fbpx
ರಾಜಕೀಯ

ದಶಕಗಳ ಮಹದಾಯಿ ವಿವಾದ ಅಂತ್ಯಗೊಳಿಸಿ ಜನತೆಗೆ ಭರ್ಜರಿ ಗಿಫ್ಟ್ ನೀಡಿದ ಬಿ.ಸ್.ವೈ..!!

ದಶಕಗಳ ಮಹದಾಯಿ ವಿವಾದ ಅಂತ್ಯಗೊಳಿಸಿ ಜನತೆಗೆ ಭರ್ಜರಿ ಗಿಫ್ಟ್ ನೀಡಿದ ಬಿ.ಸ್.ವೈ..!!

 

ದಶಕಗಳ ಮಹದಾಯಿ ಹೋರಾಟಕ್ಕೆ ಸಿಕ್ತು ಜಯ. ಗೋವಾ ಜೊತೆಗಿನ ವಿವಾದ ಅಂತ್ಯ.!!

 

 

ಗೋವಾ ಮತ್ತು ಕರ್ನಾಟಕದ ಮಧ್ಯೆ ದಶಕಗಳ ಕಾಲ ಕಗ್ಗಂಟಾಗಿ ಉಳಿದಿದ್ದ ಮಹದಾಯಿ ಸಮಸ್ಯೆ ಕೊನೆಗೂ ಪರಿಹಾರ ಸಿಕ್ಕಿದಂತಾಗಿದೆ. ಜನರ ಮೊಗದಲ್ಲಿ ಸಂತಸ ಮನೆಮಾಡಿದೆ.

ಬುಧವಾರ ದಿನಾಂಕ ೨೦/೧೨/೨೦೧೭ ರಂದು ಅಮಿತ ಷಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ ಎಸ್ ಯಡಿಯೂರಪ್ಪ ಹಾಗು ಗೋವಾ ಮುಖ್ಯಮಂತ್ರಿಗಳಾದ ಮನೋಹರ್ ಪರಿಕ್ಕರ ಭಾಗವಹಿಸಿದ್ದರು. ಈ ಸಭೆಯಲ್ಲಿ ತಾರ್ಕಿಕ ಸಮಸ್ಯೆಗೆ ಇತ್ಯರ್ಥ ಕಾಣಲಾಗಿಗೆ ಎಂದು ಹೇಳಲಾಗುತ್ತಿದೆ. ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ನಾಳೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ನಾಳೆ ದಿನಾಂಕ ೨೦/೧೨/೨೦೧೭ ರಂದು ಹುಬ್ಬಳ್ಳಿಯಲ್ಲಿ ಪರಿವರ್ತನೆ ಯಾತ್ರೆ ನಡೆಯಲಿದ್ದು ಈ ಸಂಧರ್ಭದಲ್ಲಿ ಘೋಷಣೆ ಮಾಡಲಿದ್ದಾರೆ.

ಪರಿಕ್ಕರ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು ನಮಗೆ ತೃಪ್ತಿ ತಂದಿದೆ ಎಂದು ಸಭೆಯ ನಂತರ ಬಿ.ಸ್.ವೈ ತಿಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top