fbpx
ಭವಿಷ್ಯ

ಡಿಸೆಂಬರ್ 20 : ನಿತ್ಯಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ೨೦ ಡಿಸೆಂಬರ್ ೨೦೧೭
ಸೂರ್ಯೋದಯ : ೦೬:೪೦
ಸೂರ್ಯಾಸ್ತ : ೧೭:೫೪
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಪುಷ್ಯ
ಪಕ್ಷ : ಶುಕ್ಲ ಪಕ್ಷ
ತಿಥಿ : ಬಿದಿಗೆ
ನಕ್ಷತ್ರ : ಪೂರ್ವ ಆಷಾಢ
ಯೋಗ : ಧ್ರುವ
ಪ್ರಥಮ ಕರಣ : ಕೌಲವ
ಸೂರ್ಯ ರಾಶಿ : ಧನು
ಅಭಿಜಿತ್ ಮುಹುರ್ತ : ಯಾವುದೂ ಇಲ್ಲ
ಅಮೃತಕಾಲ : ೦೭:೫೦ – ೦೯:೩೯

ರಾಹು ಕಾಲ: ೧೨:೧೭ – ೧೩:೪೧
ಗುಳಿಕ ಕಾಲ: ೧೦:೫೩ – ೧೨:೧೭
ಯಮಗಂಡ: ೦೮:೦೪ – ೦೯:೨೮

 

ಮೇಷ (Mesha)

ಸಮತೋಲನ ಮನಸ್ಥಿತಿಯಿಂದಾಗಿ ಸಮಯೋಚಿತ ನಿರ್ಧಾರ ತಳೆಯುವುದರಿಂದ ಈದಿನ ಮಹತ್ತರವಾದ ಗೆಲುವನ್ನು ಕಾಣುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ಗುರುಹಿರಿಯರ ಆಶೀರ್ವಾದ ಪಡೆಯಿರಿ.

 

ವೃಷಭ (Vrushabha)

ಕೆಲವು ವಿಷಯಗಳಿಗೆ ನಿಷ್ಠುರವಾಗಿಯೇ ಮಾತನಾಡಬೇಕಿದೆ. ಯಾಕೆಂದರೆ ಹಲಸಿನಹಣ್ಣು ಹೆಚ್ಚಲು ಚೂಪಾದ ಸೂಜಿಯು ಉಪಯೋಗಕ್ಕೆ ಬರುವುದಿಲ್ಲ. ಅದಕ್ಕೆ ಹರಿತವಾದ ಕತ್ತಿಯೇ ಬೇಕು.

 

ಮಿಥುನ (Mithuna)

ಯಾವುದೋ ಸಹಜವಾದ ಮಾತು ತಪ್ಪು ಅಭಿಪ್ರಾಯ ಮೂಡಿಸುವ ಸಾಧ್ಯತೆ ಇರುವುದು. ಹಾಗಾಗಿ ಭಗವಂತ ಈದಿನ ಆಡುವ ಮಾತು ಪರರನ್ನು ನೋಯಿಸದಿರಲಿ ಎಂದು ಪ್ರಾರ್ಥಿಸಿ. ಸಾಧ್ಯವಾದ ಮಟ್ಟಿಗೆ ಸಾಧಕ-ಬಾಧಕಗಳನ್ನು ಅರಿತು ಮಾತನಾಡಿ.

 

ಕರ್ಕ (Karka)

ನಿಮಗೆ ನಿಮ್ಮದೇ ಆದ ಸ್ನೇಹಿತರ ಬಳಗವಿದೆ. ಅವರೆಲ್ಲರೂ ನಿಮ್ಮನ್ನು ಅನುಮಾನಿಸದಂತೆ ನೋಡಿಕೊಳ್ಳಿರಿ. ಅವರಿಂದ ನಿಮ್ಮ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಹಸ್ತ ಸಿಗುತ್ತದೆ. ನಿಮ್ಮ ಬದುಕಿನ ವಿಚಾರಗಳು ಯಾವಾಗಲೂ ಶಿಸ್ತನ್ನು ಬಯಸುತ್ತದೆ.

 

ಸಿಂಹ (Simha)

ಈದಿನ ಅತ್ಯಂತ ಹರ್ಷದ ದಿನ. ನಿಮ್ಮ ಹಾಸ್ಯ ಮನೋಭಾವದಿಂದ ಜನರನ್ನು ಆಕರ್ಷಿಸುವಿರಿ. ಇದರಿಂದ ನಿಮಗೂ ಸಂತಸವಾಗುವುದು. ಹಣಕಾಸು ಒದಗಿ ಬರುವುದು. ಉತ್ತಮ ಆರೋಗ್ಯ ನಿಮ್ಮದಾಗುವುದು.

 

ಕನ್ಯಾರಾಶಿ (Kanya)

ನಿಮ್ಮ ಪ್ರಯತ್ನಗಳನ್ನು ಪ್ರಾಮಾಣಿಕವಾಗಿಯೇ ಮಾಡುತ್ತಿದ್ದೀರಿ. ಆದರೆ ಗ್ರಹಗತಿಗಳು ನಿಮ್ಮ ವಿರುದ್ಧವಾಗಿರುವುದರಿಂದ ಒಂದು ರೀತಿಯ ಸಮಾಧಾನಕರ ಮನೋಭಾವ ಪಡೆದು ಹರ್ಷಿಸಲು ಕಾಲ ಸಾಧ್ಯ ಮಾಡಿಕೊಡುತ್ತಿಲ್ಲ. ಇನ್ನು ಸ್ವಲ್ಪ ದಿನ ಕಾಯದೆ ವಿಧಿ ಇಲ್ಲ.

 

ತುಲಾ (Tula)

ಎಲ್ಲ ದಿನಗಳು ವಸಂತ ಕಾಲವಾಗುವ ಸಾಧ್ಯತೆ ಇರುವುದಿಲ್ಲ. ಈದಿನ ಹಣಕಾಸಿನ ಮುಗ್ಗಟ್ಟನ್ನು ತೀವ್ರವಾಗಿ ಅನುಭವಿಸುವಿರಿ ಮತ್ತು ಇದೇ ದಿನ ನೀವು ಸಾಲ ಪಡೆದವರಿಂದ ನೋಟೀಸು ಜಾರಿ ಆಗುವ ಸಂದರ್ಭವಿರುತ್ತದೆ.

 

ವೃಶ್ಚಿಕ (Vrushchika)

ಯಶಸ್ಸಿನ ಏಣಿ ಏರಲು ಹೊರಟಿರುವ ನಿಮ್ಮ ನಿರ್ಧಾರ ಸರಿಯಾಗಿದೆ. ಅದಕ್ಕಾಗಿ ನಿಮ್ಮ ಮಾತನ್ನು ಕೇಳುವವರ ಗುಂಪನ್ನು ಕಟ್ಟಿ ಹೋರಾಟಕ್ಕೆ ಇಳಿಯುವಿರಿ. ಇದರಿಂದ ಯಶಸ್ಸು ನಿಮ್ಮ ಪಾಲಾಗುವುದು.

 

ಧನು ರಾಶಿ (Dhanu)

ವಾಯುಪ್ರಕೋಪದಿಂದ ತೊಂದರೆ ಮತ್ತು ಮಂಡಿನೋವಿಗೆ ಸಂಬಂಧಪಟ್ಟಂತೆ ಈದಿನ ಬಳಲುವಿರಿ. ಶನಿಯ ಆರಾಧನೆ ಮಾಡುವುದು ಒಳ್ಳೆಯದು. ವಿಷ್ಣು ದೇವಾಲಯಕ್ಕೆ ತುಳಸಿ ಮಾಲೆಯನ್ನು ನೀಡಿರಿ.

 

ಮಕರ (Makara)

ಕುಟುಂಬದ ಮಿತ್ರವರ್ಗದವರ ಅನಿರೀಕ್ಷಿತ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ. ಮನಸ್ಸಿನಲ್ಲಿದ್ದ ದುಗುಡಗಳು ದುಃಖದುಮ್ಮಾನಗಳು ಹೊರಬಂದು ಮನಸ್ಸಿಗೆ ಹಿತ ಎನಿಸುವುದು.

 

ಕುಂಭರಾಶಿ (Kumbha)

ಈದಿನ ನಿಮ್ಮ ಮಾತಿನ ವೈಖರಿಯನ್ನು ಗಮನಿಸಿ. ನಿಮ್ಮ ಕಾರ್ಯ ಯೋಜನೆಗಾಗಿ ಹೆಚ್ಚಿನ ಧನ ಸಹಾಯ ಹರಿದು ಬರುವುದು. ದಿನ ದಿನಕ್ಕೆ ನಿಮ್ಮ ಜವಾಬ್ದಾರಿಯೂ ಹೆಚ್ಚುತ್ತಾ ಹೋಗುವುದರಿಂದ ನಿಮ್ಮ ಘನತೆಯನ್ನು ಕಾಪಾಡಿಕೊಳ್ಳಿರಿ.

 

ಮೀನರಾಶಿ (Meena)

ಈದಿನ ನಿಮ್ಮ ಮಾತಿನ ವೈಖರಿಯನ್ನು ಗಮನಿಸಿ. ನಿಮ್ಮ ಕಾರ್ಯ ಯೋಜನೆಗಾಗಿ ಹೆಚ್ಚಿನ ಧನ ಸಹಾಯ ಹರಿದು ಬರುವುದು. ದಿನ ದಿನಕ್ಕೆ ನಿಮ್ಮ ಜವಾಬ್ದಾರಿಯೂ ಹೆಚ್ಚುತ್ತಾ ಹೋಗುವುದರಿಂದ ನಿಮ್ಮ ಘನತೆಯನ್ನು ಕಾಪಾಡಿಕೊಳ್ಳಿರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top