fbpx
News

ರೋಗಿಗಳಿಗಿಲ್ಲಿ ಒದೆಯೇ ಔಷಧಿ! ಮೈತುಂಬಾ ಗೂಸಾ ತಿಂದ್ರೂ ಮೋಸವಿಲ್ಲ! ಆರೋಗ್ಯವೇ ಭಾಗ್ಯ ಅನ್ನೋರೆಲ್ಲ ಇದನ್ನೋದಲೇಬೇಕು

ರೋಗಿಗಳಿಗಿಲ್ಲಿ ಒದೆಯೇ ಔಷಧಿ!

ಮೈತುಂಬಾ ಗೂಸಾ ತಿಂದ್ರೂ ಮೋಸವಿಲ್ಲ!

ಆರೋಗ್ಯವೇ ಭಾಗ್ಯ ಅನ್ನೋರೆಲ್ಲ ಇದನ್ನೋದಲೇಬೇಕು!

 

 

 

ತಟ್ಟು ಚಪ್ಪಾಳೆ ದೊಡ್ಡ ಮಗೂವೇ… ಎನ್ನುತ್ತಾ ಹೊಂಗ್ಚಿಕ್ಸಿಯೋ ಬಡಿಯುತ್ತಾನೆ. ಕೆಲವರಿಗೆ ಇವನು ತಟ್ಟಿದರೆ ಉಳಿದವರಿಗೆ ಈತನ ಶಿಷ್ಯರು ಮೊಟಕುತ್ತಾರೆ. ಇನ್ನು ಕೆಲವರಿಗೆ ಸ್ವಯಂ ಹೇಗೆ ತಟ್ಟಿಕೊಳ್ಳಬೇಕೆಂದು ಹೇಳಿಕೊಡುತ್ತಾನೆ. ಕೆಲವರಿಗೆ ಕೈ ಕಾಲುಗಳನ್ನು ಹಿಗ್ಗಿಸಿ, ಬಾಗಿಸಿ ಬಡಿಯುತ್ತಾನೆ!

 

 

ವಡೆ ತಿನ್ನೋಕೆ ಜನ ಬರೋದು ಗೊತ್ತು. ಆದರೆ ಒದೆ ತಿನ್ನೋಕೂ ಜನ ಬರ್ತಾರಾ?

ಹೌದೂ ರೀ… ಸರಿಯಾಗಿ ಗೂಸ ತಿಂದರೆ ರಕ್ತದೊತ್ತಡ, ಮಧುಮೇಹ , ಮೂತ್ರಪಿಂಡದ ಸಮಸ್ಯೆ, ಉಬ್ಬಸ ದಮ್ಮು, ಕೆಮ್ಮುಗಳಿಂದ ಆರಂಭಿಸಿ, ಕ್ಯಾನ್ಸರ್‍ವರೆಗೆ ಅನೇಕ ಕಾಯಿಲೆಗಳು ಗುಣವಾಗುವುದಂತೆ.

ಒಂದುವೇಳೆ ವಾಸಿಯಾಗಲಿಲ್ಲವೆಂದರೇ?

ಇನ್ನಷ್ಟು ಬಿಗಿಯುತ್ತಾನೆ! ಮೈ-ಕೈ, ಬೆನ್ನು, ತೊಡೆ ಎಲ್ಲಾ ಕೆಂಪಾಗುವಂತೆ ಥಳಿಸಿತ್ತಾನೆ.

 

 

ಹೆಣ್ಣು ಮಕ್ಕಳು ಬಂದರೆ? ಅವರಿಗೂ ಕುಂಡೆಗೆ ನಾಲ್ಕು ಬಿಡುತ್ತಾನೆ! ಇನ್ನೂ ಸಮಸ್ಯೆ ಅಂದರೆ ಇನ್ನೆರಡು ಹೆಚ್ಚಿಗೆ ಒದೆ ಬೀಳಲಿದೆ!

ಒದೆ ತಿನ್ನಲಿಕ್ಕಾಗದೆ ಕಾಯಿಲೆ ವಾಸಿಯಾಗಿದೆ ಎಂದು ರೋಗಿಗಳು ಹೇಳುತ್ತಿರಬಹುದೇ?!

ಗೊತ್ತಿಲ್ಲ. ಒದೆ ತಿಂದ ಅನೇಕರು ಗುಣವಾಗಿರುವುದಾಗಿ ಹೇಳುತ್ತಾರೆ.

ಕಾಯಿಲೆಯನ್ನು ಹೊಡೆದೋಡಿಸುವುದೆಂದರೆ ಇದೇ ಇರಬೇಕು! ?ತಟ್ಟೋ ಥೆರಪಿ? ಅಲಿಯಾಸ್ ಸ್ಲಾಪಿಂಗ್ ತೆರಪಿ ಬಯಸುವವರು ನೆರೆಯ ಚೀನಾಕ್ಕೆ ತೆರಳಬೇಕು.

 

 

ಚಿಕಿತ್ಸೆ ಏನು ಪುಗ್ಸಟ್ಟೆನಾ…?

ದೇವರಾಣೆಗ್ಲೂ ಇಲ್ಲ! ಕಾಯಿಲೆ ನೋಡಿ, ರೋಗಿ ನೋಡಿ, ಅವನ ಶುಲ್ಕ ಭರಿಸುವ ತಾಕತ್ತು ನೋಡಿ ಸರಿಯಾಗಿ ಎರಡು ಬಿಟ್ಟು ಹಣ ಪೀಕುತ್ತಾನೆ.

ಇದೆಲ್ಲಾ ವೈಜ್ಞಾನಿಕವಾಗಿ ನಿಜವಾ?

ಈ ಪ್ರಶ್ನೆಯನ್ನು ಬೆಂಗಳೂರಿನ ಆದಿಶಕ್ತಿ ಮಂತ್ರಾಲಯದವರನ್ನು ಕೇಳಬೇಕು! ಕಾಟನ್ ಪೇಟೆ ಪೊಲೀಸ್ ಸ್ಟೇಷನ್ ಎದುರಿಗಿರುವ ಎಣ್ಣೆ ಅಂಗಡಿ ಯಲ್ಲಿ ತಾಯ್ತ ಕಟ್ಟಿಕೊಂಡರೆ ಕಾಯಿಲೆ ವಾಸಿಯಾಗುತ್ತದೆ ಅಂತಿರುವಾಗ ಹಿಡಿದು ಬಡಿದರೆ ಕಾಯಿಲೆ ಗುಣವಾಗದೇ?!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top