fbpx
ಸಮಾಚಾರ

ತಾಂತ್ರಿಕ ವಿದ್ಯೆ ಬಳಸಿ ನಿಧಿಗಳನ್ನ ಬಚ್ಚಿಡುವಾಗ ಯಾಕೆ ನಾಗಬಂಧ ಉಪಯೋಗ ಮಾಡ್ತಾರೆ ಗೊತ್ತಾ ? ಇದರ ಬಗ್ಗೆ ತಿಳ್ಕೊಂಡ್ರೆ ಆಶ್ಚರ್ಯ ಪಡ್ತಿರಾ !

ತಾಂತ್ರಿಕ ವಿದ್ಯೆ ಬಳಸಿ ನಿಧಿಗಳನ್ನ ಬಚ್ಚಿಡುವಾಗ ಯಾಕೆ ನಾಗಬಂಧ ಉಪಯೋಗ ಮಾಡ್ತಾರೆ ಗೊತ್ತಾ ? ಇದರ ಬಗ್ಗೆ ತಿಳ್ಕೊಂಡ್ರೆ ಆಶ್ಚರ್ಯ ಪಡ್ತಿರಾ!

ನಾಗಬಂಧದ ಕೆಲವು ಕುತೂಹಲಕಾರಿ ಸಂಗತಿ:

ನಮ್ಮ ಭಾರತದ ಇತಿಹಾಸದಲ್ಲಿ ಈ ನಾಗಬಂಧ ತುಂಬಾ ಪುರಾತನ ಕಾಲದಿಂದ ಇದೆ .ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಬಗ್ಗೆ ನಿಮಗೆ ಗೊತ್ತಿರುತ್ತದೆ.ಕೆಲವು ವರ್ಷಗಳ ಹಿಂದೆ ಇಡೀ ಪ್ರಪಂಚವೇ ಈ ದೇವಾಲಯ ಮತ್ತು ಇಲ್ಲಿನ ನಿಧಿ,ಸಂಪತ್ತಿನ ಬಗ್ಗೆ ಮಾತಾಡಿಕೊಳ್ತು.ಆದರೆ ಈ ದೇವಾಲಯದ ೬ನೇ ಕೋಣೆಯನ್ನು ಮಾತ್ರ ತೆರೆಯಲು ಆಗಲಿಲ್ಲ . ಯಾಕಂದ್ರೆ ಆ ಕೋಣೆಯ ಬಾಗಿಲಿನ ಮೇಲೆ ನಾಗಬಂಧ ಹಾಕಲಾಗಿದೆ.

 

ನಾಗಬಂಧ ಅಂದ್ರೆ ಏನು ?ನಿಧಿಗಳನ್ನ ಬಚ್ಚಿಡುವಾಗ ಯಾಕೆ ನಾಗಬಂಧ ಉಪಯೋಗಮಾಡ್ತಾರೆ ?

ಬನ್ನಿ ಅದಕ್ಕೆ ಉತ್ತರ ತಿಳಿದುಕೊಳೋಣ:

ನಾಗಬಂಧ ಅಂದ್ರೆ ನಾಗರಹಾವಿನ ಶಕ್ತಿಯನ್ನು ಕೆಲವು ತಾಂತ್ರಿಕ ವಿದ್ಯೆಯಿಂದ ಒಂದು ಕೋಣೆ ಅಥವಾ ಮನೆಯನ್ನು ಒಂದು ರೀತಿಯ ಬಂಧನಕ್ಕೆ ಉಪಯೋಗಿಸುತ್ತಾರೆ ಅದನ್ನೇ ನಾಗಬಂಧ ಎಂದು ಕರೆಯುತ್ತಾರೆ.

 

ಈ ನಾಗಬಂಧಕ್ಕೆ ತುಂಬಾ ಶಕ್ತಿ ಇರುತ್ತದೆ ಅಂತೆ .ಈ ನಾಗಬಂಧ ಹಾಕಿರುವ ಕೋಣೆಯನ್ನು ಸರಿಯಾದ ಪದ್ದತಿಯಲ್ಲಿ ನಾಗಬಂಧ ವಿಮೋಚನೆ ಮಾಡದೇ ಆ ಪ್ರದೇಶಕ್ಕೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ ಅಂತೆ .

 

ನಮ್ಮ ಆಡು ಭಾಷೆಯಲ್ಲಿ ಹೇಳಬೇಕು ಅಂದ್ರೆ ನಾಗಬಂಧ ಅಂದ್ರೆ ನಾಗರಹಾವುಗಳನ್ನು ವಶೀಕರಣ ಮಾಡಿ ನಿಧಿ ಇರುವಂತ ಕೋಣೆಗೆ ಕಾವಲಿಗೆ ಇಡುವುದು .

 

ತಾಂತ್ರಿಕ ವಿದ್ಯೆ ಕಲಿತ ಯೋಗಿಗಳು ಮತ್ತು ಸಿದ್ದಿಗಳು ಮಾತ್ರ ಈ ನಾಗಬಂಧ ಹಾಕುತ್ತಾರೆ.ಅದರಲ್ಲೂ ಕೇರಳಗೆ ಸೇರಿದ ಪುರಾತನ ಯೋಗಿಗಳು ಇದರಲ್ಲಿ ನಿಪುಣರು.ನಾಗಬಂಧ ಹಾಕುವುದು ಅಂದ್ರೆ ಅಂತ ಸಾಮಾನ್ಯ ವಿಷಯವೇನಲ್ಲ ಅದಕ್ಕೆ ತುಂಬಾ ಅನುಭವ ಇರಬೇಕು .ಒಂದು ವೇಳೆ ನಾಗಬಂಧ ಪ್ರಯೋಗಿಸಿ ಏನಾದರೂ ಸಮಸ್ಯೆ ಅಂದ್ರೆ ಆಗುವ ಪರಿಣಾಮ ತುಂಬಾ ಭಯಾನಕವಾಗಿರುವುದಂತೆ.

ಈ ಕಷ್ಟವಾದ ನಾಗಬಂಧವನ್ನು ಬಿಡಿಸಲು ಒಂದು ಮಂತ್ರ ಕೂಡ ಇದೆ ಅಂತೆ ,ಆ ಮಂತ್ರವೇ ಗರುಡ ಮಂತ್ರ .ನಾಗಬಂಧ ಮಾಡಿದ ಕೋಣೆಯಿಂದ ಬಿಡಿಸಲು ಗರುಡ ಮಂತ್ರ ಉಪಯೋಗ ಮಾಡುತ್ತಾರಂತೆ ಆದರೆ ಇಲ್ಲಿ ಒಂದು ಸಮಸ್ಯೆ ಇದೆ ,ನಮ್ಮ ಪುರಾಣಗಳ ಪ್ರಕಾರ ನಮಗೆ ೮ ದಿಕ್ಕು ಇದೆ ಮತ್ತು ಒಂದು ಒಂದು ದಿಕ್ಕಿಗೂ ಒಂದು ಒಂದು ನಾಗದೇವತೆ ಕಾವಲು ಕಾಯುತ್ತದೆ ಎಂದು ಹೇಳಲಾಗುತ್ತದೆ,ನಾಗಬಂಧ ಹಾಕಿದ ಜಾಗದಲ್ಲಿ ಯಾವ ನಾಗದೇವತೆ ಇರುವುದೋ ಮತ್ತು ಆ ನಾಗದೇವತೆ ಯಾವ ಮಂತ್ರ ಪಠಿಸಬೇಕೋ ಎಂದು ತಿಳಿಯದೆ ನಾಗಬಂಧ ಬಿಡಿಸುವುದ ಕಷ್ಟ ಎಂದು ಹೇಳುತ್ತಾರೆ.

ಈಗಿನ ಕಾಲದಲ್ಲಿ ನಾಗಬಂಧವನ್ನು ಹಾಕುವವರು ಮತ್ತು ತೆಗೆಯುವವರು ಯಾರು ಇಲ್ಲವಂತೆ.ನಮ್ಮ ಪೂರ್ವಿಕರು ನಾಗಬಂಧದ ಬಗ್ಗೆ ಬರೆದಿರುವ ತಾಳೆ ಪತ್ರಗಳು ಕೂಡ ಕಡಿಮೆ.

 

 

ಈ ಕಾರಣದಿಂದ ಅನಂತ ಪದ್ಮನಾಭ ಸ್ವಾಮಿಯ ಒಂದು ಕೋಣೆಯನ್ನು ತೆರೆದಿಲ್ಲ,ತೆರೆದರೆ ಅನರ್ಥ ಸಂಭವಿಸಿ ಪ್ರಳಯ ಉಂಟಾಗುತ್ತದೆ ಅಂತೆ ಮತ್ತು ಈ ಕೊನೆಗೂ ಮತ್ತು ಸಮುದ್ರಕ್ಕೂ ಸಂಬಂಧ ಇದೆ ಅಂತೆ ,ಆದರಿಂದ ಈ ಕೋಣೆ ತೆರೆದರೆ ಆ ಸಮುದ್ರದ ನೀರಿನಿಂದ ಇಡೀ ಕೇರಳವೇ ಜಲಾವೃತ ವಾಗುವುದಂತೆ.

ಕೇರಳದ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಒಂದೊಂದು ಬಾಗಿಲು ತೆರೆಯಲು ೬ ಗಂಟೆ ಬೇಕಾಯಿತಂತೆ.ಆದರೆ ಈ ದೇವಾಲಯದ ೬ನೇ ಕೋಣೆಯನ್ನು ಮಾತ್ರ ತೆರೆಯಲು ಆಗಲಿಲ್ಲ ,ಈ ಕೋಣೆಗೆ ಅನೇಕ ಪರಿಣಿತಿ ಹೊಂದಿದ ತಾಂತ್ರಿಕ ಮಾಂತ್ರಿಕರಿಂದ ನಾಗಬಂಧ ಹಾಕಿಸಿದರೆ ಎಂದು ಹೇಳಲಾಗುತ್ತದೆ.ಹಿಂದೆ ಈ ಕೋಣೆಯ ಬಾಗಿಲು ತೆರೆಯಲು ಪ್ರಯತ್ನ ಮಾಡಿದ ಎಷ್ಟೋ ಜನ ಮರಣ ಹೊಂದಿದರಂತೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top