fbpx
News

ಪತ್ರಕರ್ತನ ವಿವಾದಿತ ಟ್ವೀಟ್‍ಗೆ ಮುಸಲ್ಮಾನರ ಆಕ್ರೋಶ

ಪತ್ರಕರ್ತನ ವಿವಾದಿತ ಟ್ವೀಟ್‍ಗೆ ಮುಸಲ್ಮಾನರ ಆಕ್ರೋಶ

ಅಭಿವ್ಯಕ್ತಿ ಸ್ವಾತಂತ್ರದ ಹರಣ ಎಂದ ಕೇಂದ್ರ ಸಚಿವ ಕಿರಣ್

 

ಸೆಕ್ಸೀ ದುರ್ಗಾ ಚಿತ್ರಕ್ಕೆ ಸಂಬಂಧಿಸಿದಂತೆ, ಪ್ರವಾದಿ ಮೊಹಮದ್ ಅವರ ಪತ್ನಿ, ಪುತ್ರಿ ಹಾಗೂ ಕ್ರಿಸ್ತರ ತಾಯಿ ಮೇರಿ ಕುರಿತು ವಿವಾದಿತ ಟ್ವೀಟ್ ಮಾಡಿ ಮುಸಲ್ಮಾನರ ಕೆಂಗಣ್ಣಿಗೆ ಗುರಿಯಾಗಿದ್ದ ಆಜ್‍ತಕ್ ಸುದ್ದಿ ವಾಹಿನಿಯ ಪತ್ರಕರ್ತ ರೋಹಿತ್ ಸರ್ದಾನ ಬಂಧನಕ್ಕೆ ದೇಶಾದ್ಯಂತ ಕೂಗು ಕೇಳಿಬಂದದ್ದರ ಬೆನ್ನಲ್ಲೆ, ಹಲವಾರು ಪೊಲೀಸ್ ಠಾಣೆಗಳಲ್ಲಿ ಸರ್ದಾನ ವಿರುದ್ಧ ದೂರು ದಾಖಲಾಗಿದೆ.

 

ಸೆಕ್ಷನ್ 295(ಎ) ಅಡಿಯಲ್ಲಿ ಹೈದ್ರಾಬಾದ್‍ನ ದಬೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅದಕ್ಕೆ ಪತ್ರಕರ್ತ ರೋಹಿತ್ ಸರ್ದಾನ ಪ್ರತಿಕ್ರಿಯೆಯನ್ನೂ ನೀಡಿದ್ದು, ‘ತಾನು ಮಾಡಿದ ಟ್ವೀಟ್ ಹಿಂದೆ ಯಾವ ಧರ್ಮದವರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ನನಗೂ ಹಲವು ಬೆದರಿಕೆ ಕರೆಗಳು ಬಂದಿದ್ದು, ಈ ಕುರಿತಾಗಿ ಉತ್ತರ ಪ್ರದೇಶದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೇನೆ ಎಂದು ಹೇಳಿದ್ದಾರೆ.

 

ಈ ಕುರಿತಾಗಿ ಕೇಂದ್ರ ಸಚಿವ ಕಿರಣ್ ರಿಜಿಜು ಟ್ವಿಟರ್ನಲ್ಲಿ ಪತ್ರಕರ್ತ ರೋಹಿತ್‍ಗೆ ಬೆಂಬಲ ವ್ಯಕ್ತಪಡಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರದ ಹರಣ ಸಲ್ಲದು ಎಂದಿದ್ದಾರೆ. ಒಬ್ಬ ವ್ಯಕ್ತಿಗೆ, ಅವನ ವಿಚಾರಧಾರೆಗೆ ಬೆದರಿಕೆ ಒಡ್ಡುವುದು ಸರಿ ಅಲ್ಲ ಎಂದು ಈ ವೇಳೆ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top