fbpx
ದೇವರು

ದೇವಾಲಯಗಳಿಗೆ ಯಾಕೆ ಹೋಗಬೇಕು ಅಂತ ಯಾರಾದ್ರೂ ಪ್ರಶ್ನೆ ಮಾಡಿದ್ರೆ ಮುಲಾಜಿಲ್ಲದೆ ಈ ಉತ್ತರ ಕೊಡಿ

ದೇವಾಲಯಗಳಿಗೆ ಯಾಕೆ ಹೋಗಬೇಕು ಅಂತ ಯಾರಾದ್ರೂ ಪ್ರಶ್ನೆ ಮಾಡಿದ್ರೆ ಮುಲಾಜಿಲ್ಲದೆ ಈ ಉತ್ತರ ಕೊಡಿ!

ದೇವಾಲಯಗಳಿಗೆ ಯಾಕೆ ಹೋಗಬೇಕು? ಎಂದು ಯಾರಾದರೂ ಪ್ರಶ್ನಿಸಿದರೆ, ಈ ಉತ್ತರ ನೀಡಿ!

 

 

ಅನೇಕ ಐತಿಹಾಸಿಕ ಪುರಾತನವಾದ ದೇವಾಲಯಗಳು ನಮ್ಮ ದೇಶದಲ್ಲಷ್ಟೇ ಅಲ್ಲ ಇನ್ನೂ ಅನೇಕ ಪ್ರದೇಶಗಳಲ್ಲಿ ಇವೆ. ಅದೆಷ್ಟೋ ಪುರಾತನ ಕಾಲದಿಂದಲೂ ಹಿಂದೂಗಳು ದೇವಾಲಯಗಳಿಗೆ ಹೋಗುವುದು, ಪೂಜೆ ಮಾಡುವುದನ್ನು ಮಾಡುತ್ತಿದ್ದಾರೆ. ಇನ್ನೂ ಉತ್ಸವಗಳು ಬಂದಾಗ ಭಕ್ತರ ಉತ್ಸಾಹ ಹೆಚ್ಚಾಗುತ್ತದೆ. ಯಾವಾಗ ದೇವರನ್ನು ದರ್ಶನ ಮಾಡಿಕೊಂಡು ಆಶೀರ್ವಾದ ಪಡೆಯುತ್ತೇವೋ ಎಂಬಂತೆ ಎದುರು ನೋಡುತ್ತಿರುತ್ತಾರೆ.

 

 

ಇನ್ನೂ ಹಬ್ಬಗಳಂತು ಬಂದರೆ ದೇವಾಲಯಗಳಲ್ಲಿ ಇರುವ ಜನಸಂದಣಿ ತುಂಬಾ ಹೆಚ್ಚಾಗಿಯೇ ಇರುತ್ತದೆ . ಇಷ್ಟಕ್ಕೂ ದೇವಾಲಯಗಳಿಗೆ ಯಾಕೆ ಹೋಗುತ್ತಾರೆ ಗೊತ್ತಾ ? ನಮ್ಮ ಮನೆಯಲ್ಲಿಯೇ ದೇವರು ಕೂಡ ಇರುತ್ತಾರೆ.
ದೇವಾಲಯಗಳಲ್ಲೂ ಕೂಡ ಇರುತ್ತಾರೆ.. ಅಂತಹ ಸಮಯದಲ್ಲಿ ದೇವಾಲಯಗಳಿಗೆ ಯಾಕೆ ಹೋಗಬೇಕು ? ದೇವರನ್ನು ಪೂಜಿಸಬೇಕು ? ಮನೆಯಲ್ಲೇ ಯಾಕೆ ಪೂಜಿಸಬಾರದು ? ಇವಕ್ಕೆಲ್ಲ ಕಾರಣಗಳನ್ನು ತಿಳಿದುಕೊಳ್ಳೋಣ ಬನ್ನಿ..

ಯಾವುದೇ ದೇವಾಲಯದಲ್ಲಾದರೂ ಮೊದಲು ವಿಗ್ರಹ ಪ್ರತಿಷ್ಠಾಪನೆ ನಡೆದ ಮೇಲೆ ಅದಕ್ಕೆ ಅನುಗುಣವಾಗಿ ದೇವಾಲಯವನ್ನು ನಿರ್ಮಿಸುತ್ತಾರೆ. ಯಾಕೆಂದರೆ ವಿಗ್ರಹ ಪ್ರತಿಷ್ಠಾಪಿಸಿದ ಕಡೆ ಧನಾತ್ಮಕ ಶಕ್ತಿ ಇರುತ್ತದೆ. ಅದು ಗುಡಿಯ ಮುಖ್ಯ ದ್ವಾರದ ಮೂಲಕ ಹೊರಗೆ ಬರುತ್ತದೆ. ಆದ ಕಾರಣ ಗರ್ಭಗುಡಿಗೆ ಅಷ್ಟೆಲ್ಲ ಪ್ರಾಮುಖ್ಯತೆ ನೀಡಲಾಗುತ್ತದೆ. ಅಲ್ಲಿ ಹೆಚ್ಚಿನ ಶಕ್ತಿ ಇರುತ್ತದೆ .

 

 

ಗರ್ಭಗುಡಿಯಲ್ಲಿ ಬಹಳಷ್ಟು ಶಕ್ತಿ ಇರುವ ಕಾರಣ ಅಲ್ಲಿ ಸಾಕ್ಷಾತ್ ದೇವಾನುದೇವತೆಗಳು ಓಡಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಅಂತಹ ಪವಿತ್ರವಾದ ಪ್ರದೇಶದಲ್ಲಿ ಪಾದರಕ್ಷೆಗಳನ್ನು ಹಾಕಿಕೊಳ್ಳಬಾರದು. ಹಾಗಾಗಿ ದೇವಾಲಯಗಳ ಒಳಕ್ಕೆ ಚಪ್ಪಲಿಗೆ ಅನುಮತಿ ನೀಡುವುದಿಲ್ಲ. ಚಪ್ಪಲಿ ಹಾಕಿಕೊಂಡು ಹೋಗಬಾರದು.

ಇನ್ನು ದೇವಾಲಯಗಳಲ್ಲಿ ಇರುವ ಗಂಟೆ ವಿಷಯಕ್ಕೆ ಬಂದರೆ ಆ ಗಂಟೆ ಹೊಡೆಯುವುದರಿಂದ ಬರುವ ಧ್ವನಿ ಏಳು ಸೆಕೆಂಡ್ ಗಳ ಕಾಲ ಇರುತ್ತದೆ. ಈ ಹಿನ್ನೆಲೆಯಲ್ಲಿ ಆ ಮಂಗಳಕರವಾದ ದ್ವನಿಯು ನಮ್ಮ ಮೆದುಳಿನಲ್ಲಿ ಇರುವ ಬಲ ಹಾಗೂ ಎಡ ಭಾಗಗಳನ್ನು ಪ್ರೇರೇಪಿಸುತ್ತದೆ. ಇದರಿಂದ ದೇಹದಲ್ಲಿ ಇರುವ ಏಳು ಪ್ರಮುಖ ರೋಗ ನಿರೋಧಕ ವ್ಯವಸ್ಥೆಗಳು ಉತ್ತೇಜನಗೊಂಡು ಬಲಗೊಳ್ಳುತ್ತವೆ. ಇದರಿಂದ ನಮಗಿರುವ ಅನಾರೋಗ್ಯ ಕಾಯಿಲೆಗಳು ಗುಣವಾಗುತ್ತವೆ.

ದೇವಾಲಯದಲ್ಲಿ ಇರುವ ಕುಂಕುಮವನ್ನು ಹಣೆಗೆ ಎರಡು ಹುಬ್ಬುಗಳ ನಡುವೆ ಧರಿಸಿದರೆ ಅದರಿಂದ ನಮಗೆ ಧನಾತ್ಮಕ ಶಕ್ತಿ ಸಿಗುತ್ತದೆ. ಇದು ನಮಗೆ ಧನಾತ್ಮಕ ಶಕ್ತಿ ನೀಡುತ್ತದೆ. ಇದು ನಮ್ಮನ್ನು ಆರೋಗ್ಯವಾಗಿ ಇರಿಸುತ್ತದೆ. ಏಕಾಗ್ರತೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ.

 

 

ದೇವಾಲಯದ ಗರ್ಭಗುಡಿಯಲ್ಲಿ ಕರ್ಪೂರವನ್ನು ಬೆಳಗಿಸಿ ಸ್ವಾಮಿಗೆ ಆರತಿ ಮಾಡುತ್ತಾರೆ. ಆ ಸಮಯದಲ್ಲಿ ಬರುವ ಹೊಗೆಯಿ0ದ ಉಸಿರಾಡಿದರೆ ನಮಗೆ ಅನೇಕ ವಿಧದ ಆರೋಗ್ಯ ಪ್ರಯೋಜನಗಳು ಉಂಟಾಗುತ್ತವೆ. ಅಷ್ಟೇ ಅಲ್ಲ ಆರತಿ ಬೆಳಕಿನಲ್ಲಿ ಸ್ವಾಮಿಯನ್ನು ದರ್ಶನ ಮಾಡುವುದು ಉತ್ತಮವೆಂದು ಹೇಳಲಾಗಿದೆ .ಆರತಿಯನ್ನು ಕೈಯಲ್ಲಿ ಮುಟ್ಟಿಕೊಂಡು ಅದನ್ನು ಕಣ್ಣಿಗೆ ಸ್ಪರ್ಶಿಸಿ ಕೊಂಡರೆ ಅದರಿಂದ ಕಣ್ಣಿನ ಬಳಿ ಇರುವ ನರಗಳು ಉತ್ತೇಜನಗೊಳ್ಳುವವು.

ತುಂಬಾ ಸುವಾಸನೆಯಿಂದ ಕೂಡಿದ ಹೂವುಗಳನ್ನು ದೇವಾಲಯದಲ್ಲಿ ದೇವರ ಪೂಜೆಗಾಗಿ ಉಪಯೋಗಿಸಲಾಗುತ್ತದೆ. ಅವುಗಳಿಂದ ಬರುವ ಸುವಾಸನೆಯನ್ನು ಆಸ್ವಾದಿಸುವುದರಿಂದ ನಮ್ಮ ದೇಹದಲ್ಲಿನ ಹಲವು ನಾಡಿಗಳು ಉತ್ತೇಜನಗೊಂಡು ವಿವಿಧ ರೀತಿಯ ರೋಗಗಳನ್ನು ತೊಲಗಿಸಲು ಉಪಯೋಗಕ್ಕೆ ಬರುತ್ತದೆ.

ಇನ್ನೂ ಕೊನೆಯದಾಗಿ ದೇವಾಲಯಗಳಲ್ಲಿ ಸ್ವಾಮಿಗೆ ನೈವೇದ್ಯವಾಗಿ ಹೆಚ್ಚಾಗಿ ತೆಂಗಿನಕಾಯಿ, ಬಾಳೆಹಣ್ಣು ಇಡುತ್ತಿರುತ್ತಾರೆ. ನಿಜ ಹೇಳಬೇಕೆಂದರೆ ಇವುಗಳಲ್ಲಿ ಅನೇಕ ಆರೋಗ್ಯ ರಹಸ್ಯಗಳು ಕೂಡ ಅಡಗಿವೆ. ಅವು ನಮ್ಮ ದೇಹಕ್ಕೆ ಒಳಿತನ್ನು ಮಾಡುತ್ತದೆ. ಅವನ್ನು ಪ್ರಸಾದವಾಗಿ ಸ್ವೀಕರಿಸುವುದರಿಂದ ನಮ್ಮ ದೇಹದಲ್ಲಿನ ಅನೇಕ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಈ ಮೇಲೆ ತಿಳಿಸಿದ ಉಪಯೋಗಗಳು ಇರುವ ಕಾರಣ ಅಂದಿನಿಂದಲೂ ಇದನ್ನು ಆಚಾರವಾಗಿ ಪಾಲಿಸಲಾಗುತ್ತಿದೆ. ಹಾಗಾಗಿ ಹಿರಿಯರು ಯಾವಾಗಲೂ ಹೇಳುತ್ತಿರುತ್ತಾರೆ ದೇವಾಲಯಗಳಿಗೆ ಕಡ್ಡಾಯವಾಗಿ ಹೋಗಬೇಕೆಂದು. ಇದರಿಂದ ನಮಗೆ ಅನೇಕ ಆರೋಗ್ಯ ಪ್ರಯೋಜನಗಳು ಉಂಟಾಗುತ್ತವೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top