fbpx
News

ಹಣ್ಣು ಕದ್ದ ಸೇನಾ ಅಧಿಕಾರಿಗೆ ಅಮಾನತ್ತಿನ ಶಿಕ್ಷೆ

ಹಣ್ಣು ಕದ್ದ ಸೇನಾ ಅಧಿಕಾರಿಗೆ ಅಮಾನತ್ತಿನ ಶಿಕ್ಷೆ

 

 

ಅಡಿಕೆಯಲ್ಲಿ ಹೋದ ಆನೆ ಕೊಟ್ಟರೂ ಬರಲ್ವಂತೆ ಕನ್ನಡದ ಈ ಗಾದೆ ಇಸ್ರೇಲ್ ದೇಶದ ಸೇನಾ ಕಮಾಂಡರ್‍ಗೆ ತಿಳಿದಿಲ್ಲ. ಹೀಗಾಗಿ ಹಣ್ಣು ಕದ್ದು ಸಿಕ್ಕಿದ್ದು ಮೆದ್ದು ಕಡೆಗೆ ಡಿಸ್‍ಮಿಸ್ ಆಗಿದ್ದಾನೆ.

ಏನಾಯಿತು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೆರುಸಲೇಂನ್ನು ಇಸ್ರೇಲ್ ರಾಜಧಾನಿ ಎಂದು ಘೋಷಿಸಿದ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ಕ್ರಮವಾಗಿ ಸೇನಾ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೂ ಅಲ್ಲೆಲ್ಲಾ ದೊಂಬಿ, ಗಲಭೆಗಳು, ಗಲಾಟೆ ನಡೆದಿವೆ. ಕಾನೂನು ರಕ್ಷಣೆಯ ನೆಪದಲ್ಲಿ ಈ ವೇಳೆ ರಸ್ತೆ ಬದಿಯಲ್ಲಿದ್ದ ತಳ್ಳೋ ಗಾಡಿಯಲ್ಲಿದ್ದ ಹಣ್ಣುಗಳನ್ನು ಕದ್ದಿದ್ದಾರೆ.

 

 

ಪ್ಯಾಲೆಸ್ತೈನ್ ವ್ಯಾಪಾರಿಯ ಹಣ್ಣನ್ನು ಕದ್ದ ಕಾರಣ ಹೆಬ್ರಾನ್ ನ ಪಶ್ಚಿಮ ಪ್ರದೇಶದಲ್ಲಿ ಸೇನಾ ಕಮಾಂಡರ್ ಅನ್ನು ಅಮಾನತು ಮಾಡಲಾಗಿದೆ.

ಕಮಾಂಡರ್ ಹಣ್ಣನ್ನು ಕದಿಯುತ್ತಿರುವ ದೃಶ್ಯಗಳನ್ನು ಪ್ಯಾಲೆಸ್ತೈನ್ ವ್ಯಕ್ತಿಯೊಬ್ಬ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ಕಮಾಂಡರ್ ನನ್ನು ಅಮಾನತು ಮಾಡಲಾಗಿದೆ. ವಿಡಿಯೋದಲ್ಲಿ ಕಮಾಂಡರ್ ಹಣ್ಣಗಳನ್ನು ಕದ್ದು ಸೈನಿಕರಿಗೆ ನೀಡಿರುವ ದೃಶ್ಯಗಳು ಸೆರೆಯಾಗಿವೆ.

 

 

ಈಗ ಏನು ಮಾಡುತ್ತಿದ್ಧಾನೆ ಈ ಕಮಾಂಡರ್? ‘ಕದ್ದ ಹಣ್ಣು ರುಚಿ ಹೆಚ್ಚು – ಹೋದ ಕೆಲಸದಿಂದ ರೋಧನೆ ಹೆಚ್ಚು!’ ಎನ್ನುವ ಗಾದೆ ಹೇಳಿಕೊಂಡು ಅಂಡಲೆಯುತ್ತಿರಬಹುದು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top