು ವರ್ಷದ ಕೂಸನ್ನು ಕೊಂದು ಇದೀಗ ಪ್ರಿಯಕರ ಸುಧೀರ್ ಎಂಬಾತನೊಂದಿಗೆ ಜೈಲು ಪಾಲಾಗಿದ್ದಾಳೆ.

 

 

 

ಪೂರ್ವ ದಿಲ್ಲಿಯ ಗಾಝೀಪುರ್ ಪ್ರದೇಶದ ಕಿಷ್ಕಿಂಧೆಯಂಥಾ ಜೋಪಡಿಯೊಂದರಲ್ಲಿ ವಾಸವಿರೋ ಮುನ್ನಿ ದೇವಿಗೆ ಮೂವರು ಮಕ್ಕಳು. ಅದರಲ್ಲಿ ಈಗ ಕೊಲೆಯದ ಕಂದ ಕಾಜಲ್ ಕೊನೇ ಕೂಸಾಗಿತ್ತು. ಈ ಮುನ್ನಿಯ ಮನೆ ತುಂಬಾ ಹಾಸಿ ಹೊದೆಯುವಷ್ಟು ಬಡತನ. ಗಂಡನೆಂಬೋ ಪ್ರಾಣಿ ದುಡಿದು ಬಂದು ಕಂಠಮಟ್ಟ ಎಣ್ಣೆ ಹೊಡೆದು ಮಗಗಿದಾಕ್ಷಣವೇ ಮುನ್ನಿಯ ಅನೈತಿಕ ವ್ಯವಹಾರ ಮನೆಯೊಳಗೇ ಚಾಲೂ ಆಗುತ್ತಿತ್ತು.

 

ಆವತ್ತೂ ಕೂಡಾ ಗಂಡ ನಶೆಯೇರಿ ಮಲಗುತ್ತಿದ್ದಂತೆಯೇ ಪ್ರಿಯಕರ ಸುಧೀರ್‍ನನ್ನು ಕರೆಸಿಕೊಂಡಿದ್ದ ಮುನ್ನಿ ಅಷ್ಟೂ ಮಕ್ಕಳನ್ನು ರೂಮಲ್ಲಿ ಸೀರಿಯಲ್ ನೋಡಲು ಬಿಟ್ಟು ದಿನದ `ಕೆಲಸ’ದಲ್ಲಿ ತಲ್ಲೀನವಾಗಿದ್ದಳು. ಆದರೆ ಆರು ವರ್ಷದ ಪುಟ್ಟ ಕೂಸು ಕಾಜಲ್ ಅದೇನಕ್ಕೋ ಬಂದು ತನ್ನಮ್ಮ ಸುಧೀರ್ ಜೊತೆಗಿದ್ದ ಅಸಹ್ಯವನ್ನು ಕಣ್ಣಾರೆ ಕಂಡಿದೆ. ಹೀಗೆ ತನ್ನ ಗುಟ್ಟು ರಟ್ಟಾಗೋ ಭಯಕ್ಕೆ ಬಿದ್ದ ಮುನ್ನಿ ತಾನೇ ಹೆತ್ತ ಕೂಸನ್ನು ಕೊಲ್ಲೋ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾಳೆ.

 

ತಕ್ಷಣವೇ ಮಗುವನ್ನು ಹಿತ್ತಲಿಗೆ ಕರೆದೊಯ್ದು ಮುನ್ನಿ ಒತ್ತಿ ಹಿಡಿದರೆ ರಾಕ್ಷಸ ಸುಧೀರ್ ಆ ಕೂಸಿನ ಕತ್ತಿಗೆ ಚಾಕೂವಿನಿಂದ ಜೀರಿ ಕೊಂದಿದ್ದಾನೆ. ನಂತರ ಹೆಣವನ್ನು ಎಲ್ಲೋ ಎಸೆದು ಬಂದು ಮಗು ಕಳೆದು ಹೋದಂತೆ ಮಾಮೂಲಿ ನಾಟಕವಾಡಿದರೂ ಈ ಹಂತಕ ಲಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಹೆತ್ತಮ್ಮನೇ ಹಂತಕಿಯಾದ ಈ ರೌಧ್ರ ಎಂಥವರನ್ನೂ ಬೆಚ್ಚಿ ಬೀಳಿಸುವಂತಿದೆ!ಅನೈತಿಕ ಸಂಬಂಧವೆಂಬುದು ಮನುಷ್ಯರನ್ನು ಮೃಗವಾಗಿಸುತ್ತದೆ. ಇದರಿಂದಾಗಿರೋ ಭಯಾನಕ ಅನಾಹುತಗಳು ಒಂದೆರಡಲ್ಲ. ಗುಟ್ಟಾಗಿ ನಡೆಯೋ ಈ ವ್ಯವಹಾರ ಬಯಲಾಗೋ ಸಂದರ್ಭ ಬಂದರೆ ರಕ್ತ ಸಂಬಂಧವೂ ನೆತ್ತರಲ್ಲಿ ತೋಯ್ದು ಬಿಡೋದಿದೆ. ಪೂರ್ವ ದಿಲ್ಲಿಯ ಗಾಝೀಪುರ್ ಪ್ರದೇಶದಲ್ಲಿಯೂ ಅಂಥಾದ್ದೇ ಒಂದು ಬೀಭತ್ಸ ಕೃತ್ಯ ನಡೆದಿದೆ.

 

 

ಮುನ್ನಿದೇವಿ ಎಂಬ ಪೈಚಾಚಿಕ ಮನಸಿನ ಹೆಂಗಸು ತನ್ನದೇ ಆರು ವರ್ಷದ ಕೂಸನ್ನು ಕೊಂದು ಇದೀಗ ಪ್ರಿಯಕರ ಸುಧೀರ್ ಎಂಬಾತನೊಂದಿಗೆ ಜೈಲು ಪಾಲಾಗಿದ್ದಾಳೆ.

 

ಪೂರ್ವ ದಿಲ್ಲಿಯ ಗಾಝೀಪುರ್ ಪ್ರದೇಶದ ಕಿಷ್ಕಿಂಧೆಯಂಥಾ ಜೋಪಡಿಯೊಂದರಲ್ಲಿ ವಾಸವಿರೋ ಮುನ್ನಿ ದೇವಿಗೆ ಮೂವರು ಮಕ್ಕಳು. ಅದರಲ್ಲಿ ಈಗ ಕೊಲೆಯದ ಕಂದ ಕಾಜಲ್ ಕೊನೇ ಕೂಸಾಗಿತ್ತು. ಈ ಮುನ್ನಿಯ ಮನೆ ತುಂಬಾ ಹಾಸಿ ಹೊದೆಯುವಷ್ಟು ಬಡತನ. ಗಂಡನೆಂಬೋ ಪ್ರಾಣಿ ದುಡಿದು ಬಂದು ಕಂಠಮಟ್ಟ ಎಣ್ಣೆ ಹೊಡೆದು ಮಗಗಿದಾಕ್ಷಣವೇ ಮುನ್ನಿಯ ಅನೈತಿಕ ವ್ಯವಹಾರ ಮನೆಯೊಳಗೇ ಚಾಲೂ ಆಗುತ್ತಿತ್ತು.

 

ಆವತ್ತೂ ಕೂಡಾ ಗಂಡ ನಶೆಯೇರಿ ಮಲಗುತ್ತಿದ್ದಂತೆಯೇ ಪ್ರಿಯಕರ ಸುಧೀರ್‍ನನ್ನು ಕರೆಸಿಕೊಂಡಿದ್ದ ಮುನ್ನಿ ಅಷ್ಟೂ ಮಕ್ಕಳನ್ನು ರೂಮಲ್ಲಿ ಸೀರಿಯಲ್ ನೋಡಲು ಬಿಟ್ಟು ದಿನದ `ಕೆಲಸ’ದಲ್ಲಿ ತಲ್ಲೀನವಾಗಿದ್ದಳು. ಆದರೆ ಆರು ವರ್ಷದ ಪುಟ್ಟ ಕೂಸು ಕಾಜಲ್ ಅದೇನಕ್ಕೋ ಬಂದು ತನ್ನಮ್ಮ ಸುಧೀರ್ ಜೊತೆಗಿದ್ದ ಅಸಹ್ಯವನ್ನು ಕಣ್ಣಾರೆ ಕಂಡಿದೆ. ಹೀಗೆ ತನ್ನ ಗುಟ್ಟು ರಟ್ಟಾಗೋ ಭಯಕ್ಕೆ ಬಿದ್ದ ಮುನ್ನಿ ತಾನೇ ಹೆತ್ತ ಕೂಸನ್ನು ಕೊಲ್ಲೋ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾಳೆ.

 

ತಕ್ಷಣವೇ ಮಗುವನ್ನು ಹಿತ್ತಲಿಗೆ ಕರೆದೊಯ್ದು ಮುನ್ನಿ ಒತ್ತಿ ಹಿಡಿದರೆ ರಾಕ್ಷಸ ಸುಧೀರ್ ಆ ಕೂಸಿನ ಕತ್ತಿಗೆ ಚಾಕೂವಿನಿಂದ ಜೀರಿ ಕೊಂದಿದ್ದಾನೆ. ನಂತರ ಹೆಣವನ್ನು ಎಲ್ಲೋ ಎಸೆದು ಬಂದು ಮಗು ಕಳೆದು ಹೋದಂತೆ ಮಾಮೂಲಿ ನಾಟಕವಾಡಿದರೂ ಈ ಹಂತಕ ಲಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಹೆತ್ತಮ್ಮನೇ ಹಂತಕಿಯಾದ ಈ ರೌಧ್ರ ಎಂಥವರನ್ನೂ ಬೆಚ್ಚಿ ಬೀಳಿಸುವಂತಿದೆ!

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top