fbpx
ಕ್ರೈಂ ಸ್ಟೋರಿ

ರಾಜಸ್ಥಾನದ ಲವ್‍ಜಿಹಾದ್ ವಿಡಿಯೋಗೆ ಹೊಸ ತಿರುವು; ತಪ್ಪುಗ್ರಹಿಕೆಯಿಂದಾದ ಕೃತ್ಯ

ರಾಜಸ್ಥಾನದ ಲವ್‍ಜಿಹಾದ್ ವಿಡಿಯೋಗೆ ಹೊಸ ತಿರುವು; ತಪ್ಪುಗ್ರಹಿಕೆಯಿಂದಾದ ಕೃತ್ಯ

ರಾಜಸ್ಥಾನದ ರಾಜ್ ಸಮಂದ್‍ನಲ್ಲಿ ಲವ್‍ಜಿಹಾದ್ ಎಂಬ ಕಲ್ಪಿತ ಆಲೋಚನೆಗೆ ಬಲಿಬಿದ್ದು, ವ್ಯಕ್ತಿಯೊಬ್ಬನನ್ನು ಜೀವಂತ ದಹಿಸಿದ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.

 

 

ಬಾಂಗ್ಲಾ ಮೂಲದಿಂದ ಕೂಲಿ ಕೆಲಸಕ್ಕೆಂದು ರಾಜಸ್ಥಾನಕ್ಕೆ ಬಂದ ಅಜ್ಜು ಶೇಖ್ ಎಂಬಾತನ ಜೊತೆ ತನ್ನ ತಂಗಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು, ಅದಕ್ಕಾಗಿ ಆತನನ್ನು ಹತ್ಯೆಮಾಡಬೇಕೆಂದು ನಿರ್ಧಾರ ತೆಗೆದುಕೊಂಡ ಆರೋಪಿ ಶಂಭುಲಾಲ್, ಅಜ್ಜುನನ್ನು ಒಮ್ಮೆಯೂ ನೋಡಿರಲಿಲ್ಲ. ಕೇವಲ ದೂರವಾಣಿಯಲ್ಲಿ ಮಾತನಾಡಿದ್ದನಷ್ಟೆ. ಹಾಗಾಗಿ ಆತನನ್ನು ಹುಡುಕುತ್ತಾ ಸ್ಥಳೀಯ ಮರುಕ್ಕಟ್ಟೆಯೊಂದಕ್ಕೆ ಬಂದ ಶಂಭುಲಾಲ್, ಅಲ್ಲಿದ್ದ ಇನ್ನೊರ್ವ ಕೂಲಿಕಾರ್ಮಿಕನ ಬಳಿ ಅಜ್ಜುವಿನ ಬಗ್ಗೆ ವಿಚಾರಿಸುತ್ತಾನೆ. ಆತನ ದೂರವಾಣಿ ಸಂಖ್ಯೆ ನೀಡುವಂತೆ ಕೇಳುತ್ತಾನೆ. ಆಗ ಕೂಲಿಕಾರ್ಮಿಕನು ಶಂಭುವಿಗೆ ಏನೋ ಕಟ್ಟಡದ ಕೆಲಸ ಆಗಬೇಕಿದೆ ಎಂದು ಭಾವಿಸಿ ಅಜ್ಜುವಿನ ಬದಲು ಅಫ್ರಜುಲ್ ನಂಬರ್ ಕೊಡುತ್ತಾನೆ. ಈ ವಿಚಾರ ತಿಳಿಯದೆ ಆರೋಪಿ ಶಂಭುಲಾಲ್ ಆತನನ್ನೇ ಅಜ್ಜು ಎಂದು ಭಾವಿಸಿ, ತನ್ನ ಭೂಮಿಗೆ ಸುತ್ತಲೂ ಗೋಡೆ ಕಟ್ಟಬೇಕೆಂದು ಹೇಳಿ ಅಫ್ರಜುಲ್‍ನನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ಹೋಗುತ್ತಾನೆ.

 

 

ಅಲ್ಲಿ ಅಫ್ರಜುಲ್‍ಗೆ ಕೆಲಸ ಮಾಡುವಂತೆ ಹೇಳಿ ಮನೆಗೆ ಬಂದ ಶಂಭುಲಾಲ್, ಹತ್ಯೆ ಮಾಡಲು ಪಿಕಕ್ಸೆಯನ್ನು ತೆಗೆದುಕೊಂಡು ಹೋಗುವುದರ ಜೊತೆಗೆ, ತಾನು ಮಾಡುವ ಘನಕಾರ್ಯವನ್ನು ವಿಡಿಯೋ ಮಾಡವೇಕೆಂದು ತನ್ನ ಸೋದರಳಿಯನನ್ನು ಕರೆದುಕೊಂಡು ಹೋಗುತ್ತಾನೆ. ಅಲ್ಲಿ ನಿರ್ದಯಿಯಂತೆ ಕ್ರೂರ ರೀತಿಯಲ್ಲಿ ಅಜ್ಜು ಎಂದು ಭಾವಿಸಿ ಅಫ್ರಜುಲ್‍ನನ್ನು ಹಿಗ್ಗಾಮುಗ್ಗಾ ಥಳಿಸಿ ಜೀವಂತ ದಹಿಸುತ್ತಾನೆ.

ಒಟ್ಟಿನಲ್ಲಿ ಪ್ರಕರಣದ ಪ್ರಮುಖ ಆರೋಪಿ ಶಂಭುಲಾಲ್ ತಪ್ಪುಗ್ರಹಿಕೆಯಿಂದ ಅಮಾಯಕ ವ್ಯಕ್ತಿ ಕ್ರೂರ ರೀತಿಯಲ್ಲಿ ಸಾವನ್ನಪ್ಪಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವೇ ಸರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top