fbpx
ಮನೋರಂಜನೆ

ಬೆಂಗಳೂರಿಗೆ ಸನ್ನಿ ಕುಣಿಯೋಕೆ ಬರಲ್ವಂತೆ ! ಆಕೆಯ ವಿರುದ್ಧ ಪ್ರತಿಭಟನೆ ಮಾಡಿರೋರಿಗೆ ಏನು ಹೇಳಿದ್ರು ಗೊತ್ತಾ ?

 

ಬೆಂಗಳೂರಿನಲ್ಲಿ ಡಿಸೆಂಬರ್ 31 ರ ರಾತ್ರಿ ಹೊಸ ವರ್ಷದ ಅಂಗವಾಗಿ ನಡೆಯಬೇಕಿದ್ದ ಸನ್ನಿ ನೈಟ್ ಕಾರ್ಯಕ್ರಮಕ್ಕೆ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ‌ ಹೊಸ ವರ್ಷಾಚರಣೆಗೆ ಈ ಬಾರಿ ಸನ್ನಿ ಲಿಯೋನ್ ಅವ್ರಿಗೆ ಕೋಟಿ ಕೋಟಿ ದುಡ್ಡು ಕೊಟ್ಟು ಆಯೋಜಕರು ಬುಕ್ ಮಾಡಿಕೊಂಡಿದ್ದರು .

ಆದರೆ ಇತ್ತೀಚಿಗೆ ಪೊರಕೆ ಹಿಡಿದು ಬಂದು ಕನ್ನಡ ಪರ ಸಂಘಟನೆಗಳು ಈ ಕಾರ್ಯಕ್ರಮವನ್ನು ರದ್ದು ಗೊಳಿಸುವಂತೆ ಕೋರಿದ್ದವು ಆದರೆ ಭಾರತೀಯ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುವುದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ತಡೆ ಹಿಡಿಯಲಾಗಿತ್ತು , ಅಶ್ಲೀಲಾ ನೃತ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಅರ್ಜಿ ಸಲ್ಲಿಸಿ ಆಯೋಜಕರು ಕೋರ್ಟ್ ಮೆಟ್ಟಿಲು ಏರಿದ್ದರು ಆಯೋಜಕರು , ಈಗಾಗಲೇ ಟಿಕೆಟ್ ಗಳು ಲಕ್ಷಾಂತರ ರುಪಾಯಿಗೆ ಮಾರಾಟವಾಗಿದ್ದು ಆಯೋಜಕರು ಪೇಚಾಟಕ್ಕೆ ಸಿಲುಕಿದ್ದಾರೆ .

ಗೃಹ ಸಚಿವ ರಾಮಲಿಂಗಾರೆಡ್ಡಿ ಇದಕ್ಕೂ ಮೊದಲು ಈ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು , ಅಷ್ಟೇ ಅಲ್ಲದೆ ಭದ್ರತಾ ದೃಷ್ಟಿಯಿಂದ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅನುಮತಿ ನಿರಾಕರಿಸಿದ್ದರು.

 

 

ಹೈ ಕೋರ್ಟ್ ತೀರ್ಪು ಬರುವ ಮೊದಲೇ ಸನ್ನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ

 

ಹೊಸ ವರ್ಷಾಚರಣೆ ವೇಳೆ ಜನರ ನಿಯಂತ್ರಣ ಹಾಗೂಭದ್ರತಾ ದೃಷ್ಟಿಯಿಂದ ಪೊಲೀಸರು ನನ್ನ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ. ನನಗೆ ನನ್ನ ಮತ್ತು ನನ್ನ ತಂಡದ ಭದ್ರತೆಗಿಂತ ಸಾರ್ವಜನಿಕರ ಭದ್ರತೆ ಮತ್ತು ಸುರಕ್ಷತೆ ಮುಖ್ಯವಾಗಿರುವ ಕಾರಣ ಹೊಸ ವರ್ಷಾಚರಣೆ ಕಾರ್ಯಕ್ರಮ ನೀಡಲು ನಾನು ಬೆಂಗಳೂರಿಗೆ ಬರುತ್ತಿಲ್ಲವೆಂದು ಟ್ವೀಟ್ ಮಾಡಿದ್ದಾರೆ.

 

 

ಅಷ್ಟೇ ಅಲ್ಲದೆ ಯಾರ್ಯಾರು ಆಕೆಯ ವಿರುದ್ಧ ಪ್ರತಿಭಟನೆ ಮಾಡಿದ್ದರೋ ಅವರಿಗೆ ಒಂದು ಸಂದೇಶ ಕೂಡ ಕೊಟ್ಟಿದ್ದಾರೆ ” ನನ್ನ ವಿರುದ್ಧ ಯಾರ್ಯಾರು ಪ್ರತಿಭಟನೆ ಮಾಡಿದ್ದಿರೋ ಒಂದು ವಿಷಯ ನೆನಪಿಟ್ಟುಕೊಳ್ಳಿ ನಿಮ್ಮ ಧ್ವನಿ ಹಾಗು ನಿಮ್ಮ ಆಯ್ಕೆ ಮಾಡುವ ಅಧಿಕಾರ ಬೇರೆಯವರಿಗೆ ಕೊಡಬೇಡಿ , ನಿಮ್ಮ ಧ್ವನಿ ಹಾಗು ನಿಮ್ಮ ಆಯ್ಕೆ ನಿಮ್ಮದೇ ಆಗಿರಲಿ , ಇಂದಿನ ಯುವಕರು ಹೊಸ ಭಾರತದ ನಿರ್ಮಾತೃಗಳು , ಹಮ್ಮೆಯಿಂದ ಹಾಗು ಒಗ್ಗಟ್ಟಿನಿಂದ ಇರಿ -ನಿಮ್ಮ ಪ್ರೀತಿಯ ಸನ್ನಿ ”

ಹೀಗೆ ಬರೆದುಕೊಂಡಿದ್ದಾರೆ ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top