fbpx
ಕಿರುತೆರೆ

ತನ್ನ ಮೇಲೆ ಟ್ರೋಲ್ ಮಾಡುತ್ತಿದ್ದವರಿಗೆ ಜಗನ್ ಹೇಳಿದ್ದೇನು..?

ತನ್ನ ಮೇಲೆ ಟ್ರೋಲ್ ಮಾಡುತ್ತಿದ್ದವರಿಗೆ ಜಗನ್ ಹೇಳಿದ್ದೇನು..?

 

 

ಬಿಗ್’ಬಾಸ್ ಕಾರ್ಯಕ್ರಮ ಶುರುವಾದಾಗಿನಿಂದಲೂ ಟ್ರೋಲ್ ಪೇಜ್ ಗಳಿಗೆ ಆಹಾರವಾಗುತ್ತಿದ್ದ ಜಗನ್ ಕಳೆದ ವಾರ ಸ್ಪರ್ಧೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಕೋಪಿಷ್ಠ, ಮುಂಗೋಪಿ, ಅಹಂಕಾರಿ ಎಂಬಂತೆ ಕಾಣಿಸುತ್ತಿದ್ದ ಜಗನ್ ಮನೆಯಿಂದ ಹೊರ ಬಂದಮೇಲೆ ತಮ್ಮ ಮೇಲೆ ಆಗಿರುವ ಟ್ರೋಲ್ ಗಳನ್ನೂ ನೋಡಿ ಹೇಗೆ ರಿಯಾಕ್ಟ್ ಮಾಡ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು.

 

 

ಖಾಸಗಿ ಸುದ್ದಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರೂಪಕರು ಟ್ರೋಲ್’ಗಳ ಬಗ್ಗೆ ಕೇಳಿದಾಗ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ ಜಗನ್ “ನನ್ನ ಹೆಸರು ಫೋಟೋ ಬಳಸಿ ಟ್ರೋಲ್ ಎಂಜಾಯ್ ಮಾಡಿದ್ದಕ್ಕೆ ನನಗೆ ನಿಜಕ್ಕೂ ಸಂತೋಷವಿದೆ. ನೆಗಿಟಿವ್ವೋ ಪಾಸಿಟಿವ್ವೋ ಟ್ರೋಲ್ ಮಾಡಿ ನನ್ನ ಹೆಸರನ್ನು ಚಾಲ್ತಿಯಲ್ಲಿಸಿದಕ್ಕೆ ಎಲ್ಲರಿಗೂ ತುಂಬಾ ಥ್ಯಾಂಕ್ಸ್.. ನನ್ನ ಬಗ್ಗೆ ನೆಗೆಟಿವ್ ಆಗಿ ಟ್ರೋಲ್ ಮಾಡಿದವರು ಎಲಿಮಿನೇಟ್ ಆದ ನಂತರ ಪಾಸಿಟಿವ್ ಆಗಿ ಪೋಸ್ಟ್ ಹಾಕಿರೋದನ್ನ ನೋಡಿ ಖುಷಿ ಕೊಟ್ಟಿದೆ ” ಎಂದು ಹೇಳಿದ್ದಾರೆ.

 

 

” ಫೇಸ್ಬುಕ್ ಇನ್ಸ್ಟಾಗ್ರಾಮ್ ಗಳಲ್ಲಿ ನನ್ನ ಕೋಪದ ವಿಷಯಕ್ಕೆ ಮತ್ತು ಆಶಿತಾ ಜೊತೆಯ ಸ್ನೇಹಕ್ಕೆ ನಾನು ಹೆಚ್ಚು ಟ್ರೋಲ್ ಆಗಿದನ್ನ ನೋಡಿದ್ದೀನಿ. ಆದರೆ ಎಪಿಸೋಡ್ ಗಳಲ್ಲಿ ದಿನದ 24 ಗಂಟೆಗಳಲ್ಲಿ ಕೇವಲ ಒಂದೂವರೆ ಗಂಟೆಯನ್ನಷ್ಟೇ ನಿಮಗೆ ತೋರಿಸೋದು ಬಿಗ್ ಬಾಸ್ ಮನೆಯಲ್ಲಿ ಸಂಪೂರ್ಣವಾಗಿ ಏನು ನಡೆದಿರುತ್ತದೆ ಎಂಬುದು ನಿಮಗೆ ಗೊತ್ತಿರೋದಿಲ್ಲ, ಎಪಿಸೋಡ್ ನೋಡಿ ಈ ವ್ಯಕ್ತಿ ಹೀಗೆ ಎಂದು ನಿರ್ಧಾರ ಮಾಡಬಾರದು ಎಂದು ಜಗನ್ ಹೇಳಿದ್ದಾರೆ.”

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top