fbpx
News

ವಿರುಷ್ಕರನ್ನು ನಿಂಧಿಸಿದ್ದ ಬಿಜೆಪಿ ಶಾಸಕನ ವಿರುದ್ಧ ಕ್ರಿಕೆಟಿಗ ಗೌತಮ್ ಗಂಭೀರ್ ಕೆಂಡಾಮಂಡಲ.

ವಿರುಷ್ಕರನ್ನು ನಿಂಧಿಸಿದ್ದ ಬಿಜೆಪಿ ಶಾಸಕನ ವಿರುದ್ಧ ಕ್ರಿಕೆಟಿಗ ಗೌತಮ್ ಗಂಭೀರ್ ಕೆಂಡಾಮಂಡಲ.

 

 

 

ಮಧ್ಯಪ್ರದೇಶದ ಬಿಜೆಪಿ ಶಾಸಕನ ವಿರುದ್ಧ ಕ್ರಿಕೆಟಿಗ ಗೌತಮ್ ಗಂಭೀರ್ ಗರಂ ಆಗಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಇಟಲಿಯ ಮಿಲಾನ್‌ನಲ್ಲಿ ವಿವಾಹವಾಗಿದ್ದಕ್ಕೆ “ಭಾರತವನ್ನು ಬಿಟ್ಟು ವಿದೇಶದಲ್ಲಿ ಮದುವೆಯಾಗಿರುವ ವಿರಾಟ್ ಮತ್ತು ಅನುಷ್ಕಾಗೆ ದೇಶ ಪ್ರೇಮವಿಲ್ಲ” ಎಂದು ಮಧ್ಯಪ್ರದೇಶ ಬಿಜೆಪಿ ಶಾಸಕ ಪಣ್ಣಲಾಲ್ ವಿರುಷ್ಕ ಜೋಡಿಯನ್ನು ನಿಂದಿಸಿದ್ದರು.

 

 

ವಿರಾಟ್ ಕೊಹ್ಲಿಯ ದೇಶಪ್ರೇಮವನ್ನು ಪ್ರಶ್ನಿಸಿದ ಬಿಜೆಪಿ ಶಾಸಕನ ಹೇಳಿಕೆಯನ್ನು ಖಂಡಿಸಿರುವ ಗೌತಿ ” ವಿರುಷ್ಕಾ ಖಾಸಗಿತನವನ್ನು ರಾಜಕೀಯದಲ್ಲಿ ಮಿಶ್ರ ಮಾಡಬಾರದು
ನಿಮ್ಮ ಹೇಳಿಕೆ ಅಸಂಬದ್ಧ ಹಾಗೂ ಪ್ರಚಾರ ಗಿಟ್ಟಿಸುವ ತಂತ್ರ. ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಈ ವಿಷಯದಲ್ಲಿ ದೇಶಪ್ರೇಮದ ವಿಷಯವನ್ನು ತೆಗಿಯಬಾರದು,

 

 

” ಯಾರೇ ಆದರೂ ತಾವು ಎಲ್ಲಿ ಹೇಗೆ ಮದುವೆ ಮಾಡಿಕೊಳ್ಳಬೇಕು ಎನ್ನುವ ಆಯ್ಕೆಯ ಸ್ವತಂತ್ರ ಮತ್ತು ಅವಕಾಶವಿರುತ್ತದೆ. ಯಾರ ಮೇಲಾದರೂ ಇಂತಹ ಆರೋಪಗಳನ್ನು ಮಾಡುವ ಮುನ್ನ ರಾಜಕಾರಣಗಳು ನೂರು ಬಾರಿ ಯೋಚಿಸಿ ಮಾತನಾಡಬೇಕು.” ಎಂದು ಶಾಸಕ ಪಣ್ಣಲಾಲ್ ವಿರುದ್ಧ ಗರಂ ಆದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top