fbpx
News

ಪ್ಲ್ಯಾಸ್ಟಿಕ್ ಐಟಮ್ಮುಗಳೆಲ್ಲ ಇವನಿಗೆ ಮುತ್ತು ಕೊಡ್ತವೆ!

ಪ್ಲ್ಯಾಸ್ಟಿಕ್ ಐಟಮ್ಮುಗಳೆಲ್ಲ ಇವನಿಗೆ ಮುತ್ತು ಕೊಡ್ತವೆ!

ಅಮೆರಿಕದಲ್ಲೊಬ್ಬ ಅಂಟು ಗಿರಾಕಿ!

 

 

ಅಂಟಂಟಂಟೂ ಅನ್ನೋ ಹಾಡು ಇಲ್ಲೇಕೆ ಬಂತು ಅಚ್ಚರಿಗೊಳ್ಳದಿರಿ… ಇದು ಉಪೇಂದ್ರ ಅಭಿನಯದ ಸೂಪರ್ ಸ್ಟಾರ್ ಗೀತೆಯಲ್ಲ. ಈ ಹಾಡು ಅಕ್ಷರಶಃ ಜಾಮಿ ಕೀಟನ್‍ಗೆ ಸೂಕ್ತವಾಗಿದೆ. ಪ್ಲಾಸ್ಟಿಕ್ ಬಾಟಲಿ, ಲೋಟ, ಕ್ಯಾನ್ ಇವೆಲ್ಲಾ ಇವನ ತಲೆ, ಹಣೆ, ಕೆನ್ನೆ, ಕೈಗಳಿಗೆ ಗಪ್ಪನೆ ಮೆತ್ತಿಕೊಳ್ಳುತ್ತದೆ. ಹಿಡಿದೆಳೆದರೆ ಉದುರಿ ಬೀಳುತ್ತದೆ.

 

 

ಹಾಗೆಂದು ಇವನೇನು ಅವುಗಳನ್ನು ಹಿಡಿದು ಮೆತ್ತಿಕೊಳ್ಳುವುದಿಲ್ಲ. ಬದಲಿಗೆ ಅವುಗಳ ಹತ್ತಿರ ತೆರಳಿದರೆ ಸಾಕು…ಮ್ಯಾಗ್ನೆಟ್‍ಗೆ ಕಬ್ಬಿಣದ ಅದಿರು ಮೆತ್ತಿಕೊಳ್ಳುವಂತೆ ಇವನಿಗೆ ವಸ್ತುಗಳು ಮೆತ್ತಿಕೊಳ್ಳುತ್ತವೆ.

ಯಾಕ್ ಹೀಗೆ?

ಜಾಮಿ ಚರ್ಮಕ್ಕೆ ಹೀರಿಕೊಳ್ಳುವ ಕಾಯಿಲೆಯಿದೆ ಎನ್ನುತ್ತಾರೆ ವೈದ್ಯರು. ಮದ್ದಿಲ್ಲವಂತೆ. ಈತನಿಗೂ ಚಿಕಿತ್ಸೆ ಬೇಕಿಲ್ಲ. ಬದಲಿಗೆ ಲೋಟ, ಪ್ಲೇಟು, ಕೋಲಾ ಬಾಟಲಿಗಳನ್ನು ಮೆತ್ತಿಕೊಂಡು ಜನರಿಗೆ ಮನರಂಜನೆ ನೀಡಿ ಖುಷಿ ಪಡಿಸುತ್ತಾನೆ. ತಾನೂ ಸಂತಸ ಪಡುತ್ತಾನೆ.

 

 

ಇಂತಹ ಜಾಮಿಯನ್ನು ನಮ್ಮ ಬೆಂಗಳೂರಿಗೆ ಕರೆಸಿದರೆ ಹೇಗೆ? ಈತನನ್ನು ಜನ ನಿಬಿಡ ಬರ್ಮಾಬಜಾರ್, ಶಾಪಿಂಗ್ ಕಾಂಪ್ಲೆಕ್ಸ್‍ಗಳು, ಮಾಲ್‍ಗಳಿಗೆ ಕರೆದೊಯ್ದರೆ ಹಲವು ವಸ್ತುಗಳು ಮೆತ್ತಿಕೊಳ್ಳುತ್ತವೆ. ಇದೊಳ್ಳೆ ಸಂಪಾದನೆಯಲ್ಲವೇ?!

 

 

ಬಂದ್ರೆ ಇಂಥಾ ರೋಗ ಬರಬೇಕು ರೀ…ಸಂಪಾದನೆ ಖಚಿತ- ನೋಡುಗರಿಗೆ ಮನರಂಜನೆ ಉಚಿತ! ರೋಗವನ್ನು ವರವಾಗಿಸಿಕೊಂಡ ಈ ವರದಿ ಅಮೆರಿಕದ ಫ್ಲೊರಿಡಾದಿಂದ ಬಂದಿದೆ.

ಅಂಟಂಟೂ ಎಂದು ಹಾಡಿದ ಉಪೇಂದ್ರ ಸೂಪರ್ ಸ್ಟಾರ್ ಆದರೆ ಜಾಮಿ ಕೀಟನ್‍ನ ಏನೆಂದು ಕರೆಯಬಹುದು?

ಗ್ಲೂ ಸ್ಟಾರ್!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top