fbpx
ಬಿಗ್ ಬಾಸ್

ಸಂಯುಕ್ತ ಕೈಯಲ್ಲಿ ಒದೆ ತಿಂದವರಲ್ಲಿ ಸಮೀರ್ ಆಚಾರ್ಯ ಮೊದಲಲ್ಲ ಇದಕ್ಕೂ ಮುಂಚೆ ಇನ್ನೊಬ್ಬ ಇದ್ದಾನೆ !

 

 

ಬಿಗ್’ಬಾಸ್ ಮನೆಗೆ ಅಥಿತಿಯಾಗಿ ಹೋಗಿರುವ ದುರಹಂಕಾರಿ ಸೊಕಾಲ್ಡ್ ಹೀರೋಯಿನ್ ಸಂಯುಕ್ತ ಹೆಗ್ಗಡೆ ತನ್ನ ಎಲುಬಿಲ್ಲದ ನಾಲಿಗೆಯನ್ನು ಇತರ ಸ್ಪರ್ಧಿಗಳ ಹತ್ತಿರ ಹರಿದು ಬಿಟ್ಟಿದ್ದಾಳೆ. ದುರಂಹಕಾರ ತನ್ನ ಹುಟ್ಟು ಗುಣ ಎಂಬಂತೆ ವರ್ತಿಸೋ ಈಕೆಯ ಮೇಲೆ ವೀಕ್ಷಕರು ಸಿಟ್ಟಾಗಿದ್ದರು. ಮಾಡಿರೋ ಒಂದೇ ಚಿತ್ರಕ್ಕೆ ಇಡೀ ಊರಿಗೆ ಆಗಿ ಮುಗುವಷ್ಟು ಸೊಕ್ಕನ್ನು ಮೈಗೂಡಿಸಿಕೊಂಡು ಕನ್ನಡದ ದುರಹಂಕಾರಿ ನಟಿ ಎಂದು ಕುಖ್ಯಾತಿ ಪಡೆದಿರುವ ಸಂಯುಕ್ತ ಇಂದು ಸಹ ಸ್ಪರ್ಧಿ ಸಮೀರ್ ಆಚಾರ್ಯಗೆ ಹೊಡೆದಿದ್ದಾಳೆ.

 

 

ಟಾಸ್ಕ್ ಗೋಸ್ಕರ ಬಿಗ್ ಬಾಸ್ ಮನೆಯಲ್ಲಿ ಎರಡು ಶಕ್ತಿಕೇಂದ್ರಗಳನ್ನು ನಿರ್ಮಿಸಿದ್ದರು ಆ ಶಕ್ತಿಕೇಂದ್ರಗಳ ಬ್ಯಾಟರಿಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ಎರಡು ಬ್ಯಾಟರಿಗಳಲ್ಲಿ ಒಂದು ಪುರುಷರದ್ದಾಗಿದ್ದರೆ ಮತ್ತೊಂದು ಮಹಿಳೆಯರದು, ಒಬ್ಬರು ಮತ್ತೊಬ್ಬರ ಬ್ಯಾಟರಿಗಳನ್ನು ನಾಶಪಡಿಸಬೇಕಾಗಿತ್ತು. ಟಾಸ್ಕ್ ಮಾಡುವಾಗ ಅತಿಯಾಗಿ ಆಡುತ್ತಿದ್ದ ಸಂಯುಕ್ತ ಚಂದನ್ ಮೇಲೆ ಕುಳಿತಿದ್ದಲ್ಲದೆ ಸಮೀರ್ ಆಚಾರ್ಯ ಅವರಿಗೆ ಉದ್ದೇಶಪೂರ್ವಕವಾಗಿ ಹೊಡೆದಳು. ಇದನ್ನು ಆಕೆ ಸಹ ನಾನು ಒಡೆದೆ ಎಂದು ಒಪ್ಪಿಕೊಂಡಳು.

 

 

ಯಾಕೆ ಹೊಡೆದೆ ಎಂದು ಸಮೀರ್ ಕೇಳಿದ್ದಕ್ಕೆ ‘ನೀವು ನನ್ನನ್ನ ಮುಟ್ಟುದ್ರಿ ಅದ್ಕೆ ಒಡ್ದೇ’ ಅಂತ ಸಂಯುಕ್ತ ದುರಹಂಕಾರದಿಂದಲೇ ಹೇಳಿದಳು . ಕಳೆದ ಬಾರಿ ತನ್ನ ಸಹ ಸ್ಪರ್ಧಿಯ ಮೇಲೆ ಕೈ ಮಾಡಿದ್ದಕ್ಕೆ ಹುಚ್ಚ ವೆಂಕಟ್ ಅವರನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಲಾಗಿತ್ತು ಈಗ ಸಂಯುಕ್ತ ಹೆಗ್ಡೆ ಸಮೀರ್ ಅವರಿಗೆ ಹೊಡೆದರು ಬಿಗ್ ಬಾಸ್ ಸಂಯುಕ್ತ ದಬ್ಬಿಸಿಕೊಂಡಿದ್ದಾಳೆ.

 

 

ಇದಕ್ಕೂ ಮುನ್ನ ಖಾಸಗಿ ಟಿ.ವಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂಯುಕ್ತ ತಾವು ಎಷ್ಟು ರೆಬೆಲ್ ಎಂದು ಹೇಳಿಕೊಂಡಿದ್ದರು , ಕಾಲೇಜ್ ಸೀನಿಯರ್ ಒಬ್ಬ ಸಂಯುಕ್ತ ಅವರನ್ನು ರೇಗಿಸುತ್ತಾ ಇದ್ದನಂತೆ .

 

 

ಆಗ ಒಂದೆರಡು ಬಾರಿ ಸಂಯುಕ್ತ ಸುಮ್ಮನೆ ಇದ್ದರು ಆತ ಪದೇ ಪದೇ ಸಂಯುಕ್ತ ಅವರನ್ನು ಕೆಣಕುತ್ತ ಇದ್ದನಂತೆ ಆನಂತರ ಸಂಯುಕ್ತ ಕೋಪ ನೆತ್ತಿಗೆ ಹೋಗಿ ಆತ ನನ್ನ ಬಗ್ಗಿಸಿಕೊಂಡು ಹೊಡೆಯಲು ಶುರು ಮಾಡಿದವಳು ಆತ ಅಲ್ಲಿಂದ ಓಡಿ ಹೋಗುವವರೆಗೂ ಹೊಡೆದಳಂತೆ .

ಈ ಕಥೆಯನ್ನು ಮಾಧ್ಯಮದ ಮುಂದೆ ಸಂಯುಕ್ತ ಹೆಗ್ಡೆ ಹೇಳಿಕೊಂಡಿದ್ದರು .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top