fbpx
ಮನೋರಂಜನೆ

ಜೈಲಿನಿಂದ ತಪ್ಪಿಸಿಕೊಂಡು ಬಂದ ಕೊಲೆಗಾರರು ಬಿಗ್ ಬಾಸ್ ಮನೆಯಲ್ಲಿದ್ದಾರೆ !

ಜೈಲಿನಿಂದ ತಪ್ಪಿಸಿಕೊಂಡು ಬಂದ ಕೊಲೆಗಾರರು ಬಿಗ್ ಬಾಸ್ ಮನೆಯಲ್ಲಿದ್ದಾರೆ !

 

ಬಿಗ್ ಬಾಸ್ ಮನೆಯಲ್ಲಿ ಕೊಲೆಗಾರರು ಪತ್ತೆಯಾಗಿದ್ದರೆ..! ಬಿಗ್ ಬಾಸ್ ಸ್ಪರ್ಧಿಗಳನ್ನು ಕೊಳ್ಳುವುದೇ ಅವರ ಉದ್ದೇಶ..! ಹೆದರಿಕೆ ಪಡುವಂಥ ವಿಷಯವಾದರೂ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಏನು ತೊಂದರೆ ಇಲ್ಲದೆ ಆರಾಮವಾಗಿದ್ದಾರೆ.

 

ಹೆದರಿಕೊಳ್ಳುವಂತಿಲ್ಲ!! ಈ ವಾರ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದರು . ಇದರ ಅನುಸಾರ ಜೈಲಿನಿಂದ ತಪ್ಪಿಸಿಕೊಂಡು ಬಂದಿರುವ ಇಬ್ಬರು ಕೊಲೆಗಾರರು ಇತರ ಸ್ಪರ್ಧಿಗಳನ್ನು ಕೊಂದು ಅವರಿಗೆ ನೀಡಿರುವ ಟಾಸ್ಕ್ ಕಂಪ್ಲೀಟ್ ಮಾಡಬೇಕು. ಬಿಗ್ ಬಾಸ್ ಟಾಸ್ಕ್ ನಿಯಮದ ಪ್ರಕಾರ ಇತರ ಸ್ಪರ್ಧಿಗಳು ಅವರಿಗೆ ಏನು ಅಪಾಯವಾಗದಂತೆ ಅವರೇ ಎಚ್ಚರ ವಹಿಸಬೇಕು.

 

ಮೊದಲಿಗೆ ಬಿಗ್ ಬಾಸ್ ಎಲ್ಲ ಸ್ಪರ್ಧಿಗಳನ್ನು ಕನ್ಫೆಶನ್ ರೂಮ್‌‌ಗೆ ಕರೆದು ಕೆಲವು ಮಾಹಿತಿ ನೀಡಿದರು, ರಿಯಾಜ್ ಹಾಗು ಅನುಪಮಾ ಅವರನ್ನು ಕೊಲೆಗಾರರನ್ನಾಗಿ ಬಿಗ್ ಬಾಸ್ ನೇಮಿಸಿದರು, ಇದರ ಅನುಸಾರ ಅವರು ಇತರ ಸ್ಪರ್ಧಿಗಳನ್ನು ಕೊಲೆ ಮಾಡಬೇಕಿತ್ತು. ಬಿಗ್ ಬಾಸ್ ಇವರಿಬ್ಬರಿಗೆ ಅರ್ಧ ಹರಿದಿರುವ ನೋಟನ್ನು ಕೊಟ್ಟಿದ್ದರು, ಒಬ್ಬರಿಗೊಬ್ಬರು ಮತ್ತೊಬ್ಬ ಕೊಲೆಗಾರ ಯಾರು ಎಂದು ಕಂಡುಹಿಡಿಯಲು ಬಿಗ್ ಬಾಸ್ ಹೇಳಿದರು.

 

 

 

 

ಬಿಗ್ ಬಾಸ್ ರಿಯಾಜ್ ಅವರಿಗೆ ರಹಸ್ಯವಾಗಿ ಒಂದು ಮೊಬೈಲ್ ಕೊಡಲಾಗಿತ್ತು, ಯಾರಿಗೂ ಅನುಮಾನ ಬರದಂತೆ ಯಾರನ್ನು ಹೇಗೆ ಕೊಲ್ಲಬೇಕು ಎಂದು ಬಿಗ್ ಬಾಸ್ ರಿಯಾಜ್ ಗೆ ಮೊಬೈಲ್ ನ ಮೂಲಕ ಹೇಳುತ್ತಿದ್ದರು. ಲಾಸ್ಯ ಅವರಿಂದ 4 ಜೊತೆ ಬಟ್ಟೆಯನ್ನು ಮಡಿಚಿ ಇಡಿಸಬೇಕೆಂದು ರಿಯಾಜ್ ಅವರಿಗೆ ಬಿಗ್ ಬಾಸ್ ಮೊದಲನೇ ಕೊಲೆ ಮಾಡಲು ಹೇಳಿದರು. ಇದರ ಅನುಸಾರ ಪರೀಕ್ಷಿಸುವ ನೆಪದಲ್ಲಿ ರಿಯಾಜ್ ತನ್ನ ಬುದ್ದಿವಂತಿಕೆ ಇಂದ ಲಾಸ್ಯ ಅವರನ್ನು ಅವರ ಬೆಡ್ ಬಳಿ ಕರೆದುಕೊಂಡು ಹೋಗಿ ಬಟ್ಟೆಗಳನ್ನೂ ಮಡಚುವಂತೆ ಕೇಳಿಕೊಂಡಾಗ ಲಾಸ್ಯ ಅವರು ಸಾಮಾನ್ಯವಾಗಿ ಬಟ್ಟೆ ಮಡಚಿಕೊಟ್ಟರು.

 

 

 

ರಿಯಾಜ್ ಅವರಿಗೆ ಬಿಗ್ ಬಾಸ್ ಎರಡನೆಯದಾಗಿ ಜಯಶ್ರೀನಿವಾಸನ್ ಅವರಿಂದ ರಜನಿಕಾಂತ್ ಡೈಲಾಗ್ ಹೇಳಿಸುವ ಮೂಲಕ ಅವರನ್ನು ಕೊಲೆ ಮಾಡಬೇಕೆಂದು ಹೇಳಿದರು. ಇದರ ಅನುಸಾರ ರಿಯಾಜ್ ಅವರು ಗಾರ್ಡನ್ ಏರಿಯಾದಲ್ಲಿ ಲಾಸ್ಯ, ಸಂಯುಕ್ತ ಅವರಿಗೆ ಜಯಶ್ರೀನಿವಾಸನ್ ಒಬ್ಬ ಒಳ್ಳೆಯ ಆರ್ಟಿಸ್ಟ್, ಅವರು ರಜನಿಕಾಂತ್ ರನ್ನು ತುಂಬ ಚನ್ನಾಗಿ ಇಮಿಟೇಟ್ ಮಾಡುತ್ತಾರೆ ಎಂದು ಹೊಗಳುವ ಮೂಲಕ ಜಯಶ್ರೀನಿವಾಸನ್ ಅವರ ಬಳಿ ರಜನಿಕಾಂತ್ ರನ್ನು ಇಮಿಟೇಟ್ ಮಾಡಿಸಿ ಅವರನ್ನು ಯಾರಿಗೂ ಅನುಮಾನ ಬರದಂತೆ ಕೊಲೆ ಮಾಡಿದರು.

 

 

 

ಲಾಸ್ಯ ಹಾಗು ಜಯಶ್ರೀನಿವಾಸನ್ ಅವರ ಕೊಲೆಗಾರನಿಗೆ ಬಲಿಯಾಗಿದ್ದಾರೆ, ಕೊಲೆಗಾರನು ತನ್ನ ಎರಡು ಬೇಟೆಗಳನ್ನು ಯಶಸ್ವಿಯಾಗಿ ಮಾಡಿದ್ದಾನೆ ಎಂದು ಬಿಗ್ ಬಾಸ್ ಹೇಳಿದಾಗ ಇತರ ಸ್ಪರ್ಧಿಗಳಿಗೆ ಕೊಲೆಗಾರ ಯಾರೆಂದು ಆತಂಕ ಹೆಚ್ಚಾಯಿತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top