fbpx
ಮನೋರಂಜನೆ

ನನ್ನ ಕಟೌಟ್’ಗೆ ಹಾಲಿನ ಅಭಿಷೇಕ ಬೇಡ ಅದನ್ನೇ ಹಸಿದ ಮಕ್ಕಳಿಗೆ ನೀಡಿ ಎಂದ ಅಪ್ಪು.

ನನ್ನ ಕಟೌಟ್’ಗೆ ಹಾಲಿನ ಅಭಿಷೇಕ ಬೇಡ ಅದನ್ನೇ ಹಸಿದ ಮಕ್ಕಳಿಗೆ ನೀಡಿ ಎಂದ ಅಪ್ಪು.

 

 

ಕನ್ನಡದ ಪವರ್ ಸ್ಟಾರ್ ಪುನೀತ್ ಅವರು ಉತ್ತಮ ನಟ ಮಾತ್ರವಲ್ಲದೆ ಒಳ್ಳೆಯ ಮನಸ್ಸಿನ ವ್ಯಕ್ತಿ ಕೂಡ ಎಂಬ ವಿಷಯ ಎಲ್ಲರಿಗೂ ಗೊತ್ತು.. ಮತ್ತೊಮ್ಮೆ ಎಲ್ಲರು ಮೆಚ್ಚುವಂತಹ ಸೂಚನೆಯನ್ನು ತಮ್ಮ ಅಭಿಮಾನಿಗಳಿಗೆ ಅಪ್ಪು ನೀಡಿದ್ದಾರೆ. ಹೌದು ರಾಜ್ಯಾದಂತ ಇಂದು ತೆರೆಕಾಣುತ್ತಿರುವ ಅಂಜನೀಪುತ್ರ ಚಿತ್ರದ ಕಟೌಟ್ ಗಳಿಗೆ ಹಾಲಿ ಅಭಿಷೇಕ ಮಾಡಬೇಡಿ ಎಂದು ತಮ್ಮ ಅಭಿಮಾನಿಗಳಲ್ಲಿ ಪುನೀತ್ ರಾಜಕುಮಾರ್ ಮನವಿ ಮಾಡಿಕೊಂಡಿದ್ದಾರೆ.

 

 

ಬಹುನಿರೀಕ್ಷಿತ ಅಂಜನೀಪುತ್ರ ಸಿನಿಮಾ ಇಂದು ತೆರೆ ಕಾಣುತ್ತಿದು ಈ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಪುನೀತ್ ರಾಜಕುಮಾರ್ “ನಾಳೆ ಬಿಡುಗಡೆ ಆಗುತ್ತಿವ ನನ್ನ ಚಿತ್ರ #ಅಂಜನಿಪುತ್ರ ಚಿತ್ರಕ್ಕೆ ದಯವಿಟ್ಟು #ಕಟ್_ಔಟ್ ಗಳಮೇಲೆ ಹಾಲು ಹಾರ ಹಾಕಿ ದುರುಪಯೋಗ ಮಾಡುವಬದಲು #ಹಸಿದ ಮಕ್ಕಳಿಗೆ ಅಥವಾ ವೃದ್ಧರಿಗೆ ಕೊಡಿ 🙏🏼🙂  ಸಿನಿಮಾ ಇಷ್ಟ ಆದ್ರೆ ನಿಮ್ಮ ಸ್ನೇಹಿತ ಅಥವಾ ನಿಮ್ಮ ಅಪ್ಪ ಅಮ್ಮ ಜೋತೆ ಇರೋ ಪೋಟೋ ಕಳಿಸಿ ,ನನಗೆ ಅದೆ ಖುಷಿ ಕೊಡುತ್ತದೆ “ ಎಂದು ಹೇಳಿದ್ದಾರೆ.

 

 

ಅಂಜನೀಪುತ್ರ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪುನೀತ್ ನಾಯಕಿಯಾಗಿದ್ದಾರೆ. ಭಜರಂಗಿ ಖ್ಯಾತಿಯ ಎ.ಹರ್ಷ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಎಂ.ಎನ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ…ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಮತ್ತು ಸ್ವಾಮಿ ಅವರ ಛಾಯಾಗ್ರಹಣವಿದೆ.ಇದು ತಮಿಳಿನ ತಮಿಳಿನ “ಪೂಜೈ’ ಚಿತ್ರದ ರೀಮೇಕ್‌ ಆಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಚಿತ್ರತಂಡ ಹೇಳುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top