fbpx
ಸಮಾಚಾರ

ಶಾಲೆಯ ಛಾವಣಿಯೇ ಇಲ್ಲಿ ಆಟದ ಮೈದಾನ!

ಶಾಲೆಯ ಛಾವಣಿಯೇ ಇಲ್ಲಿ ಆಟದ ಮೈದಾನ!

ಸ್ಥಳಾಭಾವ ತಪ್ಪಿಸಲು ಹೊಸಾ ವಿಧಾನ!

 

ನಮ್ಮ ಬೆಂಗಳೂರಿನಲ್ಲಿ ಸರ್ಕಾರಿ ಜಾಗದ ಅಂಗಳಗಳ ಒತ್ತುವರಿಯೂ ಹೆಚ್ಚಾಗಿಯೇ ಸಾಗುತ್ತಿದೆ. ಹಾಪ್‍ಕಾಮ್ಸ್ ಅಂಗಡಿಗಳಿಗೆ, ಶುದ್ಧ ಕುಡಿಯುವ ನೀರಿನ ಘಟಕಗಳಿಗೆ, ಬೆಂಗಳೂರು ಒನ್ ಕೇಂದ್ರಗಳು, ಲಿಡ್ಕರ್ ಚಪ್ಪಲಿ ಅಂಗಡಿಗಳು, ಇದೀಗ ಇಂದಿರಾ ಕ್ಯಾಂಟೀನ್‍ಗಳಿಗೆ… ಹೀಗೆ ಸರ್ಕಾರವೇ ಯುವಕರ/ಮಕ್ಕಳ ಕ್ರೀಡಾಂಗಣಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿವೆ. ಅಂತಿರುವಾಗ ಆಡಲು ಮಕ್ಕಳಿಗೆ ಜಾಗ ಎಲ್ಲಿ ಬರಬೇಕು

 

 

ಇನ್ನು ಖಾಸಗಿ ಶಾಲೆಗಳಲ್ಲಿ ಕಟ್ಟಡವೇ ಎಲ್ಲ! ಅವರು ಫೀಲ್ಡ್‍ಗಳ ಮೇಲೆ ಇನ್ವೆಸ್ಟ್ ಮಾಡುವುದಿಲ್ಲ. ಒಂದಿಂಚು ಜಾಗವಿದ್ದರೂ ಅಲ್ಲಿ ಕಟ್ಟಡ ನಿರ್ಮಿಸಿ ತರಗತಿ ನಡೆಸುತ್ತಾರೆ. ಈ ಕಾಂಕ್ರೀಟ್ ಕಾಡಿನ ನಡುವೆ ಶಾಲಾ ಮಕ್ಕಳಿಗೆ ಆಡಲು – ಓಡಲು ಫೀಲ್ಡಿಲ್ಲ. ಇದೇ ಪರಿಸ್ಥಿತಿ ನೆರೆಯ ಚೀನಾದಲ್ಲೂ ಇದೆ. ಹಾಗೆಂದು ಅಲ್ಲಿನ ಶಾಲಾ ಆಡಳಿತ ಮಂಡಳಿ ಅಳುತ್ತಾ ಕೂರಲಿಲ್ಲ. ತನ್ನ ಶಾಲೆಯ ಛಾವಣಿಯ ಮೇಲೆ 200 ಮೀಟರ್ ಓಟದ ಟ್ರ್ಯಾಕ್ ನಿರ್ಮಿಸಿ, ಮಕ್ಕಳನ್ನು ಓಡಲು ಬಿಟ್ಟಿದ್ದಾರೆ. ಬಾಜುವಿನಲ್ಲೇ ಬ್ಯಾಸ್ಕೆಟ್ ಬಾಲ್ ಕೋರ್ಟಿದೆ. ಅಪಾಯವಿಲ್ಲದಂತೆ ಉಪಾಯವಾಗಿ ನಿರ್ಮಿಸಿದ್ದಾರೆ.

 

 

ಕಣ್ಣಾರೆ ಕಾಣಬೇಕಿದ್ದರೆ ಚೀನಾದ ಜಿಝಾಂಗ್ ಪ್ರಾಂತ್ಯದ ತಿಯಾಂಥೈಗೆ ತೆರಳಬೇಕು. ಕ್ರೀಡೆಯೂ ಶಿಕ್ಷಣವಾಗಿರುವ ಚೀನೀಯರ ಸಾಹಸದ ಮೇಲ್ನೋಟವಿದು.

ಸರ್ಕಾರಿ ಜಾಗದಲ್ಲೂ ಕೆಳಗೆ ಕಾಂಪ್ಲೆಕ್ಸ್ ಕಟ್ಟಿ ಮೇಲೆ ಫೀಲ್ಡ್ ಮಾಡಿದರೆ ಅದರಿಂದ ಆಡುವ ಮಕ್ಕಳಿಗೆ ಅನುಕೂಲವಾಗಲಿದೆ ಅಲ್ಲವೇ? ಆದರೆ ಬೀಳುವ ಮಕ್ಕಳ ಬಗೆಗೆ ಜಾಗರೂಕತೆಯಿಂದ ನಿರ್ಮಿಸಿದರೆ ನಿಜಕ್ಕೂ ಉತ್ತಮ ನಿರ್ಧಾರವಾಗಲಿದೆ. ಅಭಿವೃದ್ಧಿ ಕಾರ್ಯಗಳ ಮೂಲಕ ತಮ್ಮ ಅಭಿವೃದ್ಧಿ ಮಾಡಿಕೊಳ್ಳುವ ರಾಜಕಾರಣಿಗಳಿಗೂ ಉತ್ತಮ ಆದಾಯ ತರಲಿದೆ!

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top