fbpx
ಮನೋರಂಜನೆ

ದರ್ಶನ್ ಚಿತ್ರವನ್ನು ನಿರ್ದೇಶಿಸಲು ದಾಖಲೆಯ ಸಂಭಾವನೆಯನ್ನು ಪಡೆದ ಪ್ರೇಮ್..?

ದರ್ಶನ್ ಚಿತ್ರವನ್ನು ನಿರ್ದೇಶಿಸಲು ದಾಖಲೆಯ ಸಂಭಾವನೆಯನ್ನು ಪಡೆದ ಪ್ರೇಮ್..?

 

 

15 ವರ್ಷಗಳ ಹಿಂದೆ ‘ಕರಿಯ’ ಸಿನಿಮಾದಲ್ಲಿ ಮೋದಿ ಮಾಡಿದ್ದ ಪ್ರೇಮ್-ದರ್ಶನ್ ಜೋಡಿ ಈಗ ಮತ್ತೆ ಒಂದಾಗುತ್ತಿದೆ. ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಕ್ಕೆ ಸ್ಟಾರ್ ಡೈರೆಕ್ಟರ್ ಪ್ರೇಮ್ ನಿರ್ದೇಶನ ಮಾಡುತ್ತಿರುವ ವಿಷಯ ಈಗ ಜಗಜ್ಜಾಹೀರಾಗಿದೆ. ಅಲ್ಲದೆ ಆ ಚಿತ್ರಕ್ಕೆ ಆಂಜನೇಯ ಎಂದು ಹೆಸರಾಡಲಾಗಿದೆ.

 

 

ನಿರ್ದೇಶಕ ಪ್ರೇಮ್ ಗಾಗಿ ತನ್ನ ನಿಯಮವನ್ನು ಮುರಿದು 85 ದಿನಗಳ ಕಾಲ್ ಶೀಟ್ ಅನ್ನು ದರ್ಶನ್ ನೀಡಿದ್ದಾರೆ. ದರ್ಶನ್ ಅವರು ಕುರುಕ್ಷೇತ್ರ ಮುಗಿದ ನಂತರ ಪಿ ಕುಮಾರ್ ನಿರ್ದೇಶನ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ ಆ ನಂತರವಷ್ಟೇ ಪ್ರೇಮ್ ಚಿತ್ರ ಸೆಟ್ಟೇರಲಿದೆ. ಈ ಚಿತ್ರ ಬಿಗ್ ಬಜೆಟ್ ಚಿತ್ರವಾಗಿರಲಿದ್ದು ಕನ್ನಡದ ಮಟ್ಟಿಗೆ ಅತ್ಯಂತ ಅದ್ಧೂರಿಯಾಗಿ ಮೂಡಿಬರಲಿದೆಯಂತೆ.

 

 

 

ಸದ್ಯ ವಿಲನ್ ಚಿತ್ರದ ಶೂಟಿಂಗ್ ಬ್ಯುಸಿಯಾಗಿರುವ ಪ್ರೇಮ್ ನಂತರ ಆಂಜನೇಯ ಚಿತ್ರದಲ್ಲಿ ದರ್ಶನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡಲು ಪ್ರೇಮ್ ಅವರು ಬರೋಬ್ಬರಿ ಎರಡು ಕೋಟಿ ಸಂಭಾವನೆಯನ್ನು ಪಡೆಯಲಿದ್ದಾರಂತೆ. ಈ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕನ್ನಡದ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದಾರೆ. ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top