fbpx
ಮನೋರಂಜನೆ

ವಿಷ್ಣು ಪುಣ್ಯಭೂಮಿ ವಿಚಾರವಾಗಿ ಕಿಚ್ಚನ ಮನವಿಗೆ ಸ್ಪಂದಿಸಿದ ಸಿಎಂ: ಸಂತಸ ವ್ಯಕ್ತಪಡಿಸಿದ ಸುದೀಪ್.

ವಿಷ್ಣು ಪುಣ್ಯಭೂಮಿ ವಿಚಾರವಾಗಿ ಕಿಚ್ಚನ ಮನವಿಗೆ ಸ್ಪಂದಿಸಿದ ಸಿಎಂ: ಸಂತಸ ವ್ಯಕ್ತಪಡಿಸಿದ ಸುದೀಪ್.

 

 

ವಿಷ್ಣು ಪುಣ್ಯಭೂಮಿಯ ವಿಚಾರವಾಗಿ ನಟ ಕಿಚ್ಚ ಸುದೀಪ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ “ಸಮಾಧಿಯನ್ನು ವರ್ಗಾಯಿಸುವುದು ಬೇಡ, ವಿಷ್ಣುವರ್ಧನ್ ಅವರ ಅವರ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಪುಣ್ಯಭೂಮಿ ಮಾಡಲು ಅವಕಾಶ ಕೊಡಿ. ಈ ಸಮಸ್ಯೆಗೆ ಡಿಸೆಂಬರ್ 30ರೊಳಗೆ ತಾರ್ಕಿಕ ಅಂತ್ಯ ಒದಗಿಸಿಕೊಡಿ” ಎಂದು ವಿಷ್ಣು ಅಭಿಮಾನಿಗಳ ಪರವಾಗಿ ಮಾಡಿಕೊಂಡಿದ್ದ ಮನವಿಗೆ ಸಿಎಂ ಸಿದ್ದರಾಮಯ್ಯ ಶೀಘ್ರವಾಗಿ ಸ್ಪಂದಿಸಿದ್ದು ಸುದೀಪ್ ಸಂತಸ ವ್ಯಕ್ತ ಪಡಿಸಿದ್ದಾರೆ.

 

 

ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಅಭಿವೃದ್ಧಿಯ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಕಾರ್ಯದರ್ಶಿಯವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ ಈ ವಿಚಾರವನ್ನು ಸ್ವತಃ ಕಿಚ್ಚ ಸುದೀಪ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಸಂತೋಷ ವ್ಯಕ್ತಪಡಿಸಿದ್ದಾರೆ. ” ವಿಷ್ಣು ಸರ್ ಅಭಿಮಾನಿಗಳ ಪರವಾಗಿ ನನ್ನ ಕೋರಿಕೆಯನ್ನು ಶೀಘ್ರವಾಗಿ ಪರಿಗಣಿಸಿದ್ದಕ್ಕಾಗಿ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಇದು ನಿಜಕ್ಕೂ ನಮ್ಮೆಲ್ಲರಿಗೂ ವಿಶೇಷವಾದ ಕ್ಷಣವಾಗಿದೆ. #JaiVishnuSir ,,,The Man,, The Lion,,,The Legend.” ಎಂದು ಟ್ವೀಟ್ ಮಾಡಿದ್ದಾರೆ.

 

 

 

 

ಡಿಸೆಂಬರ್ 11ರಂದು ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದ ಸುದೀಪ್ “ವಿಷ್ಣುವರ್ಧನ್ ಅವರ ಸಮಾಧಿಯ ಸ್ಥಳವನ್ನು ಪುಣ್ಯಭೂಮಿ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದರು. ಸ್ಮಾರಕ ಬೇಕಾದ್ರೆ ಮೈಸೂರಿನಲ್ಲಿ ಮಾಡಲಿ ಆದರೆ ವಿಷ್ಣು ಅವರ ಅಂತ್ಯಕ್ರಿಯೆಯಾದ ಸ್ಥಳದಿಂದ ಸಮಾಧಿಯನ್ನು ಸ್ಥಳಾಂತರಗೊಳಿಸುವುದು ಬೇಡ ಸಮಾಧಿ ಜಾಗವನ್ನ ವಿಷ್ಣು ನೆನಪಿನಲ್ಲಿ ಪುಣ್ಯಭೂಮಿ ಅಂತಾ ಅಭಿವೃದ್ಧಿ ಮಾಡಿ.” ಎಂದು ಸುದೀಪ್ ಮನವಿ ಮಾಡಿದ್ದರು.

“ಒಂದು ಕಡೆ ಸ್ಮಾರಕ ಮತ್ತೊಂದು ಕಡೆ ಪುಣ್ಯಭೂಮಿ ಎಂದು ಅಭಿವೃದ್ದಿ ಪಡಿಸುವುದು ಸರ್ಕಾರಿ ನಿಯಮಗಳಿಗೆ ವಿರುದ್ಧವಾಗಿದೆ ಎಂದೆನಿಸಿದರೆ, ಸಮಾಧಿ ಸ್ಥಳದಲ್ಲಿ ಒಂದು ಎಕರೆ ಅಥವಾ ಅರ್ಧ ಎಕರೆ ಜಾಗವನ್ನಾದರೂ ಕೊಟ್ಟರೆ, ಅಭಿಮಾನಿಗಳಾದ ನಾವು ಆ ಸ್ಥಳವನ್ನ ಖರೀಧಿಸಿ ಅಭಿವೃದ್ಧಿ ಪಡಿಸುತ್ತೇವೆ..ಇದೆ ವೇಳೆ ಸ್ಮಾರಕ ಕಾರ್ಯ ತಡವಾಗುವುದು ಬೇಡ ಈಗಾಗಲೇ 8 ವರ್ಷಗಳಾದರೂ ವಿಷ್ಣು ಸ್ಮಾರಕ ಯೋಜನೆ ನೆನೆಗುದಿಗೆ ಬಿದ್ದಿದ್ದು ಆದಷ್ಟು ಬೇಗ ಸ್ಮಾರಕದ ಕಾರ್ಯವು ನಡೆಯಬೇಕು” ಎಂದು ಸುದೀಪ್ ಹೇಳಿದ್ದರು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top