fbpx
News

ಅಂಜನಿಪುತ್ರ ಪುತ್ರ ಸಿನಿಮಾವನ್ನು ಫೇಸ್ ಬುಕ್ ಲೈವ್ ಮಾಡಿದ್ದವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಹೀಗೆ.

ಅಂಜನಿಪುತ್ರ ಪುತ್ರ ಸಿನಿಮಾವನ್ನು ಫೇಸ್ ಬುಕ್ ಲೈವ್ ಮಾಡಿದ್ದವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಹೀಗೆ.

 

 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅಂಜನಿಪುತ್ರ ಸಿನಿಮಾವನ್ನು ಒಂದು ಗಂಟೆಗೂ ಹೆಚ್ಚು ಕಾಲ ಫೇಸ್ ಬುಕ್ ಲೈವ್ ಮಾಡಿ, ತನ್ನ ತಪ್ಪನ್ನು ಒಪ್ಪಿಕ್ಕೊಂಡ ನಿತೀಶ್ ಪುನೀತ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ .

 

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿತೀಶ್ ಅವರು ”ಚಿತ್ರದ ಲೈವ್ ಮಾಡಿದ್ದು ನಾನಲ್ಲ,ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತನ ಮೊಬೈಲ್ ನಲ್ಲಿ ನನ್ನ ಫೇಸ್ಬುಕ್ ಖಾತೆಯನ್ನು ತೆರೆದಿದ್ದೆ ,ಅದನ್ನು ನನ್ನ ಸ್ನೇಹಿತ ಬಳಸುತ್ತಿದ್ದನು .ಆದರೆ ಆತ ಈ ರೀತಿ ಲೈವ್ ಮಾಡಿರುವುದು ನನಗೂ ಬೇಸರ ತಂದಿದೆ .ವಿಷಯ ತಿಳಿದ ತಕ್ಷಣವೇ ಈ ವಿಡಿಯೋ ವನ್ನು ಫೇಸ್ ಬುಕ್ ಖಾತೆಯಿಂದ ಡಿಲೀಟ್ ಮಾಡಿದ್ದೇನೆ” ಎಂದಿದ್ದಾರೆ.

 

 

ಅಲ್ಲದೆ ಚಿತ್ರದ ಲೈವ್ ಮಾಡುವಾಗ ನಾನು ಸ್ಥಳದಲ್ಲೇ ಇದ್ದೆನು.ಆದರೆ ಲೈವ್ ಮಾಡಿರುವುದು ನಮ್ಮ ತಪ್ಪು ಎಂದು ತಿಳಿದಿದ್ದೇವೆ .ಇನ್ನು ಮುಂದೆ ಈ ರೀತಿ ನಡೆಯುವುದಿಲ್ಲ .ಸಿನಿಮಾ ಲೈವ್ ಮಾಡಿರುವುದರಿಂದ ಅಭಿಮಾನಿಗಳಿಗೆ ತುಂಬ ನೋವಾಗಿದೆ .ರಾಜ್ಯದ ಎಲ್ಲ ಪುನೀತ್ ಅಭಿಮಾನಿಗಳು ಮತ್ತು ಚಿತ್ರ ತಂಡದವರಿಗೆ ಕ್ಷಮೆ ಕೇಳುತ್ತೇವೆ ಎಂದರು.

 

 

 

ನಡೆದ ಘಟನೆ :ಬೆಂಗಳೂರಿನ ಯಲಹಂಕ ಮೂಲದ ನಿತೀಶ್ ಹಾಗೂ ಆತನ ನಾಲ್ಕು ಸ್ನೇಹಿತರು ಸೇರಿ ಅಂಜನಿಪುತ್ರ ಸಿನಿಮಾ ವನ್ನು ಫೇಸ್ಬುಕ್ ಲೈವ್ ಮಾಡಿದ್ದಾರೆ .ಇಂದು ಯಲಹಂಕದ ಉಲ್ಲಾಸ ಚಿತ್ರಮಂದಿರದಲ್ಲಿನ ಬೆಳಗ್ಗಿನ ಷೋ ನಲ್ಲಿ ಸುಮಾರು 1 ಗಂಟೆ 10 ನಿಮಿಷಗಳ ಕಾಲ ಸಿನೆಮಾವನ್ನು ಲೈವ್ ತೋರಿಸಿದ್ದಾರೆ .ಈ ಸಂಬಂಧ ಚಿತ್ರತಂಡ ನಿತೀಶ್ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಿದ್ದತೆ ನಡೆಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top