fbpx
ದೇವರು

ಮುತ್ತು, ರತ್ನ, ವಜ್ರ ಮತ್ತು ವೈಡೂರ್ಯಗಳನ್ನು ರಸ್ತೆಯ ಬದಿಯಲ್ಲಿ ರಾಶಿ ರಾಶಿಗಳಲ್ಲಿ ಹಾಕಿ ಮಾರುತ್ತಿದ್ದ ಹಂಪಿಯ ಗತ ವೈಭವ ವಿರೂಪಾಕ್ಷ ದೇವಸ್ಥಾನದ ಬಗ್ಗೆ ಗೊತ್ತಿರದ ವಿಷಯಗಳು

ಹಂಪಿಯ ಗತವೈಭವ ಮತ್ತು ವಿರೂಪಾಕ್ಷ ಸ್ವಾಮಿ ದೇವಾಲಯದ ವರ್ಣನೆ.

 

 

ಪವಿತ್ರ ತುಂಗಭದ್ರಾ ನದಿ ತೀರದಲ್ಲಿ ಕನ್ನಡ ಸಾಮ್ರಾಜ್ಯ, ವಿಜಯನಗರವು ಸ್ಥಾಪನೆಯಾದ ಸ್ಥಳ ಹಂಪಿ, ಪ್ರಕೃತಿಯ ರಮಣೀಯತೆಗೆ ಹತ್ತಿರವಾಗಿ ಸಂಸ್ಕೃತಿಯ ಮಡಿಲಿನಲ್ಲಿ ರಮಿಸುವಂತ  ತಾಣ ಹಂಪಿ ವಿಜಯನಗರ ಸಾಮ್ರಾಜ್ಯದ ಗತ ವೈಭವಕ್ಕೆ ಒಂದು ಸುಮಧುರವಾದ ನೆನಪು, ಪ್ರತ್ಯಕ್ಷ ಸಾಕ್ಷಿ, ಹಂಪಿ. ಐನೂರು ವರ್ಷಗಳ ಹಿಂದೆ ವೈಭವದಿಂದ ಮೆರೆದ ಈ ಕನ್ನಡದ ರಾಜಧಾನಿಯಲ್ಲಿ ಮುತ್ತು, ರತ್ನ, ವಜ್ರ ಮತ್ತು ವೈಡೂರ್ಯಗಳನ್ನು ರಸ್ತೆಯ ಬದಿಯಲ್ಲಿ ರಾಶಿ ರಾಶಿಗಳಲ್ಲಿ ಹಾಕಿ ಮಾರುತ್ತಿದ್ದರು ಎಂಬ ಇತಿಹಾಸ ಇದಕ್ಕೆ ಇದೆ. ಸಾಂಸ್ಕೃತಿಕ ನೆಲೆಯು ಇದಾಗಿದೆ. ನಾಗರಿಕತೆಯ ನಂಟು ಅಂಟಿದೆ. ಹಂಪಿಗೆ ಸರಿಸಮಾನತೆಯಾದ ಮತ್ತೊಂದು ಸ್ಥಳ ಮತ್ತೆ ಇನ್ಯಾವುದೇ ಪ್ರದೇಶ ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂಬ ಖ್ಯಾತಿಗೂ ಸಹ ಹಂಪಿ ಭಾಜನವಾಗಿದೆ. ಇದು ಹಂಪಿಯ ಕಂಠದಿಂದ ಬಂದ ಮಾತುಗಳಲ್ಲ ವಿದೇಶಿ ಯಾತ್ರಿಕರು ಮುಕ್ತ ಕಂಠದಿಂದ ಹಾಡಿ ಹೊಗಳಿದ ಪ್ರಶಂಸೆಯ ಮಾತುಗಳು.

 

ತುಂಗಭದ್ರಾ ನದಿಯ ದಂಡೆಯ ಮೇಲೆ ಪಂಪಾ ಪರಿಸರದಲ್ಲಿ ಮೂರ್ತಿವೆತ್ತ ಈ ಸುಂದರ ತಾಣವೇ ಹಂಪಿ. ರಾಯ ರಾಯರ ಗಂಡ ಕೃಷ್ಣದೇವರಾಯನ ಕಾಲದಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಹಂಪಿಯಲ್ಲಿ ನೋಡಲೇಬೇಕಾದ ಹತ್ತು ಹಲವು ಪ್ರಮುಖ ಸ್ಥಳಗಳಿವೆ. ನಿರ್ಮಲವಾಗಿ ಹರಿಯುವ ತುಂಗಭದ್ರಾ ನದಿ, ಗಜ ಗಾತ್ರದಲ್ಲಿ ಇರುವ ಸಾಸಿವೆ ಕಾಳು ಗಣಪತಿ, ಕೃಷ್ಣ ದೇಗುಲ, ಹಾಗೆಯೇ ಶಿಲ್ಪಕಲಾ ಸೌಂದರ್ಯ, ವಿಜಯ ವಿಠ್ಠಲ ಮಂದಿರ, ಭಗ್ನಗೊಂಡು ದುರಸ್ತಿಯಾದ ಉಗ್ರನರಸಿಂಹ, ಬಟವಿ ಲಿಂಗ, ಉದ್ದಾನ ವೀರಭದ್ರೇಶ್ವರ ಸ್ವಾಮಿ, ಅಕ್ಕ ತಂಗಿ ಗುಂಡಿ, ಅಂತಃಪುರದ ಪ್ರವಾಸಿಗಳು ನಲೆಸಲು ನಿರ್ಮಿಸಲಾಗಿರುವ ಕಮಲ ಮಹಲ್ , ಹಂಪಿಯ ಆರಾಧ್ಯ ದೈವ ವಿರೂಪಾಕ್ಷ ದೇಗುಲ. ಅದರ ಎದುರು ಇಕ್ಕೆಲಗಳಲ್ಲೂ ಇರುವ ಬಜಾರು ರಸ್ತೆ, ನಂದಿಯ ದಂಡೆಯಲ್ಲಿ ಇರುವ ಪುರಂದರ ಮಂಟಪ , ಅರಸನ ತುಲಾ ಭಾರ ಹಾಗೆಯೇ ವರಾಹ ಸ್ವಾಮಿ ದೇವಸ್ಥಾನದ ಮಾತಂಗ ಪರ್ವತ ಅಚ್ಯುತರಾಯ ದೇವಾಲಯ. ಉತ್ತರ ಶಿಲ್ಪಕಲಾ ವೈಭವ, ಪಟ್ಟಾಭಿರಾಮ ದೇಗುಲ, ಗಾಣಗಿತ್ತಿ ದೇಗುಲ, ಕಾವಲು ಗೋಪುರ, ಹಜಾರಿ ರಾಮಮಂದಿರ, ಗಜಶಾಲೆ, ಅಷ್ಟೇ ಅಲ್ಲ, ವಿಶ್ವ ವಿಖ್ಯಾತಿಯಾಗಿರುವ ಕಲ್ಲಿನ ತೇರು ಹಾಗೂ ಮಹಾನವಮಿ ದಿಬ್ಬ.

 

 

ಇವೆಲ್ಲ ಒಂದು ಕಡೆಯಾದರೆ ವಿರೂಪಾಕ್ಷ ದೇವಾಲಯದಲ್ಲಿನ ಪರಮೇಶ್ವರ ಹಾಗೂ ಪಂಪ ದೇವರಿಗಾಗಿ ನಿರ್ಮಿಸಲಾದ ದೇವಾಲಯವೂ ಇದೆ ಎಂದು ಹೇಳಲಾಗುತ್ತಿದೆ. ಐವತ್ತು ಮೀಟರ್ ಎತ್ತರದ ಗೋಪುರವನ್ನು ಹೊಂದಿರುವಂತಹ ಈ ದೇವಾಲಯ ದ್ರಾವಿಡಿಯನ್ ಮಾದರಿಯ ವಾಸ್ತು ಶಿಲ್ಪವನ್ನು ಹೊಂದಿದೆ. ಈ ದೇವಾಲಯ ಮುಖಮಂಟಪ  ಹಾಗೂ ಇನ್ನಿತರೆ ಮೂರು ಭಾಗಗಳನ್ನು ಕಂಬಗಳು ಇರುವ ವಿಶಾಲವಾದ ಕೊಠಡಿಯನ್ನು ಹೊಂದಿದೆ. ಈ ದೇಗುಲ ತ್ರಿನೇತ್ರನಾದ ಶಿವನು ವಿರೂಪಾಕ್ಷನಾಗಿ, ಪಾರ್ವತಿ ದೇವಿ  ಪ೦ಪಾ ದೇವಿಯಾಗಿ ನೆಲೆಸಿರುವಂತಹ ಸ್ಥಳವೇ ವಿರೂಪಾಕ್ಷ ದೇವಾಲಯದ ಹಂಪಿ.

 

 

ಇಲ್ಲಿರುವ ಸಾಲು ಮಂಟಪದ ಗೋಪುರಗಳ ಮೇಲೆ ಒಂದು ಅತ್ಯದ್ಭುತ ಕಾಣಸಿಗುತ್ತದೆ.ಅದು ಯಾವ ವೈಜ್ಞಾನಿಕರಿಗೂ ಮೂಲ ರಹಸ್ಯದ ಅರಿವು ಮೂಡಿಸದೆ ಇರುವಂತಹ ಅಗಮ್ಯ ಗೋಚರವಾದ ಒಂದು ಅತ್ಯದ್ಭುತವಾದ ಸಂಗತಿಯಾಗಿದೆ. ವಿರೂಪಾಕ್ಷ ಸ್ವಾಮಿಯು ಸಾಲು ಸಾಲು ಮಂಟಪದ ಗೋಡೆಯ ಮೇಲೆ ರಾಜಗೋಪುರದ ನೆರಳು ತಲೆಕೆಳಗಾಗಿ ಬೀಳುತ್ತದೆ. ರಾಜಗೋಪುರದಿಂದ ಮೂರೂವರೆ ಅಡಿಯಲ್ಲಿ ಈ ಸಾಲು ಮಂಟಪದ ಗೋಡೆ ಇರುತ್ತದೆ. ಪ್ರಧಾನ ಆಲಯದ  ಗೋಡೆಯೂ ಆರು ಅಡಿಗಳಷ್ಟು ಸೀಳು ಬಿಟ್ಟಿರುವುದರಿಂದ… ಆ ಸೀಳಿನ ಮುಖಾಂತರ ಸೂರ್ಯನ ಕಿರಣಗಳು ಆಲಯದ ಒಳಗಡೆ ಪಶ್ಚಿಮ ಗೋಡೆಯ ಮೇಲೆ ಬಿದ್ದು ಆಲಯ ಪೂರ್ವಾಭಿಮುಖವಾಗಿ ಪ್ರಧಾನ ದ್ವಾರ ಬಾಗಿಲಿನ ಮೂಲಕ ರಾಜಗೋಪುರದಿಂದ ಹಿಡಿದು ನೆರಳು ತಲೆಕೆಳಕಾಗಿ ಕಾಣುತ್ತದೆ. ಈ ನೆರಳು ಸಂವತ್ಸರವಿಡೀ.. ಅಂದರೆ ಮುನ್ನೂರ ಅರುವತ್ತೈದು ದಿನಗಳು ಪ್ರವಾಸಿಗರಿಗೆ ಕಾಣಲು ಸಿಗುತ್ತದೆ.

 

ಈ ಗೋಪುರ, ರಾಜಗೋಪುರ ಹಾಗೂ ಸಾಲು ಮಂಟಪದ ಮಧ್ಯದಲ್ಲಿ ಇರುತ್ತದೆ. ಸಾಲು ಮಂಟಪ ಭೂಮಿಯ ಮೇಲೆ ಬೀಳುವ ನೆರಳಿನ ಐವತ್ತು ಮೀಟರ್ ಗಳಷ್ಟಾಗಿ ಇರುತ್ತದೆ. ಇನ್ನೂ  ನಿಜವಾಗಿಯೂ ನೋಡುವುದಾದರೆ ಐವತ್ತು ಮೀಟರ್ ಗೋಪುರದ ಎತ್ತರ ಇರುವುದು ಅಚ್ಚರಿಯನ್ನು ಮೂಡಿಸುತ್ತದೆ. ಇದೊಂದು ಅತ್ಯದ್ಭುತವಾದ ಪರಮೇಶ್ವರನ ಲೀಲೆ ಎಂದು ಹೇಳುವವರು ಕೆಲವರಾದರೆ ಅತ್ಯದ್ಭುತ ವಾಸ್ತು ಶಿಲ್ಪ, ಪ್ರತಿಭೆಗೆ, ಪ್ರಾವೀಣ್ಯಕ್ಕೆ, ವೈಜ್ಞಾನಿಕತೆಗೆ ಇದು ನಿದರ್ಶನ ಕೂಡ.

 

 

ಇನ್ನೂ ಮತ್ತೊಂದು ವಿಶೇಷತೆ ಏನೆಂದರೆ ಯುಗಾದಿಯ ಸಮಯದಲ್ಲಿ ಉದಯಿಸುವ ಸೂರ್ಯ ರಶ್ಮಿ, ಗರ್ಭ ಗುಡಿಯ  ಆ ಸೀಳಿನ ಮುಖಾಂತರ ಒಳಗೆ ಪ್ರವೇಶಿಸಿ ಗರ್ಭಗುಡಿಯಲ್ಲಿರುವ ಶಿವಲಿಂಗದ ಪಾದಗಳನ್ನು ಸ್ಪರ್ಶಿಸುತ್ತದೆಯಂತೆ. ಇತ್ತೀಚೆಗೆ ಹೊರಬಂದ ಮತ್ತೊಂದು ಸಂಗತಿ ಎಂದರೆ ಅಲ್ಲಿ ಪ್ರಧಾನ ದೇವರಾದ ವಿರೂಪಾಕ್ಷ ಸ್ವಾಮಿಯ ಗರ್ಭಗುಡಿಯ ನೆರಳು ವಿರೂಪಾಕ್ಷ ಸ್ವಾಮಿಯ ಹಿಂದಿನ ಗೋಡೆಯ ಸಾಲು ಮಂಟಪದಲ್ಲಿ ತಲೆಕೆಳಗಾಗಿ ಬೀಳುತ್ತದೆಯಂತೆ. ಗರ್ಭಗುಡಿಯ ನೆರಳು ಗರ್ಭಗುಡಿಯ ಗೋಪುರದ ಒಂದು ರಂಧ್ರದಿಂದ ಪ್ರವೇಶಿಸಿ ಅದು ಸಾಲು ಮಂಟಪದ ಭೂಮಿಯ ಮೇಲೆ ಪ್ರತ್ಯಕ್ಷವಾಗುತ್ತದೆಯಂತೆ. ವಿರೂಪಾಕ್ಷ ಸ್ವಾಮಿಯ ದೇವಾಲಯದ ಪ್ರಕಾರ ಪ್ರಾತಃಕಾಲದಿಂದ ಹಿಡಿದು ಒಂಬತ್ತು ಗಂಟೆಗಳವರೆಗೆ ಪ್ರತಿಯೊಬ್ಬರಿಗೂ ಕಾಣಸಿಗುತ್ತದೆ. ಕೆಲವೊಮ್ಮೆ ಸಂಜೆಯ ಸಮಯದಲ್ಲಿಯೂ ಈ ನೆರಳನ್ನು ನೋಡಬಹುದು ವಿರೂಪಾಕ್ಷ ಸ್ವಾಮಿಯು ಆಲಯದ ಪ್ರಕಾರ ಒಳಗಡೆ ಇನ್ನೂ ಚಿಕ್ಕ ಚಿಕ್ಕ ದೇವಾಲಯಗಳು ಸಾಕಷ್ಟಿವೆ. ಅಷ್ಟೇ ಅಲ್ಲ ದೇವಾಲಯದಲ್ಲಿ ದೇವತೆಗಳ ವಿಗ್ರಹಗಳು ಮಂಟಪಗಳು ಸಾಕಷ್ಟು ಕಾಣಸಿಗುತ್ತವೆ. ಅಲ್ಲಿ ಮೂರು ತಲೆಯ ನಂದೀಶ್ವರನ ದರ್ಶನವೂ ನಮಗೆ ಆಗುತ್ತದೆ. ಇನ್ನೂ ಪ್ರಧಾನ ಆಲಯಕ್ಕೆ ಉತ್ತರ ದಿಕ್ಕಿನಲ್ಲಿರುವ ಎರಡು ದೇವಾಲಯಗಳಲ್ಲಿ ಪರಮೇಶ್ವರನ ಸತಿಯರಾದ  ಪಂಪಾದೇವಿ ಹಾಗೂ ಕನ್ನಡದ ದೇವಿಯಾದ  ಭುವನೇಶ್ವರಿ ತಾಯಿಯೂ ಅಲ್ಲಿ ನೆಲೆಸಿದ್ದಾರೆ.

 

 

ಪ್ರಧಾನ ಆಲಯಕ್ಕೆ ಪೂರ್ವದಲ್ಲಿ ಭೂಮಿಯ ಒಳಗಡೆ ಪಾತಾಳೇಶ್ವರ ಸ್ವಾಮಿಯ ಆಲಯವೂ ಇದೆ. ಈ ಆಲಯಕ್ಕೆ  ತಲುಪಲು ಮೆಟ್ಟಿಲುಗಳನ್ನು ಸಹ ನಿರ್ಮಿಸಲಾಗಿದೆ. ಹೀಗಾಗಿ ಹಂಪಿ ಒಂದು ಅತ್ಯದ್ಭುತವಾದ ಕಣ್ಮನ ಸೆಳೆಯುವ ಪ್ರೇಕ್ಷಣೀಯ ಐತಿಹಾಸಿಕ ತಾಣವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top