fbpx
ಬಿಗ್ ಬಾಸ್

ಚಂದನ್ ಶೆಟ್ಟಿಯ ಟಕಿಲ ಹಾಡಿನ ಕಾರ್ಟೂನ್ ವರ್ಷನ್ ನೋಡುದ್ರೆ ಬಿದ್ದು ಬಿದ್ದು ನಗ್ತೀರಾ!

ಚಂದನ್ ಶೆಟ್ಟಿಯ ಟಕಿಲ ಹಾಡಿನ ಕಾರ್ಟೂನ್ ವರ್ಷನ್ ನೋಡುದ್ರೆ ಬಿದ್ದು ಬಿದ್ದು ನಗ್ತೀರಾ!

 

 

ಚಂದನ್ ಶೆಟ್ಟಿಯವರ ‘ಟಕಿಲ’ ಪಾರ್ಟಿ ಸಾಂಗ್ ಬಿಡುಗಡೆಗೊಂಡು ಹಿಂದಿನ ಎಲ್ಲಾ ಯೂಟ್ಯೂಬ್ ದಾಖಲೆಗಳನ್ನೆಲ್ಲಾ ಚಿಂದಿ ಉಡಾಯಿಸಿ ಸೂಪರ್ ಹಿಟ್ ಆಗಿದೆ.. ಟಕಿಲಾ ಸಾಂಗ್ ರಿಲೀಸ್ ಆಗುತ್ತಿದ್ದಂತೆ ಯೂಟ್ಯೂಬ್ ಸೇರಿ ಅನೇಕ ಸೋಷಿಯಲ್ ಮೀಡಿಯಾಗಳಲ್ಲಿ ವಿವಿಧ ರೀತಿಯಲ್ಲಿ ಹಾಡನ್ನು ಎಡಿಟ್ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಹೀಗೆ ಅಪ್ಲೋಡ್ ಮಾಡಿರುವ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದ್ದು ನೋಡುತ್ತಿದ್ದರೆ ಮುಖದಲ್ಲಿ ನಗುತರಿಸುತ್ತದೆ.

 

 

ಟಕಿಲಾ ಹಾಡಿನ ಕಾರ್ಟೂನ್ ವರ್ಷನ್ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದ್ದು ನೋಡಲು ಸಕತ್ ಮಜವಾಗಿದೆ. ಟಕಿಲಾ ಕಾರ್ಟೂನ್ ವರ್ಷನ್ ಹಾಡುಗಳನ್ನು ಇಲ್ಲಿ ನೋಡಿ.

 

 

ಈಗಾಗಲೇ ಸೂಪರ್ ಹಿಟ್ ಹಾಗಿರುವ ಟಕಿಲಾ ಹಾಡು ಬಿಡುಗಡೆಗೊಂಡ 24 ಗಂಟೆಯಲ್ಲಿ 14 ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಣೆಗೊಳ್ಳುವ ಮೂಲಕ ಯಾವ ಸ್ಯಾಂಡಲ್ ವುಡ್ ಸ್ಟಾರ್ ನಟನ ಹಾಡುಗಳು ಮಾಡದ ಸಾಧನೆಯನ್ನು ಮಾಡಿದ ಕನ್ನಡದ ಮೊದಲ ಹಾಡು ಎಂಬ ಕೀರ್ತಿಗೆ ಪಾತ್ರವಾಗಿದೆ. ರಿಲೀಸ್ ಆದ 2 ದಿನದಲ್ಲಿ 2 ಮಿಲಿಯನ್ ವೀವ್ಸ್ ಪಡೆದುಕೊಳ್ಳಲು ಸ್ಟಾರ್ ನಟರ ಹಾಡುಗಳೇ ವಿಫಲಗುತ್ತಿರುವ ಈ ಸಮಯದಲ್ಲಿ ಟಕಿಲಾ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ ಎಂದರೆ ತಪ್ಪಾಗುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top