fbpx
ಮನೋರಂಜನೆ

ಕೆಲಸ ಆದ್ಮೇಲೆ ಕೈ ತೊಳೆದು ಕೊಂಡ ನಿರ್ದೇಶಕ ಗುರುಪ್ರಸಾದ್ ಹಾಗು ವಿಜಯ ಪ್ರಸಾದ್ ಬಗ್ಗೆ ನಟ ಜಗ್ಗೇಶ್ ಹೇಳಿದ್ದು ಹೀಗೆ

ಸದಾ ಒಂದಲ್ಲ ಒಂದು ಟ್ವೀಟ್ ಮಾಡುತ್ತಾ ಸಾಮಾಜಿಕ ಜಾಲ ತಾಣಗಳಲ್ಲಿ ಬಹಳ ಆಕ್ಟಿವ್ ಇರುವ ನಟ ಜಗ್ಗೇಶ್ ಈ ಬಾರಿ ವಿವಾದಾತ್ಮಕ ಟ್ವೀಟ್ ಒಂದನ್ನು ಮಾಡಿದ್ದಾರೆ .

 

 

ಸತತ ಸೋಲುಗಳಿಂದ ಕಂಗೆಟ್ಟಿದ್ದ ಜಗ್ಗೇಶ್ ರವರಿಗೆ ಮತ್ತೊಮ್ಮೆ ಯಶಸ್ಸಿನ ತುದಿಗೆ ಕರೆದುಕೊಂಡು ಹೋಗಿದ್ದು ಮಠ ಹಾಗು ಎದ್ದೇಳು ಮಂಜುನಾಥ ಚಿತ್ರಗಳು , ಸೋಮಾರಿ ಕೆಲಸಕ್ಕೆ ಬಾರದ ಗಂಡನಾಗಿ ಮನೋಜ್ಞ ಅಭಿನಯ ನೀಡಿದ್ದರು ಈ ಚಿತ್ರಕ್ಕೆ ನಿರ್ದೇಶಕ ಗುರು ಪ್ರಸಾದ್ ಆಕ್ಷನ್ ಕಟ್ ಹೇಳಿದ್ದರು ,ಕಾಮಿಡಿ ಜೊತೆ ಸಾಮಾಜಿಕ ಸಂದೇಶಗಳನ್ನು ಸಾರುವ ಚಿತ್ರವಾಗಿದ್ದು ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿದ್ದವು .

ಇದಾದ ಬಳಿಕ ಜಗ್ಗೇಶ್ ಮತ್ತೊಮ್ಮೆ ಫಾರ್ಮ್ ಗೆ ಬಂದಿದ್ದರು , ಆಗ ಶುರುವಾಗಿದ್ದೆ ನಾನಾ ನೀನಾ ಎನ್ನುವ ಕೋಲ್ಡ್ ವಾರ್ , ತಮ್ಮಿಂದಲೇ ಜಗ್ಗೇಶ್ರವರಿಗೆ ಮತ್ತೆ ಫಾರ್ಮ್ ಗೆ ಬರಲು ಸಾಧ್ಯವಾಯಿತು ಎಂದು ಗುರು ಪ್ರಸಾದ್ ಹೇಳಿಕೊಂಡಿದ್ದಾರೆ ಎಂದು ಕೆಲವರು ಮಾಧ್ಯಮಗಳಲ್ಲಿ ಹೇಳಿಕೊಂಡರು , ಅಲ್ಲಿಗೆ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಸಂಬಂಧ ಹಳಸಿ ಮತ್ತೊಮ್ಮೆ ಚಿತ್ರ ಮಾಡಲು ಮನಸು ಮಾಡಲಿಲ್ಲ .

 

 

ಇತ್ತ ಗುರು ಪ್ರಸಾದ್ ಮಾಡಿದ ಎರಡನೇ ಸಲ , ಡೈರೆಕ್ಟರ್ ಸ್ಪೆಷಲ್ ಇತ್ಯಾದಿ ಚಿತ್ರಗಳು ಬಾಕ್ಸ್ ಆಫೀಸ್ ಗೆಲ್ಲಲು ವಿಫಲವಾದವು , ಈ ಸಮಯದಲ್ಲಿ ನಟ ಧನಂಜಯ್ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಉಂಟಾದ ವಾರ್ ಮತ್ತೊಮ್ಮೆ ಗುರು ಪ್ರಸಾದ್ ಹಾಗು ನಟನ ಮಧ್ಯೆ ಬಿರುಕನ್ನು ತಂದು ಹಾಕಿದ್ದವು .

 

 

ತಮ್ಮ ಸಿನಿ ಜರ್ನಿ ಮುಂದುವರಿಸಿ ವಿಜಯ ಪ್ರಸಾದ್ ಸಾರಥ್ಯದಲ್ಲಿ ಜಗ್ಗೇಶ್ ನೀರ್ದೋಸೆ ಚಿತ್ರದಲ್ಲಿ ಹೆಣದ ವ್ಯಾನ್ ಓಡಿಸುವ ಡ್ರೈವರ್ ಆಗಿ , ದತ್ತಣ್ಣನ ಜೊತೆ ಕಾಮಿಡಿ ಹಾಗು ಹರಿಪ್ರಿಯಾ ಜೊತೆಗಿನ ಲವ್ ಹೇಟ್ ರಿಲೇಶನ್ ಶಿಪ್ ನಿಂದಾಗಿ ಭರ್ಜರಿ ಯಶಸ್ಸು ತಂದುಕೊಟ್ಟಿತ್ತು , ಇದಕ್ಕೂ ಮೊದಲು ಈ ಚಿತ್ರಕ್ಕೆ ನಟಿಯಾಗ ಬೇಕಿದ್ದ ರಮ್ಯಾ ಅರ್ಧ ಚಿತ್ರೀಕರಣವಾದ ಮೇಲೆ ಕೈ ಕೊಟ್ಟು ಕಂಗೆಟ್ಟ ನಿರ್ಮಾಪಕರು ಹಾಗು ಚಿತ್ರ ತಂಡ ಅದರಲ್ಲೂ ನವರಸ ನಾಯಕನ ಹಾಗು ರಮ್ಯಾ ನಡುವಿನ ಸಾಮಾಜಿಕ ಜಾಲತಾಣಗಳಲ್ಲಿನ ಸಮರ ತಾರಕಕ್ಕೆ ಏರಿತ್ತು .

ಈಗ ಅಂತಹದ್ದೇ ಮತ್ತೊಂದು ವಿವಾದಾದ್ಮಕ ಟ್ವೀಟ್ ಮಾಡಿದ್ದಾರೆ ಜಗ್ಗೇಶ್

 

 

ನನ್ನಅಭಿನಯ ನೋಡಿ #spotಲ್ಲಿ
ಆನಂದಿಸುತ್ತಿದ್ದ ಗುರುಪ್ರಸಾದ್.
ಯಾಕೋ ಸಿನಿಮಾ #Hit ಆದಮೇಲೆ
ನನ್ನಶ್ರಮ ಮರೆತುಬಿಟ್ಟ ಸಹೋದರ ಇವನಂತೆ ಆಗಿಬಿಟ್ಟ ಮಿತ್ರ ನೀರ್ದೋಸೆ
ನಿರ್ದೇಶಕನು ಕೂಡ!
1980ರಿಂದ ತಯಾರಾದ ನಾನು!
#Uenjoy godbless ಅಂತ ದೂರಉಳಿದೆ!
ಇದೊಂಥರ ಮಗು ಹುಟ್ಟಲು ತಂದೆ
ಮುಖ್ಯವೋ!ಇಲ್ಲಾ ತಾಯೋ ಅನ್ನೋ
ಪ್ರಶ್ನೆ!ಸ್ವಾಭಿಮಾನಿ ಜಗ್ಗೇಶ್!

 

ಒಟ್ಟಿನಲ್ಲಿ ಇಂತಹ ಸಣ್ಣ ಸಣ್ಣ ಮನಸ್ತಾಪಗಳು ಮುಂದೆ ದೊಡ್ಡ ದೊಡ್ಡ ಬಿರುಕನ್ನು ಮೂಡಿಸುತ್ತವೆ , ಇಂತಹ ಮನಸ್ತಾಪಗಳನ್ನು ಮಾತಾಡಿ ಬಗೆ ಹರಿಸಿಕೊಂಡರೆ ಚಿತ್ರರಂಗದಲ್ಲಿ ಒಗ್ಗಟ್ಟು ಉಳಿಯುತ್ತದೆ ಏನಂತೀರಾ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top