fbpx
ಸಮಾಚಾರ

ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಡಿಯೋ ರಿಲೀಸ್

ಜಯಲಲಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಡಿಯೋ ರಿಲೀಸ್.

 

 

 

ತಮಿಳುನಾಡಿನ ಆರ್.ಕೆ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇನ್ನು ಕೇವಲ ಒಂದೇ ಒಂದು ದಿನ ಬಾಕಿ ಉಳಿದಿದ್ದು ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಬಣದಿಂದ ಜಯಲಲಿತಾ ಅವರು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ಬಿಡುಗಡೆಯಾಗಿದೆ..

 

 

ವಿಡಿಯೋದಲ್ಲಿ ಜಯಲಲಿತಾ ಅವರು ಆಸ್ಪತ್ರೆಯ ಬೆಡ್‌ ಮೇಲೆ ಕುಳಿತು ಒಂದು ಗ್ಲಾಸ್‌ ಜ್ಯೂಸ್‌ ಹೀರುತ್ತಾ ಟಿವಿ ನೋಡುತ್ತಿರುವ 20 ಸೆಕೆಂಡ್‌ನ ದೃಶ್ಯಾವಳಿಗಳು ಈ ವಿಡಿಯೋದಲ್ಲಿ ಕಂಡುಬಂದಿದೆ. ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಮರಣ ಹೊಂದಿದ್ದರು ಎಂದು ಮಾಡಿದ್ದ ಆರೋಪಕ್ಕೆ ಉತ್ತರವಾಗಿ ಜಯಲಲಿತಾ ಕೊನೆಯ ದಿನಗಳಲ್ಲಿ ಹೇಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಈ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

 

 

ನಾಳೆ ಆರ್‌ ಕೆ ನಗರ ಉಪ ಚುನಾವಣೆ ಇರುವುದರಿಂದ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ದಿನಕರನ್‌ ಬಣ ಈ ವಿಡಿಯೋ ಬಿಡುಗಡೆಯನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. 72 ದಿನ ಅಪೋಲೋ ಆಸ್ಪತ್ರೆಯಲ್ಲಿದ್ದ ಜಯಲಲಿತಾ ಅವರು 2016ರ ಡಿ.5ರಂದು ನಿಧನ ಹೊಂದಿದ್ದರು.

 

ಆಸ್ಪತ್ರೆಯಲ್ಲಿದ್ದ ಜಯಲಲಿತಾ ವಿಡಿಯೋವನ್ನು ಇಲ್ಲಿ ನೋಡಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top